U. R. Ananth Murthy
Publisher - ವಸಂತ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ಸಾಮಾಜಿಕ-ಸಾಂಸ್ಕೃತಿಕ ರಾಜಕೀಯ ಆಯಾಮಗಳನ್ನೂ ಮೀರಿದ ಒಂದು ಬಗೆಯ ತಾತ್ವಿಕ ಶೋಧ ಈ ಸಂಕಲನದ ಸ್ಥಾಯಿ ಗುಣವೆನ್ನಬಹುದು. ಇಲ್ಲಿ ಏನನ್ನೂ ಸ್ಥಾಪಿಸುವ ಧಾವಂತವಿಲ್ಲ. 'ಖಚಿತತೆ', 'ಸ್ಪಷ್ಟತೆ' ಎಂಬುವು ನೇತ್ಯಾತ್ಮಕ, 'ಅನಿಶ್ಚಿತತೆ', 'ಅಸ್ಪಷ್ಟತೆ, 'ದ್ವ೦ದ್ವ' ಎಂಬುವು ನೇತ್ಯಾತ್ಮಕ ಎಂಬ ಗೃಹೀತವನ್ನು ಈ ಸಂಕಲನದ ಕತೆಗಳು ಒಡೆಯುವಂತಿವೆ. ಅಂದರೆ ಇಲ್ಲಿ ಲೇಖಕರು ತಾವು ಈಗಾಗಲೇ ನಂಬಿರುವ ತತ್ವಗಳಿಗೆ, ತಲುಪಿರುವ ತೀರ್ಮಾನಗಳಿಗೆ ಕೇವಲ ಕಥಾರೂಪವನ್ನು ಕೊಡುವ ಉದ್ದೇಶವನ್ನು ಇಟ್ಟುಕೊಂಡಿಲ್ಲ. ಜೀವನ ಸಂದರ್ಭಗಳ ಬಹುಮುಖಿ ಶೋಧದ ಸದ್ಯದ ತುರ್ತಿನ ಪ್ರಕ್ರಿಯೆಯಲ್ಲಿ ಹೊರಹೊಮ್ಮುವ ಸತ್ಯಗಳಿಗೆ, ಅವು ಸಮಕಾಲೀನ ರಾಜಕೀಯ ನಂಬಿಕೆಗಳು ಮತ್ತು ವರ್ತನೆಗಳಿಗೆ ಸಲ್ಲದಿದ್ದರೂ, ತೆರೆದುಕೊಳ್ಳುವ ಎದೆಗಾರಿಕೆ ಈ ಕತೆಗಳಲ್ಲಿ ಕಂಡುಬರುತ್ತದೆ. ಪರಸ್ಪರ ತದ್ವಿರುದ್ಧವೆನ್ನಿಸುವ ಹಲವು ಸಂಗತಿ-ಸಂದರ್ಭ-ಪಾತ್ರಗಳನ್ನು ಸಮಾನ ಕುತೂಹಲ ಮತ್ತು ಸಹಾನುಭೂತಿಗಳಿಂದ ಹಲವು ನೆಲೆಗಳಲ್ಲಿ ಪರಿಶೀಲಿಸಿ ಪರಿಭಾವಿಸಿಕೊಳ್ಳುತ್ತಾ ಈ ಪ್ರಕ್ರಿಯೆಯನ್ನೇ ಓದುಗರ ಮುಂದೆ ಒಡ್ಡಿಕೊಳ್ಳುವುದು ಇಲ್ಲಿನ ಕತೆಗಳ ವಿನ್ಯಾಸವೆನ್ನಬಹುದು.
