G. N. Ranganath Rao
ಆ ಪತ್ರಿಕೋದ್ಯಮ.
ಆ ಪತ್ರಿಕೋದ್ಯಮ.
Publisher - ಬಹುರೂಪಿ
Regular price
Rs. 300.00
Regular price
Rs. 300.00
Sale price
Rs. 300.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಹಿರಿಯ ಲೇಖಕರು, ಪತ್ರಕರ್ತರಾದ ಜಿ.ಎನ್. ರಂಗನಾಥ ರಾವ್ ಅವರ ಪತ್ರಿಕೋದ್ಯಮದ ಪಯಣವನ್ನು ಮೆಲುಕು ಹಾಕುವ ಕೃತಿ "ಆ ಪತ್ರಿಕೋದ್ಯಮ" ಬಹುರೂಪಿ ಪ್ರಕಟಿಸಿದೆ. ಪುಸ್ತಕ ಈಗಾಗಲೇ ಮಳಿಗೆಯಲ್ಲಿ ಲಭ್ಯವಿದೆ ಆಸಕ್ತರು ಖರೀದಿಸಬಹುದು.
ಇಲ್ಲಿರುವುದು ನನ್ನ ವೃತ್ತಿ ಜೀವನದ ಕೆಲವು ಪುಟಗಳು. ನಾನು, ನಾನು ಕೈಗೊಂಡ ಪತ್ರಿಕಾ ವ್ಯವಸಾಯ ಮತ್ತು ಆ ಕಾಲಘಟ್ಟದಲ್ಲಿನ ಸಮಾಜದ ನೋಟ, ದನಿಗಳು ಇಲ್ಲಿದೆ ಎಂದು ನನ್ನ ನಮ್ರ ಅನಿಸಿಕೆ. ಜಗತ್ತು ಪತ್ರಿಕಾ ವ್ಯವಸಾಯದ ಆತ್ಮವಿದ್ದಂತೆ, ಪತ್ರಿಕೋದ್ಯಮಕ್ಕೆ 'ಕಾನ್ಶಸ್ ಕೀಪರ್' ಎಂಬ ಅಭಿಧಾನವೂ ಉಂಟಲ್ಲವೆ? ಇದನ್ನು ಆತ್ಮಕಥೆ ಎಂದೇ ಕೆಲವರು ಭಾವಿಸುವುದಾದಲ್ಲಿ ಇದನ್ನು 'ಹೀಗೊಂದು ಲೋಕಾತ್ಮ ಕಥೆ' ಎಂದೂ ತಿಳಿಯಬಹುದು.
ವೃತ್ತಿ ಜೀವನದಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು ವೃತ್ತಿಯ ನೀತಿ ಮತ್ತು ನಿಯಮಗಳು. ಪತ್ರಿಕಾ ಧರ್ಮ, ನೀತಿ (ಪ್ರೊಫೆಷನಲ್ ಎಥಿಕ್ಸ್), ವೃತ್ತಿಪರತೆ, ವೃತ್ತಿ ನಿಷ್ಠೆಗಳು ಕ್ರಮೇಣ ನಶಿಸುತ್ತಾ ಹೋದಂತೆ ನಾನು ನನ್ನ ಸೇವಾ ಅವಧಿಯಲ್ಲಿ ಹಲವಾರು ನೈತಿಕ ಬಿಕ್ಕಟ್ಟುಗಳನ್ನು, ನೈತಿಕ ದ್ವಂದ್ವಗಳನ್ನು ಎದುರಿಸಬೇಕಾಗಿ ಬಂತು. ಅತ್ಯಾಧುನಿಕತೆ ಪತ್ರಿಕಾ ವ್ಯವಸಾಯವನ್ನು ಪ್ರವೇಶಿಸಿ, ಅದು ಪತ್ರಿಕೋದ್ಯಮವಾಗಿ ಈಗಿನ ಕಾರ್ಪೊರೇಟ್ ಸ್ವರೂಪವನ್ನು ಪಡೆದುಕೊಂಡ ಮೇಲಂತೂ ಅದರ ಎಲ್ಲ ಅಧಿಕಾರಮದ, ಧನಮದಗಳು ಪತ್ರಕರ್ತರ ಎದೆಯ ಭಾರವಾದವು. ಈ ಭಾರಕ್ಕೆ ಪತ್ರಿಕಾ ಧರ್ಮ, ನೀತಿಗಳು ಕುಸಿಯತೊಡಗಿದವು. ಈ ಪರಿಸ್ಥಿತಿ ಸೃಷ್ಟಿಸಿದ ನೈತಿಕ ಬಿಕ್ಕಟ್ಟುಗಳು, ದ್ವಂದ್ವಗಳು ನನ್ನ ಅಂತಃಕರಣಕ್ಕೆ ಇಳಿದು ಸುಪ್ತಪ್ರಜ್ಞೆಯಲ್ಲಿ ಅಡಗಿ ಕಳಿತು ವಿವಿಧ ರೀತಿಯಲ್ಲಿ ಕಾಡತೊಡಗಿದವು. ಬಿನ್ನಹಕ್ಕೆ ಬಾಯಿ ಇದೆ, ಆದರೆ, ಮಾರ್ಗವಿಲ್ಲ ಎನ್ನುವಂಥ ಸ್ಥಿತಿ.
-(ಅರಿಕೆಯಿಂದ)

Share
Subscribe to our emails
Subscribe to our mailing list for insider news, product launches, and more.