Skip to product information
1 of 2

T. S. Goravara

ಆಡು ಕಾಯೋ ಹುಡುಗನ ದಿನಚರಿ

ಆಡು ಕಾಯೋ ಹುಡುಗನ ದಿನಚರಿ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 70

Type - Paperback

ಭಾರತದಲ್ಲಿ ಬಡವರ ಬದುಕಿನಲ್ಲಿ ನಡೆಯುವ ಎಲ್ಲವೂ ಆಕಸ್ಮಿಕವೇನೋ. ಜೀತಗಾರನೊಬ್ಬನ ಮಗ ಆಡು ಕಾಯುತ್ತಾ ಬೆಳೆದ. ಬಡತನ ಮುತ್ತಿದ ಮನೆಯ ಹಿಂಸೆ, ಕಷ್ಟಗಳ ನಡುವೆಯೂ ಅಪ್ಪ, ಅವ್ವ ಹಲ್ಲುಕಚ್ಚಿ ಬೇರೆಯವರೆದುರು ಬೇಡದೆ ವಿಚಿತ್ರ ಸ್ವಾಭಿಮಾನದಿಂದ, ಘನತೆಯಿಂದ ಬದುಕಲೆತ್ನಿಸುತ್ತಿದ್ದುದನ್ನು ದಿನನಿತ್ಯ ಕಂಡ. ಕೂಲಿಗೆ ಹೋಗುವ ತಾಯಿಯ ಸ್ಥಿತಿಯ ಮೂಲಕ ಇಡೀ ಉತ್ತರ ಕರ್ನಾಟಕದ ಕೂಲಿಕಾರ ಹೆಂಗಸರ ಕಷ್ಟವನ್ನು ಅರಿಯತೊಡಗಿದ. ಈ ಸ್ಥಿತಿಯ ಹೊರತಾಗಿ ಬೇರೆ ಯಾವ ಸಾಧ್ಯತೆಯೂ ಇಲ್ಲದ, ಆ ಸಾಧ್ಯತೆಯ ಬಯಕೆ ಕೂಡ ಹುಟ್ಟಲಾರದ ಕಾಲದಲ್ಲಿ ಹುಡುಗ ಶಾಲೆಯ ಕಠಿಣ ಶ್ರಮದಿಂದ ಎಮ್ಮೆ ಕಾಯುವ ಬಯಲಿನ ಸ್ವಾತಂತ್ರ್ಯಕ್ಕೆ ಓಡಲು ಹಾತೊರೆಯುತ್ತಲೇ ಇದ್ದ.

ಆ ಹೊತ್ತಿನಲ್ಲಿ ಆಕಸ್ಮಾತ್ ನಾಟಕವೊಂದರಲ್ಲಿ ಭಾಗವಹಿಸಿದ್ದೇ ಅವನ ಜೀವನದ ತಿರುವಿಗೆ ಕಾರಣವಾಯಿತು. ಡಾಕ್ಟರೊಬ್ಬರು ಅವನನ್ನು ಓದಿನ ಲೋಕದತ್ತ ಹೊರಳಿಸಿದರು. ಪುಸ್ತಕಗಳ ಸ್ಪರ್ಶದಿಂದ ಎಲ್ಲೋ ಅವನೊಳಗಿದ್ದ ಸೃಜನಶೀಲತೆಯ ಸಣ್ಣ ಕಿಡಿ ಹತ್ತಿ ಪದ್ಯ ಬರೆದ. ಮುಂದೊಮ್ಮೆ ಕತೆಗಾರನಾಗುವ ಊಹೆ ಕೂಡ ಮಾಡಲಾಗದ ಗೊರವರ್‌ಗೆ ಈ ಎಲ್ಲ ಲೋಕಗಳ ನೆನಪಿನ ಕೋಶವೇ ಮುಂದೊಮ್ಮೆ ಕತೆಗಳನ್ನು ಬರೆಸತೊಡಗಿತೇನೋ. ಆ ಮೂಲ ದ್ರವ್ಯವೇ ಇದೀಗ ಈ ನೆನಪಿನ ಕಥನವನ್ನೂ ಬರೆಸಿದೆ.

ಈ ಸ್ವಂತದ ಹಾಗೂ ಸಾಮಾಜಿಕ ನೆನಪುಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಪರಿಚಿತವಲ್ಲದ ಅನುಭವಲೋಕವೊಂದು ವೈವಿಧ್ಯಮಯ ವಿವರಗಳೊಂದಿಗೆ ಈ ಪುಸ್ತಕದ ಮೂಲಕ ಪ್ರವೇಶಿಸಿದೆ. ಗೊರವರ್ ಎಲ್ಲ ವೃತ್ತಿಪರ ಬರಹಗಾರರಂತೆ ಕೊಂಚ ಸ್ವಾರ್ಥಿ ಹಾಗೂ ಜಿಪುಣನಾಗಿದ್ದರೆ, ಈ ನೆನಪುಗಳ ಲೋಕವನ್ನು ಹಾಗೂ ಅದರ ವಿಚಿತ್ರ ಸತ್ಯಗಳನ್ನು ಇನ್ನಷ್ಟು ತಾಳ್ಮೆಯಿಂದ ಶೋಧಿಸಿದ್ದರೆ ಈ ನೆನಪುಗಳ ಸರಣಿಯನ್ನು ಒಂದು ಅಪರೂಪದ ಕಾದಂಬರಿಯಾಗಿಸಬಹುದಾಗಿತ್ತು. ಆದರೇನಂತೆ, ಗೊರವರ್ ಈ ನೇರ ನೆನಪುಗಳಲ್ಲಿ ಹೇಳಲಾಗದ ಹಾಗೂ ಪರೀಕ್ಷಿಸಲಾಗದ ಖಾಸಗಿ ವಿವರಗಳು ಮುಂದೊಂದು ದಿನ ಕಾದಂಬರಿಯಾಗದೆ ಬಿಡಲಾರವು ಎನ್ನಿಸುತ್ತದೆ. ಈ ನಿರೀಕ್ಷೆಯೇ ಈ ಪುಸ್ತಕದ ಮಹತ್ವವನ್ನೂ ಸೂಚಿಸುತ್ತದೆ.ಅನುಭವ ಕಥನ 

-ನಟರಾಜ್ ಹುಳಿಯಾರ್

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)