Sampatooru Vishwanath
Publisher - ವಸಂತ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ಅರ್ಥಪೂರ್ಣವಾಗಬೇಕಾದರೆ ಮಾರ್ಗದರ್ಶನ ಅಗತ್ಯ. ಓದು ಬಲ್ಲವರಿಗೆ ಈ ಮಾರ್ಗದರ್ಶನ ಪುಸ್ತಕಗಳಿಂದ. ಆದರೆ, ಓದಲು ತಿಳಿಯದವರಿಗೆ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಹರಿದು ಬರುವ ಅನುಭವಯುಕ್ತ ಆಡುಮಾತಿನಿಂದ ಮಾರ್ಗದರ್ಶನ ಆಗುತ್ತದೆ. ಸಂಕ್ಷಿಪ್ತ, ಧ್ಯೇಯ ವಾಕ್ಯಗಳು 'ಗಾದೆ'ಗಳೆನಿಸಿಕೊಳ್ಳುತ್ತವೆ. ಇಂತಹ ಒಂದು ಸಾವಿರ ಗಾದೆಗಳು, ಸಾರ್ವಕಾಲಿಕ ನೀತಿಚಿಂತಾಮಣಿ ಎನ್ನಿಸಿಕೊಂಡು ನಿಮ್ಮ ಕೈಸೇರಿದೆ. ಪ್ರತಿಯೊಂದು ಗಾದೆಯ ಅರ್ಥ ಮನನಯೋಗ್ಯ. ಬದುಕಿನ ವಿವಿಧ ಹಂತ, ಚಟುವಟಿಕೆ, ತಿಳಿವಳಿಕೆಗಳಿಗೆ ಸಂಬಂಧಿಸಿದ ಈ ಗಾದೆಗಳಿಂದ ಪ್ರತಿಯೊಬ್ಬರೂ ಶಾಂತಿ,ಸಮಾಧಾನಗಳನ್ನು ಕಂಡುಕೊಳ್ಳಲು ಸಾಧ್ಯ.
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾಗಿರುವ ಸಂಪಟೂರು ವಿಶ್ವನಾಥ್ ಈ ಕೃತಿಯನ್ನು ರೂಪಿಸಿಕೊಟ್ಟಿದ್ದು, ಅವರು ಸುಮಾರು 64 ಕೃತಿಗಳನ್ನೂ 2750ನ್ನೂ ಮೀರಿದ ಸಂಖ್ಯೆಯ ಇಂಗ್ಲಿಷ್ ಹಾಗೂ ಕನ್ನಡದ ಲೇಖನಗಳನ್ನೂ ಬರೆದಿರುವ ಅನುಭವಿ ಲೇಖಕರು. ವಿಜ್ಞಾನ, ವ್ಯಕ್ತಿತ್ವ ವಿಕಾಸ, ರಸಪ್ರಶ್ನೆ, ಪ್ರಬಂಧ ಹೀಗೆ ಅನೇಕ ಪ್ರಕಾರಗಳಲ್ಲಿ ಅವರ ಬರವಣಿಗೆ ಹರಿದಿದೆ. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
