Dr. B. S. Shylaja
Publisher - ನವಕರ್ನಾಟಕ ಪ್ರಕಾಶನ
Regular price
Rs. 225.00
Regular price
Rs. 225.00
Sale price
Rs. 225.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ತಾರಾಲಯಕ್ಕೆ ಬರುವ ದೂರವಾಣಿ ಕರೆಗಳ ಕೆಲವು ಉದಾಹರಣೆಗಳು. 'ಪೂರ್ವದಲ್ಲಿ ಧೂಮಕೇತು ಕಾಣುತ್ತದೆ ಎಂದು ಪತ್ರಿಕೆಯಲ್ಲಿದೆ. ಬೆಂಗಳೂರಲ್ಲಿ ಪೂರ್ವ ಯಾವುದು ?”, “ಆಕಾಶದಲ್ಲಿ ಬೆಳ್ಳಗೆ ಈಗ (ಸಂಜೆ ನಾಲ್ಕು ಗಂಟೆಗೆ) ಕಾಣ್ತಾ ಇದೆ; ಅದೇನಾ ಧೂಮಕೇತು ? “ಧೂಮಕೇತು ನೋಡಲು ಬೆಂಗಳೂರು ಈಸ್ಟ್ ರೈಲ್ವೇ ಸ್ಟೇಷನ್ಗೆ ಹೋಗಬೇಕೆ ?”, “ಐದೂವರೆ ಅಂದ್ರೆ ಬೆಳಿಗ್ಗೇನೋ ಸಾಯಂಕಾಲಾನೋ... ಅಷ್ಟು ಬೇಗ ಏಳೋಕ್ಕಾಗೋಲ್ಲ... ಎಂಟು ಗಂಟೆಗೆ ಕಾಣೋಲ್ಲವೇ ?... ಯಾಕೆ?”, “ನಿಮ್ಮತ್ರ ಟೆಲಿಸ್ಕೋಪು ಇದೆಯಲ್ಲಾ; ಈಗ (ಮಧ್ಯಾಹ್ನ ಒಂದು ಗಂಟೆ) ನೋಡಬಹುದಾ ?”, “ಗ್ರಹಣ ನೋಡಿದ್ರೆ ಸ್ನಾನ ಮಾಡ್ಬೇಕು ಅಂತಾರೆ; ಧೂಮಕೇತು ನೋಡಿದ್ರೂ ಸ್ನಾನ ಮಾಡೇಕಾ ?”, ಬೆಂಗಳೂರಿನ ಹೊರಗಿನಿಂದ ಬರುವ ಕರೆಗಳು ಬೇರೆ ರೀತಿಯವು. “ಗ್ರಹಣ ಕೊಹಿಮಾಗೆ ಕಾಣುತ್ತದೆಯಂತೆ; ನಮಗೇಕಿಲ್ಲ ?" “ಚಂದ್ರನ ಪಕ್ಕ ಒಂದು ಪ್ರಕಾಶಮಾನವಾದ ಚುಕ್ಕೆ ಮೊನ್ನೆ ಇತ್ತು ; ಈಗ ಏಕಿಲ್ಲ?” “ನಮ್ಮ ದೂರದರ್ಶಕದಲ್ಲಿ ಧೂಮಕೇತುವಿನ ಬಾಲ ಏಕೆ ಕಾಣೋಲ್ಲ ?", “ಒಂದು ನಕ್ಷತ್ರ ವಿಮಾನದಷ್ಟು ಬೇಗ ಓಡಿ ಹೋಗ್ತಾ ಇತ್ತು; ಅದು ಹೇಗೆ ಸಾಧ್ಯ ?” – ಈ ಪ್ರಶ್ನೆಗಳಿಗೆಲ್ಲಾ ಮೂಲ ಕಾರಣ - ಒಂದೇ. ಎಂದೂ ತಲೆ ಎತ್ತಿ ಆಕಾಶವನ್ನೇ ನೋಡದಿರುವುದು! ಕಳೆದುಹೋಗಿರುವ ಆಕಾಶಜ್ಞಾನವನ್ನು ಪುನರಾವರ್ತನೆ ಮಾಡುವುದೇ ಈ ಪುಸ್ತಕದ ಉದ್ದೇಶ.
