1
/
of
2
Geeta Shreenivas
ಅಲ್ಪಾಯುಷಿ ಮಹಾನ್ ಸಾಧಕರು - 2
ಅಲ್ಪಾಯುಷಿ ಮಹಾನ್ ಸಾಧಕರು - 2
Publisher - ಸಪ್ನ ಬುಕ್ ಹೌಸ್
Regular price
Rs. 85.00
Regular price
Rs. 85.00
Sale price
Rs. 85.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages - 124
Type - Paperback
Couldn't load pickup availability
''ಅಲ್ಪಾಯುಷಿ ಮಹಾನ್ ಸಾಧಕರು - 1 (ಸಂಗೀತಗಾರರು) ಈಗಾಗಲೇ ಎಲ್ಲರಿಗೂ ಪರಿಚಿತವಾಗಿದೆ. ಈಗ 'ಅಲ್ಪಾಯುಷಿ ಮಹಾನ್ ಸಾಧಕರು-2' ತಮ್ಮ ಮುಂದಿದೆ. ಇದರಲ್ಲೂ 40 ವರ್ಷಕ್ಕೆ ಅಥವಾ ಅದಕ್ಕಿಂತ ಮುಂಚೆ ಸಾವನಪ್ಪಿದ ಪ್ರತಿಭಾವಂತ ಸಾಧಕರ ಜೀವನದ ಬಗ್ಗೆ ಹಲವಾರು ವಿಷಯಗಳಿವೆ. ಇಂತಹ ಯಶಸ್ವೀ ವ್ಯಕ್ತಿಗಳ ಸಾಧನೆಗಳನ್ನು ನೋಡಿದಾಗ ಒಂದು ಪ್ರಶ್ನೆ ಮನಸ್ಸಲ್ಲಿ ಮೂಡುತ್ತದೆ: ಇವರಿಗೆ ಹೆಚ್ಚು ಆಯಸ್ಸಿಗೆ ಬದಲಾಗಿ ಪ್ರತಿಭೆ, ಬುದ್ಧಿವಂತಿಕೆ ಸಿಕ್ಕಿತೆ? ಸಾವಿರಾರು ಜನರು 80-90 ವರ್ಷಗಳ ಕಾಲ ಬದುಕಿದರೂ ಏನನ್ನೂ ವಿಶೇಷವಾಗಿ ಸಾಧಿಸದೆ ಪ್ರಾಣಿ ಪಕ್ಷಿಗಳಂತೆ ಬದುಕಿ ಹೋಗುತ್ತಾರೆ. ಆದರೆ ಕೆಲವು ಮಂದಿ ತಮಗೆ ಸಿಕ್ಕ ಅಲ್ಪ ಸಮಯವನ್ನೇ ಚೆನ್ನಾಗಿ ಬಳಸಿ ಒಳ್ಳೆಯ ಕಾರ್ಯಗಳನ್ನು ಮಾಡಿ ಜನರ ಮನಸ್ಸಿನಲ್ಲಿ, ಹೃದಯದಲ್ಲಿ ಜಾಗವನ್ನು ಮಾಡಿಕೊಂಡು ಹೋಗುತ್ತಾರೆ. ಅಂತಹವರು ಇನ್ನೂ ಹೆಚ್ಚು ಕಾಲ ಬದುಕಿದ್ದರೆ ಇನ್ನೂ ಹೆಚ್ಚು ಸಾಧನೆಯನ್ನು ಮಾಡುತ್ತಿದ್ದರೇ ಎನ್ನುವ ಯೋಚನೆ ಒಮ್ಮೆ ಮೂಡುತ್ತದೆ. ಏನೇ ಆಗಲಿ, ದೀಪ, ಎಣ್ಣೆ, ಬತ್ತಿ, ಬೆಂಕಿ ಇವುಗಳು ಸಿಕ್ಕಾಗ ಆದಷ್ಟು ಹೊತ್ತು ದೀಪ ಬೆಳಗಿ ಜಗತ್ತಿಗೆ ಬೆಳಕನ್ನು ಕೊಡಬೇಕೆಂದು ಆಸೆ ಇರುತ್ತದೆ. ಅದಾಗದಿದ್ದಾಗ ಆ ನಾಲ್ಕೂ ಪದಾರ್ಥಗಳ ಸದುಪಯೋಗವಾಗಲಿಲ್ಲವಲ್ಲ ಎಂಬ ವಿಶಾದವಿರುತ್ತದೆ. ಈ ಪುಸ್ತಕದಲ್ಲಿ ಚರ್ಚಿತವಾಗಿರುವ ಎಲ್ಲಾ ವ್ಯಕ್ತಿಗಳೂ ಹಲವಾರು ವಿಶೇಷತೆಗಳನ್ನು, ಬುದ್ಧಿವಂತಿಕೆಯನ್ನು ಮತ್ತು ಧೈರ್ಯ ಕಾಲವನ್ನು ಹೊಂದಿದವರಾಗಿದ್ದರು. ಅವರ ಸಾಧನೆಗಳ ಬಗ್ಗೆ ನಾವು ತಿಳಿದುಕೊಂಡು ಆದಷ್ಟು ನಾವೂ ಕೂಡ ಅವರಂತೆ ಸಮಯದ ಸದುಪಯೋಗವನ್ನು ಪಡೆದು ಕೊಂಡು ಜೀವನವನ್ನು ಪಾವನಮಾಡಿಕೊಳ್ಳೋಣ, ಅವರ ಕಾರ್ಯಗಳನ್ನು ನೆನಪಿಸಿಕೊಂಡು ಅವರಿಗೆ ಕೃತಜತೆಗಳನ್ನು ಅರ್ಪಿಸೋಣ.
Share


Subscribe to our emails
Subscribe to our mailing list for insider news, product launches, and more.