Dr. Bimal Chajar
ತೂಕ ಇಳಿಸಲು 201 ಸಲಹೆಗಳು
ತೂಕ ಇಳಿಸಲು 201 ಸಲಹೆಗಳು
Publisher - ಸಪ್ನ ಬುಕ್ ಹೌಸ್
Regular price
Rs. 140.00
Regular price
Rs. 140.00
Sale price
Rs. 140.00
Unit price
/
per
- Free Shipping Above ₹250
- Cash on Delivery (COD) Available
Pages - 175
Type - Paperback
ಜಗತ್ತಿನಾದ್ಯಂತ ಬೊಜ್ಜು ಎನ್ನುವುದು ಒಂದು ಬಹುದೊಡ್ಡ ಆರೋಗ್ಯ ಸಮಸ್ಯೆ. ಇದು ವಿಶೇಷವಾಗಿ ಶ್ರೀಮಂತರ ಸಮಸ್ಯೆ. ಕೊಬ್ಬಿನಾಂಶವುಳ್ಳ ಆಹಾರ, ಅತಿಯಾದ ಎಣ್ಣೆ ಪದಾರ್ಥಗಳ ಸೇವನೆ, ಬೇಕರಿ ಆಹಾರಗಳನ್ನು ಮಿತಿ ಇಲ್ಲದೆ ತಿನ್ನುವಿಕೆ, ಬೊಜ್ಜಿನ ಸಮಸ್ಯೆಗೆ ಮೂಲಕಾರಣ. ಶರೀರ ಶ್ರಮವಿಲ್ಲದ ಅನಾಯಾಸ ಜೀವನ ಕ್ರಮ, ವ್ಯಾಯಾಮಕ್ಕೆ ವೇಳೆ ಇಲ್ಲದಿರುವಿಕೆ ಇವುಗಳೂ ಸಹ ಈ ಸಮಸ್ಯೆಗೆ ಪೂರಕಗಳಾಗಿವೆ. ಬೊಜ್ಜುಳ್ಳವರು ಮತ್ತು ಹೆಚ್ಚು ತೂಕ ಉಳ್ಳವರು ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬುದನ್ನು ತಿಳಿದುಕೊಂಡಿರಬೇಕು. ಆಹಾರದಲ್ಲಿರುವ ಕ್ಯಾಲೊರಿ ಪ್ರಮಾಣಗಳ ಬಗ್ಗೆ ಪರಿಪೂರ್ಣವಾದ ಶಿಕ್ಷಣ ಪಡೆದುಕೊಳ್ಳಬೇಕು. ಯಾವ ಯಾವ ಆಹಾರ ತೆಗೆದುಕೊಳ್ಳಬೇಕು, ಯಾವ ಯಾವ ಆಹಾರ ತೆಗೆದುಕೊಳ್ಳಬಾರದೆಂಬುದರ ಜ್ಞಾನ ಸಮಸ್ಯೆಗೆ ಪರಿಹಾರ ಒದಗಿಸಬಲ್ಲುದು. ಆಹಾರವೇ ಅನೇಕ ಕಾಯಿಲೆಗಳ ಉಗಮಕ್ಕೆ ಕಾರಣ. ಆದ್ದರಿಂದ 10 ರಿಂದ 20 ಕೆ.ಜಿ. ತೂಕ ಇಳಿಸಲು ಯಾವ ಯಾವ ಆಹಾರ ತೆಗೆದುಕೊಳ್ಳಬೇಕು ಮತ್ತು ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕೆಂಬುದನ್ನು ಅರಿತುಕೊಂಡರೆ ಬೊಜ್ಜು ಮತ್ತು ತೂಕಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ.
Share
Subscribe to our emails
Subscribe to our mailing list for insider news, product launches, and more.