Sumangala
Publisher - ಛಂದ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ಯಾವಾಗ ಅವ್ರು ಗದ್ದೆ ಮಾಡಬ್ಯಾಡ ಅಂದರೋ ಆವಾಗ ನಮ್ಮಪ್ಪ ಸಂಜೆ ಮನಿಗೆ ಬಂದು ಹಿಂಗಂದ್ರು ಅಂದ್ರು ಅತ್ತೆಂದರು. ನಮ್ಮಪ್ಪನ ಮನಿಗೆ ಅದೇ ದೊಡ್ಡ ಹೊಡ್ತ ಕೊಟ್ಟದ. ಬೇಲಿ ಮರೇಲಿ ಆ ಕಡೆ ಮರದ ಮ್ಯಾಗೆ ಮಾಡ್ಕಂಡಿದ್ರು, ಹೆಗಲ ಮ್ಯಾಗಿದ್ದ ಟವೆಲ್ಲು ಕುತ್ತಿಗೆಯಾಗೆ ಇತ್ತು.''
''ಎಲ್ಲದಕ್ಕೂ ಕಾರಣ ಇಲ್ಲೇಬೇಕು ಅಂತೂ ಇಲ್ಲಿ ಕಾರಣ ಗೊತ್ತಾದ್ರೂ, ವಾಸ್ತವ ಬದಲಾಗದಿಲ್ಲ, ಅಂಥದೊಂದು ಸಂಬಂಧ ಬ್ಯಾರೆ ಎಲ್ಲೋ ನಿಜ ಆಗದನ್ನು ನೀ ಕಂಡಳಕು ಅಂದ್ರೆ ಮುಂದೆ ಹೋಗ್ತಲೇ ಇರಕು.''
ಬದುಕಿಗೆ ಅಷ್ಟು ಹತ್ತಿರವಿದ್ದ ನೆಲಜಲದ ಅರಿವು ಅನಂತಕಾಲದಲ್ಲಿ ಎಲ್ಲೋ ಹೂತುಹೋಗಿ, ನಂತರದ ಸಮುದಾಯವೊಂದು ಬದುಕಿನ ಮೂಲಭೂತ ಅಗತ್ಯಗಳಿಂದ ವಂಚಿತವಾಗಿ, ಕತ್ತಲಕೂಪದಲ್ಲಿ ಮುಳುಗಿರುತ್ತೆ. ಹೊಸ್ತಿಲಿನಾಚೆ ಬಾಹ್ಯಾಕಾಶದವರೆಗೆ ತಾಂತ್ರಿಕ ಪರಿಣತಿಯ ಏಣಿಯ ಮೆಟ್ಟಲುಗಳಲ್ಲಿ ನಮ್ಮ ಸಮುದಾಯವೊಂದು ಮೇಲೆ ಏರುತ್ತಲೇ ಹೋಗುತ್ತಿರುತ್ತದೆ. ಈ ಕಾದಂಬರಿ ಗ್ರಾಮ್ಯ ಸೊಗಡಿನ ಭಾಷೆ ಮತ್ತು ಸಂಸ್ಕೃತಿಯನ್ನು ತುಂಬಾ ಸೊಗಸಾಗಿ ಚಿತ್ರಿಸುತ್ತದೆ.
