ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದಾದ ಪುಸ್ತಕಗಳು!

ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದಾದ ಪುಸ್ತಕಗಳು!

ಉಡುಗೊರೆ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ? ಈಗಿನ್ನೂ ಹೆಜ್ಜೆ ಇಡೋಕೆ ಕಲಿತ ಇರೋ ಮಗುವಿನಿಂದ ಹಿಡಿದು, ವಯಸ್ಸಾಗಿರೋರವರೆಗು ಎಲ್ಲರಿಗೂ ಉಡುಗೊರೆ ಅಂದ್ರೆ ಕಣ್ಣು ಅರಳೋದಂತು ಸತ್ಯ. ಉಡುಗೊರೆ ಕೊಡ್ಬೇಕು ಅಂದ ಕೂಡ್ಲೆ ನಮ್ಗೆಲ್ಲ ನೆನ್ಪಾಗೋದು ಬಟ್ಟೆ, ವಾಚ್‌, ಮೊಬೈಲ್‌, ಚಿನ್ನ, ಬೆಳ್ಳಿ, ವಜ್ರ ಹೀಗೇ ದುಬಾರಿ ವಸ್ತುಗಳು. ಆದ್ರೆ ಉಡುಗೊರೆ ಅಂದ್ರೆ ಇದಿಷ್ಟೇನಾ? ಉಡುಗೊರೆ ದುಬಾರಿದೇ ಆಗಿರ್ಬೇಕಾ? ಖಂಡಿತಾ ಇಲ್ಲ!

ಉಡುಗೊರೆ ಆಪ್ತವೆನಿಸುವುದು ಅದರ ಬೆಲೆಯಿಂದಾಗಿ ಅಲ್ಲ. ಉಡುಗೊರೆ ಆಪ್ತವೆನಿಸುವುದಕ್ಕೆ ಕಾರಣ ಅದನ್ನು ಕೊಡಲು ಬಯಸುವ ವ್ಯಕ್ತಿಯ ಭಾವನೆ ಹಾಗು ನಿಮಗೆ ಆ ವ್ಯಕ್ತಿಯ ಮೇಲೆಯಿರುವ ಪ್ರೀತಿ. ಹಾಗಾದ್ರೆ ಉಡುಗೊರೆಯಾಗಿ ಕೊಡಬಹುದಾದ ವಸ್ತು ಯಾವ್ದು ಗೊತ್ತಾ? ನಿಮ್ಮ ಪ್ರೀತಿ ಪಾತ್ರರಿಗೆ ನೀವು ಕೊಡಬಹುದಾದ ಒಂದು ಒಳ್ಳೆ ಉಡುಗೊರೆ ಅಂದ್ರೆ ಅದು ಪುಸ್ತಕಗಳು. ಯಾಕೆ ಅಂತ ಯೋಚ್ನೆ ಮಾಡ್ತಾ ಇದೀರಾ? ನಿಮಗೆ ಹೇಳಿಕೊಳ್ಳೋಕೆ ಆಗದೇ ಇರೋ ಅಂತಾ ಭಾವನೆಗಳನ್ನ, ನೀವು ಕೊಡೋ ಪುಸ್ತಕದಲ್ಲಿ ಇರೋ ಪಾತ್ರದ ಮೂಲಕ ಅವರಿಗೆ ತಿಳಿಸಬಹುದು ಅಲ್ವಾ?  ಮತ್ತೆ ಯಾಕೆ ತಡ ನಿಮ್ಮ ಪ್ರೀತಿಪಾತ್ರರಿಗೆ ಈಗಲೇ ಪುಸ್ತಕಗಳನ್ನ ಉಡುಗೊರೆಯಾಗಿ ಕೊಡಿ, ನಿಮ್ಮ ಭಾವನೆಗಳನ್ನ ಅವರಿಗೆ ತಿಳಿಸಿ.

 ಹಾಗಾದ್ರೆ ಯಾವ ಯಾವ ಪುಸ್ತಕಗಳನ್ನು ನೀವು ಉಡುಗೊರೆಯಾಗಿ ಕೊಡಬಹುದು?

  1. ಹೇಳಿ ಹೋಗು ಕಾರಣ

ರವಿ ಬೆಳಗೆರೆ ಅವರು ಬರೆದಿರುವ ‘ಹೇಳಿ ಹೋಗು ಕಾರಣ’ ಒಂದು ಸುಂದರವಾದ ಪ್ರೇಮ ಕಾದಂಬರಿ. ಯಾವುದೇ ನಿರೀಕ್ಷೆಗಳಿಲ್ಲದೆ ಪ್ರೀತಿ ಮಾಡುವ ಹುಡುಗ ಹಿಮವಂತ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ ರೀತಿ ಓದುವವರನ್ನು ಕಾಡುತ್ತದೆ. ಜೊತೆಗೆ ಕಾದಂಬರಿಯಲ್ಲಿ ಬರುವ ಇತರೆ ಪಾತ್ರಗಳಾದ ಪ್ರಾರ್ಥನಾ, ಊರ್ಮಿಳಾ ನಮ್ಮ ನಿಮ್ಮ ನಡುವೆಯೇ ಇರುವಂತೆ ಕಾಣುತ್ತದೆ. ಓದುತ್ತಾ ಹೋದಂತೆ ಕಾದಂಬರಿಯಲ್ಲಿ ಬರುವ ಪಾತ್ರಗಳ ಜೊತೆ ನಮ್ಮನ್ನು ನಾವು ಹೋಲಿಸಿಕೊಳ್ಳುವಂತೆ ಮಾಡುವ ಈ ಪುಸ್ತಕ ಒಂದೊಳ್ಳೆ ಪ್ರೇಮ ಕಾದಂಬರಿ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

https://harivubooks.com/kn/products/heli-hogu-karana

 

  1. ನೀ ಹೀಂಗ ನೋಡಬೇಡ ನನ್ನ

ಮಾನವ ಸಂಬಂಧಗಳ ನುಡುವೆ ಇರುವ ಪ್ರೀತಿ ವಿಶ್ವಾಸ ವಂಚನೆಗಳ ಸುತ್ತ ಹೆಣೆಯಲಾಗಿರುವ ಈ ಕಾದಂಬರಿ ಎಷ್ಟು ಗಾಢವಾಗಿ ನಮ್ಮನ್ನು ಆವರಿಸುತ್ತದೆ ಎಂದರೆ, ಓದುತ್ತಾ ಹೋದಂತೆ ನಾಯಕ ಶಿಶಿರಚಂದ್ರನನ್ನು ನಮ್ಮಲ್ಲಿ ನಾವು ಕಲ್ವಿಸಿಕೊಳ್ಳುತ್ತಾ ಹೋಗುತ್ತೇವೆ. ರವಿ ಬೆಳಗೆರೆ ಅವರು ಬರೆದಿರುವ ಈ ಪ್ರೇಮ ಕಾದಂಬರಿಯನ್ನು ಓದಿದರೆ ನಿಮ್ಮೊಳಗೂ ಒಬ್ಬ ಪ್ರೀಮಿ ಹುಟ್ಟಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ.

https://harivubooks.com/kn/products/nee-hinga-nodabyadananna-ravi-belagere

 

  1. ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ

ಪೂರ್ಣಿಮಾ ಮಾಳಗಿಮನಿ ಅವರು ಬರೆದಿರುವ ‘ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ’ ಪುಸ್ತಕವು ಪ್ರೇಮ ಮತ್ತು ಯಾತನೆಯನ್ನು ಒಳಗೊಂಡ ಸುಂದರ ಕೃತಿ. ಪುಸ್ತಕದ ಅಡಿ ಬರಹವೇ ಹೇಳುವಂತೆ ಈ ಪುಸ್ತಕವನ್ನು ಓದುತ್ತಿದ್ದರೆ ನಿಮಗೆ ಕಾಲಡಿಯ ಕಡಲಂಚು ಕುಸಿಯುವಾಗ ಕೊಡುವ ಕಚಗುಳಿಯ ಅನುಭವ ಆಗುವುದರಲ್ಲಿ ಅನುಮಾನವೇ ಇಲ್ಲ.

https://harivubooks.com/kn/products/preethi-prema-pustakadacheya-badanekaayi-book

 

  1. ದಿ ಗಿಫ್ಟ್‌

ಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಉತ್ತಮ ಉಡುಗೊರೆ ಎಂದರೆ ಅದು ಪುಸ್ತಕ, ಆದರೆ ಒಬ್ಬರು ಇನ್ನೊಬ್ಬರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆ ಎಂದರೆ ಅದು ಸಮಯ. ಆದರೆ ಬರೀ ಸಮಯವನ್ನಷ್ಟೇ ಕೊಟ್ಟರೆ ಹೇಗೆ? ಆಗಾಗ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಅವರಿಗೆ ಏನಾದ್ರೂ ಒಂದು ಉಡುಗೊರೆ ಕೊಡಬೇಕಲ್ಲ? ಅದಕ್ಕೆ ಪರ್ಫೆಕ್ಟ್‌ ಈ ‘ದಿ ಗಿಫ್ಟ್‌’.

https://harivubooks.com/kn/products/the-gift-ravi-belagere-kannada-book

 

  1. ಪ್ರೀತಿ ಗೀತಿ ಇತ್ಯಾದಿ

ಮೇಘನಾ ಸುಧೀಂದ್ರ ಅವರು ಬರೆದ ಈ ಕಾಲದ ಪ್ರೀತಿ ಕತೆಗಳ ಸಂಗ್ರಹವೇ ‘ಪ್ರೀತಿ ಗೀತಿ ಇತ್ಯಾದಿ’ ಪುಸ್ತಕ.

https://harivubooks.com/kn/products/preethi-geethi-ityadi-meghana-sudhindra-kannada-stories

 

  1. ಐ ಹೇಟ್‌ ಮೈ ವೈಫ್

ಬೇರೆ ಬೇರೆ ಮನಸ್ಥಿತಿಯನ್ನು ಹೊಂದಿರುವ ಇಬ್ಬರು ಒಟ್ಟಿಗೇ, ಒಂದೇ ಸೂರಿನ ಕೆಳಗೆ ಬದುಕುವುದು ಸುಲಭದ ಮಾತಲ್ಲ. ಇದು ಜೀವನದ ‘ವನ್‌ ಆಫ್ ದ ಟಫೆಸ್ಟ್ ಕಾಂಟ್ರಕ್ಟ್ಸ್’. ಜೋಗಿ ಅವರು ಬರೆದ ‘ಐ ಹೇಟ್‌ ಮೈ ವೈಫ್’ ಪುಸ್ತಕವು ದಾಂಪತ್ಯದ ಕತೆಗಳ ಕುರಿತಾದ ಪ್ರಸಂಗಗಳ ಸುತ್ತ ಹೆಣೆಯಲಾಗಿದೆ.

https://harivubooks.com/kn/products/ihate-my-life-jogi-sawanna

 

  1. ಪ್ರೀತಿಸಿ ನೋಡು

ಉಷಾ ನವರತ್ನರಾಮ್ ಅವರು ಬರೆದ ‘ಪ್ರೀತಿಸಿ ನೋಡು’ ಒಮ್ಮೆ ಓದಿದರೆ ಮತ್ತೆ ಮತ್ತೆ ಓದಬೇಕೆನಿಸುವ, ಮನಸ್ಸಿನಲ್ಲಿ ಆಳವಾಗಿ ಬೇರೂರಿ ಬಿಡುವಂತಹಾ ಪುಸ್ತಕ. https://harivubooks.com/kn/products/preetisi-nodu-kannada-novel

 

  1. ಗುಲ್ ಮೊಹರ್

ಕನ್ನಡ ಚಲನಚಿತ್ರ ರಂಗದಲ್ಲಿ ನವಿರಾದ ಪ್ರೇಮ ಕವಿತೆಗಳನ್ನು ಬರೆದು ಖ್ಯಾತರಾದ ಜಯಂತ ಕಾಯ್ಕಿಣಿ ಅವರ ಬರಹಗಳ ಸಂಗ್ರಹವಾದ ‘ಗುಲ್ ಮೊಹರ್’ ಪುಸ್ತಕವು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದಾದ ಒಂದು ಅದ್ಭುತ ಪುಸ್ತಕಗಳಲ್ಲಿ ಒಂದು.

https://harivubooks.com/kn/products/gulmohar-kannada-articles-jayant-kaikini-ankita

 

  1. ಬೊಗಸೆ ತುಂಬಾ ನಕ್ಷತ್ರ

ವಸುಮತಿ ಉಡುಪ ಅವರು ಬರೆದ ‘ಬೊಗಸೆ ತುಂಬಾ ನಕ್ಷತ್ರ’ ಕಥಾ ಸಂಕಲನದಲ್ಲಿ ಮಹಿಳೆಯರೇ ಕೇಂದ್ರ ಪಾತ್ರಗಳಾಗಿದ್ದರೂ, ಈ ಪುಸ್ತದಲ್ಲಿ ಯಾವುದನ್ನೂ ವೈಭವೀಕರಿಸದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸಲಾಗಿದೆ.

https://harivubooks.com/kn/products/bogase-tumbaa-nadshatragalu-kannada-story-book

 

  1. ಪ್ರೀತಿ, ಪ್ರಣಯ, ಪುಕಾರು

ಮುಗ್ಧತೆ ಕೂಡ ಎಷ್ಟು ಸಂಕೀರ್ಣವಾಗಿರಬಹುದು ಎಂಬುದನ್ನು 'ಪ್ರೀತಿ, ಪ್ರಣಯ, ಪುಕಾರು' ಕತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಸಾಂಗತ್ಯ, ಪ್ರೀತಿ ಆಕಾರಣವಾದದ್ದು, ದಾಂಪತ್ಯದಲ್ಲಿ ದ್ವೇಷಿಸಲು ನಮ್ಮ ಸಮಾಜ ನಮಗೆ ಹಾದರದಂತ ಕಾರಣಗಳನ್ನು ಕಟ್ಟಿಕೊಡುತ್ತದೆ. ಆದರೆ ಪ್ರೀತಿಸುವುದನ್ನು ನಾವೇ ಕಲಿತುಕೊಳ್ಳಬೇಕು. ಮೈ ಮತ್ತು ಮನಸ್ಸಿನ ಅವಶ್ಯಕತೆಗಳನ್ನು ಬೇರೆಬೇರೆ ಎಂದು ಭಾವಿಸುವ ಮತ್ತು ಈ ರೀತಿ ಬಾಳುವುದರಿಂದ ಪರಸ್ಪರರಿಗೆ ಆಗುವ ಸುಖ-ದುಃಖಗಳ ಪರಿಕಲ್ಪನೆಯನ್ನು ಅವರದೇ ರೀತಿಯಲ್ಲಿ ಪರಿಭಾವಿಸಿಕೊಂಡು, ಅದಕ್ಕೆ ತಕ್ಕನಾಗಿ ಬಾಳುವ ಮುಗ್ಧ ದಂಪತಿಗಳ ಕತೆಯಿದು, ಪಾತ್ರಗಳ ಮುಗ್ಧತೆ ಈ ಕತೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

https://harivubooks.com/kn/products/preeti-pranaya-pukaaru-kannada-book

 

ಈ ಪ್ರೇಮಿಗಳ ದಿನಾಚರಣೆಗೆ, ಇದಿಷ್ಟೂ ಪುಸ್ತಕಗಳನ್ನು ನೀವು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದು. ಇದಿಷ್ಟೇ ಅಲ್ಲದೆ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ಕೊಡಬಹುದಾದ ಬೇರೆ ಯಾವುದಾದರೂ ಪುಸ್ತಕಗಳ ನಿಮಗೆ ತಿಳಿದಿದ್ದರೆ ಕಮೆಂಟ್‌ ಮೂಲಕ ನಮಗೆ ತಿಳಿಸಿ!

Back to blog