Skip to product information
1 of 1

Indiratanaya

ಶಕ್ತಿಪೂಜೆ

ಶಕ್ತಿಪೂಜೆ

Publisher - ಅಂಕಿತ ಪುಸ್ತಕ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 230

Type - Paperback

''ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು...."

''ಸದಾ ಮರವೇರಿ ಕುಳಿತಿರುತ್ತಿದ್ದ ಹುಡುಗ ಕೆಳಗಿಳಿದು ಬಂದು ಬಾಳುವೆ ಮಾಡತೊಡಗಿದೆ..."

ಕಣ್ಣಿನ ದೃಷ್ಟಿಯಿಂದಲೇ ಮೋಹಿತಳಾದ ಹೆಂಗಸೊಬ್ಬಳು ಕಂಡುಕೇಳರಿಯದವನೊಬ್ಬನ ದುರಾಸೆಗೆ ಬಲಿಯಾದಳು..."

- ಇವು ಇವರ ಗ್ರಂಥಗಳಲ್ಲಿರುವ ಅಸಂಖ್ಯಾತ ಘಟನೆಗಳಲ್ಲಿ ಒಂದೆರಡಷ್ಟೆ. ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ, ನಾಗರಿಕತೆಯ ಹೆಸರಿನಲ್ಲಿ, ವಿಜ್ಞಾನದ ಬೆಳಕಿನಲ್ಲಿ ತರ್ಕಕ್ಕೆ ಸಿಕ್ಕದ ಇಂಥ ಘಟನೆಗಳು ಅತೀಂದ್ರಿಯ ಲೋಕವೊಂದನ್ನು ಧ್ವನಿಸುತ್ತವೆ. ಮನುಷ್ಯನ ಎಲ್ಲೆಯಿರದ ಮನಃಶಕ್ತಿಯನ್ನು ಮನವರಿಕೆಮಾಡಿಕೊಡುವ ಇವರ ಕೃತಿಗಳು ಒಂದು ಅರ್ಥದಲ್ಲಿ ಕಾದಂಬರಿ, ಆದರೆ ವ್ಯಾಪಕ ಅರ್ಥದಲ್ಲಿ ಸಂಕಲ್ಪಶಕ್ತಿಯಿಂದ ಪ್ರೇರಿತವಾದ ಮಾನವಮನಸ್ಸಿನ ಸೂಕ್ಷ್ಮಗಳನ್ನು ಆಧಾರಗಳ ಮೂಲಕ ನಿರೂಪಿಸುವ ಅಪೂರ್ವ ಗ್ರಂಥಗಳು. ಕನ್ನಡದಲ್ಲಿ ಈ ಬಗೆಯ ಕಾದಂಬರಿಗಳನ್ನು ಮೊಟ್ಟಮೊದಲಿಗೆ ಬರೆದವರು ಇಂದಿರಾತನಯ, ಅತ್ಯಂತ ಕ್ಲಿಷ್ಟವಾದ ಮಂತ್ರತಂತ್ರ ವಿದ್ಯೆಗಳನ್ನು ಸಮಾಜ ಜೀವನದ ಗಾಜಿನ ಮೂಲಕ ಹಾಯಿಸಿ, ಒಂದು ಗಾಢ ಅನುಭವ ಉಂಟಾಗುವಂತೆ ಮಾಡುವ ಅವರ ಬರವಣಿಗೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರ ಅಪರೂಪವಾದದ್ದು. ನೇರವಾಗಿ ಕತೆ ಹೇಳುವ ಜಾಣ್ಮೆ, ಉದ್ದೇಶಿಸಿರುವುದಕ್ಕಿಂತ ಹೆಚ್ಚು ಧ್ವನಿಸುವ ಪಾರದರ್ಶಕ ಭಾಷೆ, ಪಾತ್ರಗಳ ಅಂತರಂಗವನ್ನು ನಿರಾಯಾಸವಾಗಿ ತೆರೆದಿಡಬಲ್ಲ ಕಲಾತ್ಮಕ ಅಭಿವ್ಯಕ್ತಿ- ಇವುಗಳಿಂದಾಗಿ ಇವರ ಕೃತಿಗಳು ಮತ್ತೆಮತ್ತೆ ಓದಿಸಿಕೊಳ್ಳುವ ಅನನ್ಯ ಕೃತಿಗಳೆನಿಸಿವೆ. ಕಳೆದ ದಶಕಗಳಿಂದ ಇಂದಿರಾತನಯರ ಕೃತಿಗಳ ಜನಪ್ರಿಯತೆ ಒಂದಿಷ್ಟೂ ಕುಗ್ಗಿಲ್ಲ ಎಂದರೆ ಅದು ಅತಿಶಯೋಕ್ತಿ ಖಂಡಿತ ಅಲ್ಲ. ಇಲ್ಲಿ ನಿರೂಪಿತವಾಗಿರುವ ಘಟನೆಗಳು ಮೊದಲ ನೋಟಕ್ಕೆ ಹೆದರಿಕೆ ಹುಟ್ಟಿಸುವಂತಿದ್ದರೂ, ಪುಸ್ತಕ ಓದಿ ಮುಗಿಸಿದಾಗ ಮನಶ್ಯಕ್ತಿಯ ಸಾಧ್ಯತೆಗಳನ್ನು ಮನದಟ್ಟು ಮಾಡಿಕೊಡುವ ಅನುಭವ ಘಟಕಗಳಾಗಿಯೂ ಅವು ಕೆಲಸ ಮಾಡುತ್ತವೆ. ಇಂದಿರಾತನಯ ಕೇವಲ ಕಾದಂಬರಿಕಾರರಲ್ಲ; ಅವರ ಅತೀಂದ್ರಿಯ ಅನುಭವಗಳ ಅಭಿವ್ಯಕ್ತಿಗೆ ಕಾದಂಬರಿ ಪ್ರಕಾರ ಒಂದು ವಾಹಕವಷ್ಟೆ, ಅತೀಂದ್ರಿಯ ಲೋಕವನ್ನು ಕಣ್ಣೆದುರು ತರುವ ಇಂದಿರಾತನಯರ ಕೃತಿಗಳು ಪರಿಪೂರ್ಣ ಕೃತಿಗಳಾಗಿವೆ.

- ಎಸ್. ದಿವಾಕರ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)