Skip to product information
1 of 1

C. R. Mohammed Kudrat

ನಾಂದಿ

ನಾಂದಿ

Publisher - ರವೀಂದ್ರ ಪುಸ್ತಕಾಲಯ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಪೂರ್ವ ಪ್ರಾಥಮಿಕ ಶಾಲಾ ದಿನಗಳಿಂದಲೂ ಕೊನೆಯ ಸಾಲಿನ ಖಾಯಂ ವಿದ್ಯಾರ್ಥಿ ನಾನು. ಶಿಕ್ಷಕರು ಮಾಡುವ ಪಾಠ ಅರ್ಥವಾಗುತ್ತಿರಲಿಲ್ಲ. ಬಸಿರಿನಲ್ಲಿರುವ ಭ್ರೂಣಕ್ಕೆ ಅಮ್ಮ ಅರ್ಥವಾಗುವಳೇನು? ಅಪ್ಪನ ಬಲವಂತಕ್ಕೊ, ಅವರ ಹೊಡೆತಗಳಿಂದ ತಪ್ಪಿಸಿ ಕೊಳ್ಳುವುದಕ್ಕೋ ಬಲವಂತವಾಗಿಯೇ ಶಾಲೆಗೆ ಹೋಗುತ್ತಿದ್ದೆ. ಅಪ್ಪ ನನಗೂ, ನಾನು ಅಪ್ಪನಿಗೂ ಅರ್ಥ ಆದಂತಿರಲಿಲ್ಲ. ತರಗತಿಯಲ್ಲಿ ಶಿಕ್ಷಕರು ಹಾಡು ಹಾಡಿದ ಹಾಗೆ ಹೇಳುವ ಪಠ್ಯದ ಪದ್ಯಗಳು ಅರ್ಥ ಆಗದಿದ್ದರೂ, ಕೇಳುವುದಕ್ಕೆ ಹಿತವಾಗಿರುತ್ತಿದ್ದವು. ಅವುಗಳೆಡೆ ಅದೇನೋ ಒಂದು ರೀತಿಯ ಹತ್ತಿಕ್ಕಲಾಗದ ಆಕರ್ಷಣೆ ಬೆಳೆಯಿತು. ಪದ್ಯಗಳನ್ನು ನನ್ನೊಳಗೇ ಮೌನವಾಗಿ ಮೆಲುಕಾಡಿಕೊಳ್ಳುತ್ತಿದ್ದೆ. ತುಟಿಗಳಲ್ಲಿಯೇ ಗುನುಗಿಕೊಳ್ಳುತ್ತಿದ್ದೆ. ಹೀಗೆಯೇ ಭಾವಗೀತೆಗಳು, ಚಿತ್ರಗೀತೆಗಳು ಬಹುವಾಗಿ ಸೆಳೆಯುತ್ತಿದ್ದವು. ನಾನೋದಲೆಂದೇ ಅಪ್ಪ ತರುತ್ತಿದ್ದ ಚಂದಮಾಮ ನನಗೀಗಲೂ ಚಂದ ಮಾಮನೇ ಹೌದು. ಚಂದನೆಯ ಪೂರ್ಣಚಂದ್ರ ಯಾರಿಗೆ ತಾನೆ ಮಾಮನಲ್ಲ! ಅದರಲ್ಲಿನ ಕಥೆಗಳು ಅವು ಇರುವಂತೆಯೇ ಅರ್ಥ ಆಗುತ್ತಿದ್ದವೋ, ಅಥವಾ ನಾನು ಅರ್ಥೈಸಿ ಕೊಂಡಂತೆಯೋ ಎಂಬುವುದೇ ತಿಳಿಯುತ್ತಿರಲಿಲ್ಲ. ಹೀಗಾಗಿ ಸಾಹಿತ್ಯದ ಕಡೆಗೊಂದು ಬೆರಗು ನೋಟ ಈಗಲೂ ಉಳಿಸಿಕೊಂಡಿದ್ದೇನೆ.

ಅಕ್ಷರಗಳನ್ನು ಸರಿಯಾಗಿ ಬರೆಯಲಾಗದ ನನಗೆ ಬರವಣಿಗೆ ಮೊದಲಾಗುವುದು ಗೀಚುವುದರಿಂದಲೇ ಎಂದು ಅಪ್ಪ ನನಗೆ ಯಾವಾಗಲೂ ಹೇಳುತ್ತಿದ್ದರು. ನಾನು ಪಾಟಿತಟ್ಟೆಯಲ್ಲಿ (ಪ್ಲೇಟು) ಗೀರುತ್ತ ಗೀಚುತ್ತಿದ್ದರೆ ಅಪ್ಪನಿಗೆ ಒಳಗೊಳಗೇ ಆನಂದ. ಅಕ್ಷರದ ಮೇಲೆ ಪ್ರೀತಿ ಹುಟ್ಟಿಸಿದ್ದೇ ಅಪ್ಪ, ಅಪ್ಪನಿಗೆ ಸಂತೋಷ ಆಗಲೆಂದೇ ಗೀಚುತ್ತಲೇ ಇದ್ದೇನೆ. ಹೀಗೆ ಗೀಚುವ ಬಯಕೆಯೇ, ಕವನಗಳ ಬರಹಕ್ಕೆ ಮುನ್ನುಡಿ ಬರೆಯಿತೆನ್ನಬೇಕು. ಮನದ ಭಾವಗಳನ್ನು ಗದ್ಯಕ್ಕಿಂತಲೂ ಸುಲಭವಾಗಿ, ಮತ್ತು ಸಂಕ್ಷಿಪ್ತವಾಗಿ ಕವನಗಳಲ್ಲಿ ಬಿಂಬಿಸುವುದು ಮೊದಲು ಬರೆಯತೊಡಗಿದ್ದೇ ಕವನಗಳನ್ನು.

ಲೇಖಕರ ಮಾತುಗಳಿಂದ..
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)