Yashaswini S. N.
ಪ್ರಕಾಶಕರು - ಹರಿವು ಬುಕ್ಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ, ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಕೊಂಡು ತಾಯಿಯೊಂದಿಗೆ ಚರ್ಚೆ ಮಾಡುವುದು ಹಾಗೂ ಮಗಳಿಗೆ ಕತೆ ಪುಸ್ತಕಗಳನ್ನು ಓದುವುದು ಇವರಿಗೆ ಇಷ್ಟವಾದ ಕೆಲಸ, ಇವರು ಬರೆದಿರುವ ಕತೆಗಳಿಗೆ ಸ್ಫೂರ್ತಿ ಇವರ ಮಗಳ “ಅಮ್ಮ ಹೊಸ ಕತೆ" ಎಂಬ ಬೇಡಿಕೆ.
ಯಶಸ್ವಿನಿ ಎಸ್ ಎನ್ ಅವರು ಬರೆದ 'ಅಳಿಲು ಸೇವೆ' ಪುಸ್ತಕದಲ್ಲಿ ಚಿನ್ನಿ ಎಂಬ ಪುಟ್ಟ ಹುಡುಗಿಯ ಮುದ್ದಾದ ಕತೆಯಿದ್ದು, ರೆನೆಸಾ ಗುಹಾ ಬಿಡಿಸಿದ ಬಣ್ಣ ಬಣ್ಣದ ಚಿತ್ರವಿರುವ ಈ ಪುಸ್ತಕ ಮಕ್ಕಳ ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ.

