Lakshmeesha Tholpadi
ಆನಂದಲಹರೀ
ಆನಂದಲಹರೀ
Publisher - ಅಭಿನವ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 340
Type - Paperback
ಬಹುಧ್ವನಿಯ ಕಥನವಿಧಾನವೂ ಮತ್ತು ಅರ್ಥಕ್ಕೆ ತಲುಪುವ ಅವಸರವಿಲ್ಲದ ಓದಿನ ಕ್ರಮವೂ ಕೇವಲ ತೋಳ್ಪಾಡಿಯವರ ವ್ಯಕ್ತಿವಿಶಿಷ್ಟತೆಯಾಗಲೀ ಅಥವಾ ಅವರ ಬಹುಶ್ರುತ ಪಾಂಡಿತ್ಯದಿಂದ ಹುಟ್ಟಿದ ಅಂತರ್ ಪಠ್ಯೀತೆಯಾಗಲಿ ಮಾತ್ರವೇ ಅಲ್ಲ ಎಂಬುದನ್ನು ನಾವು ಅಗತ್ಯವಾಗಿ ಗಮನಿಸಬೇಕು. ನನಗನ್ನಿಸುವಂತೆ ಅದು, ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಲ್ಲದೆಯೋ, ಅವರು ಇವತ್ತಿನ ಕಾಲದೇಶದ ಅಗತ್ಯಗಳಿಗೆ ಪ್ರತಿಸ್ಪಂದಿಯಾಗಿ ಕಟ್ಟುತ್ತಿರುವ ಒಂದು ಕಥನವಿಶೇಷ. ಹೇಳಿಕೇಳಿ ನಾವು ಬದುಕುತ್ತಿರುವ ಈ ಕಾಲವು ವಿಶೇಷಜ್ಞರ ಯುಗ – ಇಂಥ ವಿಶೇಷಜ್ಞರ ಜಗತ್ತಿನಲ್ಲಿ ಧರ್ಮದ ಅಧ್ಯಯನ ಮಾಡುತ್ತಿರುವಾತ ಕಾವ್ಯಧ್ವನಿಯ ಕುರಿತು ಮಾತನಾಡಿದರೆ, ಅಥವಾ, ಅರ್ಥಶಾಸ್ತ್ರಜ್ಞನೊಬ್ಬ ಸಂಗೀತದ ಕುರಿತು ಪುಸ್ತಕ ಬರೆದರೆ, ಅದು ಹೃದಯ ತಜ್ಞನೊಬ್ಬ ಮೂತ್ರಪಿಂಡದ ಶಸ್ತ್ರಚಿಕಿತ್ಸೆ ಮಾಡುವಷ್ಟೇ ಅನರ್ಥಕಾರಿಯೆಂದು ಇವತ್ತಿನ ನಮ್ಮ ಸಾಮಾನ್ಯ ಜ್ಞಾನ ಭಾವಿಸಿಕೊಂಡಿದೆ. ಆದರೆ, ಭಾರತದ ಬಹುತೇಕ ಸಾಂಪ್ರದಾಯಿಕ ಪಠ್ಯಗಳನ್ನು ಇಂಥ ಸೀಮಿತ ವ್ಯಾಪ್ತಿಯ ವಿಶೇಷಜ್ಞತೆಯಿಂದ ಓದುವುದಕ್ಕಿಂತ, ಎಲ್ಲ ಮನೋಮಾರ್ಗಗಳಿಗೂ ತೆರೆದ ಕಣ್ಣುಗಳನ್ನಿಟ್ಟುಕೊಂಡ ಶ್ರದ್ದೆಯಿಂದ ಮತ್ತು ತೀರ್ಮಾನಕ್ಕೆ ತಲುಪುವ ತುರ್ತಿಲ್ಲದ ರಸಭಿಜ್ಞತೆಯಿಂದ ಓದುವುದೇ ಹೆಚ್ಚು ಲಾಭದಾಯಕ ಮಾತ್ರವಲ್ಲ, ಇದೇ ಈ ಸಂಪ್ರದಾಯಗಳ ಬಹುತ್ವವನ್ನೂ ಪರಸ್ಪರತೆಯನ್ನೂ ಅರಿಯುವ ಏಕೈಕ ದಾರಿ – ಎಂಬ ಒಂದು ಸೂಕ್ಷ್ಮ ಸಂದೇಶವನ್ನು ತೋಳಾಡಿಯವರ ಈ ಕಥನವಿಶೇಷವು ಅವ್ಯಕ್ತವಾಗಿ ಹೇಳುತ್ತಿದೆಯೆಂದು ನಾನು ತಿಳಿಯುತ್ತೇನೆ. ಆದ್ದರಿಂದಲೇ, ಮೇಲ್ನೋಟಕ್ಕೆ ಸಿದ್ಧಾಂತದ ಹಂಗಿಲ್ಲದಂತೆ ಕಾಣುವ ತೋಳಾಡಿಯವರ 'ಎ-ಪೊಲಿಟಿಕಲ್' ನಿಲುವಿನೊಳಗೆ ಗಹನವಾದ ಒಂದು ಅಂತರ್ಗತವಾಗಿದೆ ಎಂಬುದು ನನ್ನ ನಂಬಿಕೆ. ಕಥನರಾಜಕಾರಣವು
-ಕೆ. ವಿ. ಅಕ್ಷರ (ಮುನ್ನುಡಿಯಿಂದ)
Share
Subscribe to our emails
Subscribe to our mailing list for insider news, product launches, and more.