Skip to product information
1 of 2

Alaka Kattemane

ಅಮ್ಮ ಹೇಳುವ ಚಂದದ ಕಥೆಗಳು

ಅಮ್ಮ ಹೇಳುವ ಚಂದದ ಕಥೆಗಳು

Publisher - ವಿಸ್ತಾರ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 144

Type - Paperback

ಇದೊಂದು ಪುಟ್ಟ ಮಾವಿನ ಹಣ್ಣಿನ ಕತೆ ದೊಡ್ಡ ಮಾವಿನ ಮರ. ಅದರಲ್ಲಿ ಪುಟ್ಟ ಪುಟ್ಟ ಹೂಗಳು ಬಿಟ್ಟವು. ಹೂವೊಂದು ಕಾಯಾಯಿತು. ನಿಧಾನವಾಗಿ ದೊಡ್ಡದಾಯಿತು, ಅದರ ಮೈಬಣ್ಣ ನಿಧಾನವಾಗಿ ಹಳದಿಗೆ ತಿರುಗಲು ಆರಂಭವಾಯಿತು.

ಆಗ ಅದಕ್ಕೆ ಚಿಂತೆ ಆರಂಭವಾಯಿತು- ನಾನು ಇನ್ನೂ ದೊಡ್ಡದಾಗಿಬಿಟ್ಟರೆ ಈ ಕೊಂಬೆ ನನ್ನ ಭಾರವನ್ನು ತಡೆದುಕೊಳ್ಳಲಾರದು. ನಾನು ನೆಲಕ್ಕೆ ಬಿದ್ದುಬಿಡುತ್ತೇನೆ. ಹಣ್ಣಾಗಿಬಿಟ್ಟರೆ ನನ್ನ ಹೊಳೆಯುವ ಹಸಿರು ಬಣ್ಣ ಹೋಗಿ ಬಿಡುತ್ತದೆ. ಆಗ ಯಾರೂ ನನ್ನ ಬಳಿ ಬರುವುದಿಲ್ಲ.

ಅದು ಯೋಚಿಸಿದಂತೆಯೇ ಆಯಿತು. ಮಾವು ದೊಡ್ಡದಾದಾಗ ಕೊಂಬೆ ಅದನ್ನು ಆಧರಿಸಲಿಲ್ಲ. ಹಣ್ಣು ನೆಲಕ್ಕೆ ಬಿತ್ತು. ಹಕ್ಕಿಗಳು ಅದನ್ನು ಕುಕ್ಕಿ ತಿರುಳನ್ನು ತಿಂದು ಓಟೆಯನ್ನು ಮಾತ್ರ ಉಳಿಸಿದವು. ಇದು ತನ್ನ ತಾಯಿ ಮರವನ್ನು ದುಃಖದಿಂದ ನೋಡಿತು. "ಅಮ್ಮಾ, ನನಗೆ ಇದು ಶಿಕ್ಷೆಯೇ?" ಎಂದು ಕೇಳಿತು. “ಅಲ್ಲ ಮಗೂ, ನೀನು ಸಿಹಿಯಾಗಿರುವೆ, ಆದ್ದರಿಂದಲೇ ಎಷ್ಟೊಂದು ಜನ ನಿನ್ನಿಂದ ಸವಿಯನ್ನು ಉಂಡರು. ಈಗ ನೀನು ಮಣ್ಣು ಸೇರಿ ನಿನ್ನಂಥ ಇನ್ನಷ್ಟು ಪರೋಪಕಾರಿಗಳಿಗೆ ಜನನಿಯಾಗುವೆ" ಎಂದು ಮರ ಹೇಳಿತು. ಹಾಗೇ ಆಯಿತು. ಓಟೆ ಮಣ್ಣಿನಡಿ ಸೇರಿ ಮೊಳಕೆಯೊಡೆಯಿತು. ಗಿಡವಾಗಿ, ಮರವಾಗಿ, ಸವಿಯಾದ ಹಣ್ಣುಗಳನ್ನು ಬಿಡತೊಡಗಿತು.
ಕಷ್ಟಗಳು ನಮಗೆ ಮರುಜನ್ಮ ನೀಡುತ್ತವೆ.

(ಇಂಥ ಇನ್ನಷ್ಟು ಕತೆಗಳು ಈ ಪುಸ್ತಕದೊಳಗಿವೆ!).

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)