Shilpi Virupaksha Aruchala
ಅಲ್ಲಮ ಪ್ರಭು ಮತ್ತು ಶಿಶುನಾಳ ಸರೀಫರು
ಅಲ್ಲಮ ಪ್ರಭು ಮತ್ತು ಶಿಶುನಾಳ ಸರೀಫರು
Publisher - ರವೀಂದ್ರ ಪುಸ್ತಕಾಲಯ
- Free Shipping Above ₹250
- Cash on Delivery (COD) Available
Pages - 672
Type - Hardcover
ಮೌನದ ಮಹತ್ವ, ಮಹಿಮೆ ಹಾಗೂ ಮೌಲ್ಯಗಳು ಜಗದಲ್ಲಿ ಜನಿಸಿದ ಮಹಾನುಭಾವರ ಜೀವನ, ದರ್ಶನ, ಉಪದೇಶಗಳಲ್ಲಿ ಸುಪ್ತವಾಗಿ ಅವ್ಯಕ್ತ, ಅನಿರ್ವಚನೀಯ, ಆನಂತ, ಅಖಂಡ ಸತ್ಯವಾಗಿ ಅಡಗಿದೆ. "ಬಲ್ಲವನೇ ಬಲ್ಲ ಬೆಲ್ಲದ ಸವಿಯ" ಇದು ಸಾಮಾನ್ಯ ಜನರ ಅನುಭವ ವಾಣಿ.
ಬೆಲ್ಲದ ಸವಿಯನ್ನು ಸವಿದ ನಾಲಿಗೆಗೆ ಅದನ್ನು ಶಬ್ದ ರೂಪದಲ್ಲಿ ವ್ಯಕ್ತ ಪಡಿಸಿ ಇತರರಿಗೆ ಸವಿಯನ್ನು ಉಣಿಸುವ ಶಕ್ತಿಯಿಲ್ಲ. ಆದ್ದರಿಂದ ಬೆಲ್ಲದ ಸವಿಯನ್ನು ಸ್ವಯಂಭುವಾಗಿ ಸವಿದಾಗ ಮಾತ್ರ ಅದರ ಮಧು ಸವಿಯು ನಮಗೆ ವೇದ್ಯವಾಗುತ್ತದೆ. ಅದನ್ನು ಶಬ್ದಗಳಿಂದ ವೇದಿಸಲಾಗುವುದಿಲ್ಲ. ಆದರೆ ಅದನ್ನು ಸವಿದವರ ಭಾವ ಲಕ್ಷಣಗಳಿಂದ ಅವರು ಸವಿದಿರುವ ಪದಾರ್ಥದ ಸವಿಯನ್ನು ಭಾವಿಸಬಲ್ಲ ಸಾಮರ್ಥ್ಯವು ಸಕಲ ಜೀವಾತ್ಮರಲ್ಲೂ ಸಹಜವಾಗಿ "ಪ್ರತ್ಯಭಿಜ್ಞತೆ'ಯಾಗಿ ಅಡಗಿರುತ್ತದೆ.
ಅವ್ಯಕ್ತ-ವ್ಯಕ್ತ, ನಿರಾಕಾರ-ಆಕಾರ, ಶಕ್ತಿ-ವ್ಯಕ್ತಿ, ತತ್-ತತ್ವ, ದೈವ-ಜೀವ, ಪರಮಾತ್ಮ-ಜೀವಾತ್ಮ, ಅಗೋಚರ- ಗೋಚರ ಇತ್ಯಾದಿಗಳು ಮೌನ ಮತ್ತು ಮಾತಿನ ಸ್ವರೂಪವನ್ನು ದರ್ಶಿಸುವ ಉಪಮೆಗಳಾಗಿವೆ. ಇವು ಬಿಲ್ಲು-ಬಾಣದಂತೆ ಅನುಬಂಧಿತವಾಗಿದೆ. ಬಿಲ್ಲು ಇಲ್ಲದ ಬಾಣ ಯಶಸ್ವಿ ಆಯುಧವಾಗಿರಲಾಗದು ಬಾಣವಿಲ್ಲದ ಬಿಲ್ಲು ನಿಷ್ಟ್ರಯೋಜಕ ಆಯುಧವಾಗುವುದು.
ಮೌನವು ಮಾತಿನ ಮೂಲಕ ಮಾತನಾಡುವುದು, ಮಾತುಗಳು ವ್ಯಕ್ತಿಯ ಮೌನದ ಮೌಲ್ಯ ಮಾಪಕಗಳಾಗಿವೆ. ಒಬ್ಬ ವ್ಯಕ್ತಿಯ ಅನುಭಾವವು ಆತನ ಅಂತರ್ಯದಲ್ಲಿನ ಮೌನದ ಅವಧಾನವಾಗಿದೆ. ಈ ಜಗತ್ತಿನ ಮಹಾತ್ಮರು, ಸಂತರು, ದಾರ್ಶನಿಕರು, ಅವಧೂತರು, ಪವಾಡ ಪುರುಷರು, ಜ್ಞಾನಿಗಳು, ಲೋಕೋದ್ಧಾರಕ ಶರಣರೆಲ್ಲರು ಆ ಮೌನವೆಂಬ ಮಹಾ ಬಿಲ್ಲಿನ ಬಾಣಗಳಾಗಿದ್ದಾರೆ.
ಮೌನದ ಅನುಭೂತಿಯೇ ಮಹಾದೇವನ ಸಾಕ್ಷಾತ್ಕಾರ ಅಥವಾ ಆತ್ಮಜ್ಞಾನ ಎನ್ನುತ್ತಾರೆ ಅರುಣಾಚಲದ ಶ್ರೀ ರಮಣ ಮಹರ್ಷಿಗಳು, ಇಂತಹ ಆತ್ಮಜ್ಞಾನಿಗಳು, ಮೌನ ಮಹರ್ಷಿಗಳೆಂದು ಖ್ಯಾತರಾದ ತಮಿಳುನಾಡಿನ ಶ್ರೀ ರಮಣ ಮಹರ್ಷಿಗಳ ಮೇಲೆಯೂ ನಮ್ಮ ಕನ್ನಡದ ಅಲ್ಲಮಪ್ರಭುವಿನ ದಟ್ಟ ಪ್ರಭಾವವಿದೆ ಎನ್ನುವುದು ಒಂದು ವಿಶೇಷ ಸಂಗತಿ.
Share
Subscribe to our emails
Subscribe to our mailing list for insider news, product launches, and more.