ನೆಚ್ಚಿನ ಗ್ರಂಥಾಲಯಕ್ಕೆ ನಿಮ್ಮ ಕೊಡುಗೆ!

ನೆಚ್ಚಿನ ಗ್ರಂಥಾಲಯಕ್ಕೆ ನಿಮ್ಮ ಕೊಡುಗೆ!

ಓದುವ ಮಕ್ಕಳ, ಪುಸ್ತಕ ಪ್ರೇಮಿಗಳ ಪಾಲಿನ ಅಕ್ಷರ ಭಂಡಾರವೆಂದರೆ ಅದು ಗ್ರಂಥಾಲಯ. ಅದು ನಿಮ್ಮ ಮನೆಯಲ್ಲಿ ನೀವೇ ಮಾಡಿಕೊಂಡ ಚಂದದ ಸಣ್ಣ ಗ್ರಂಥಾಲಯವಿರಬಹುದು, ಸಾರ್ವಜನಿಕ ಗ್ರಂಥಾಲಯಗಳಿರಬಹುದು ಅಥವಾ ಶಾಲಾ-ಕಾಲೇಜುಗಳಲ್ಲಿನ ಗ್ರಂಥಾಲಯಗಳಿರಬಹುದು. ನಿಮ್ಮ ಊರಿನ, ಶಾಲೆಯ ಅಥವಾ ನಿಮ್ಮ ಮನಸ್ಸಿಗೆ ಹತ್ತಿರವಾದ ನಿಮ್ಮ ಮನೆಯ ಗ್ರಂಥಾಲಯಕ್ಕೆ ನೀವು ಕೊಡುಗೆ ಕೊಡಬೇಕೆಂದಿದ್ದರೆ, ನಾವು ನಿಮ್ಮೊಂದಿಗೆ ಜೊತೆಯಾಗುತ್ತೇವೆ. ಕತೆ, ಕಾದಂಬರಿ, ಪ್ರಬಂಧ, ಶೈಕ್ಷಣಿಕ ಪುಸ್ತಕ ಹೀಗೇ ಯಾವುದೇ ಬಗೆಯ ಪುಸ್ತಕಗಳನ್ನು ನೀವು ಕೊಂಡರೂ, ನಿಮ್ಮ ನೆಚ್ಚಿನ ಗ್ರಂಥಾಯಲಕ್ಕೆ ಆ ಎಲ್ಲ ಪುಸ್ತಕಗಳನ್ನು ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ.

ನಿಮ್ಮ ಶಾಲೆಯ ಗ್ರಂಥಾಲಯಕ್ಕೆ ಎಂತಹಾ ಪುಸ್ತಕಗಳನ್ನು ಸೇರಿಸಬಹುದು?

ನೀವು ಓದಿದ ಶಾಲಾ-ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಬೇಕು ಎಂದು ಯೋಚಿಸುತ್ತಿದ್ದರೆ – ಮಕ್ಕಳ ಬಣ್ಣ ಬಣ್ಣದ ಪುಸ್ತಕಗಳು, ಭಾರತದ ಇತಿಹಾಸದ ಬಗೆಗಿನ ಪುಸ್ತಕಗಳು, ನಾಡು-ನುಡಿ, ವ್ಯಕ್ತಿತ್ವ ವಿಕಸನ ಪುಸ್ತಕಗಳು, ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಇರುವ ಪುಸ್ತಕಗಳು, ಸಣ್ಣ ಕಥೆಗಳ ಪುಸ್ತಕಗಳು, ವಿಜ್ಞಾನ-ತಂತ್ರಜ್ಞಾನ, ಪಠ್ಯ-ಪುಸ್ತಕಗಳು, ಶಾಲಾ ಗೈಡ್‌ಗಳು, ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆ ಬೇಕಾಗುವ ಪುಸ್ತಕಗಳು ಹೀಗೇ ಮಕ್ಕಳಿಗೆ ಓದುವ ಹವ್ಯಾಸದೆಡೆ ಆಸಕ್ತಿ ಮೂಡಿಸುವಂತಹಾ ಹಾಗೂ ಅವರಿಗೆ ಬೇರೆ ಬೇರೆ ವಿಷಯದ ಬಗೆಗೆ ಅರಿವು ಮೂಡಿಸುವಂತಹಾ ಪುಸ್ತಕಗಳನ್ನು ಕೊಡಬಹುದು.

ನಿಮ್ಮ ಊರಿನ ಗ್ರಂಥಾಲಯಕ್ಕೆ ಎಂತಹಾ ಪುಸ್ತಕಗಳನ್ನು ಸೇರಿಸಬಹುದು?

ಯಾವುದೇ ವಯಸ್ಸಿನ ಮಿತಿ ಇಲ್ಲದೇ ಓದುವ ಆಸಕ್ತಿ ಇರುವ ಪ್ರತಿಯೊಬ್ಬರೂ ಬಂದು ಕೂರುವ ಜಾಗ ಇದಾಗಿರುವುದರಿಂದ ನೀವು ನಿಮ್ಮ ಊರಿನ ಗ್ರಂಥಾಲಯಕ್ಕೆ ಕೊಡುಗೆ ನೀಡುವುದಾದರೆ, ಸಣ್ಣ ಮಕ್ಕಳು ಓದುವ ಬಣ್ಣ ಬಣ್ಣದ ಪುಸ್ತಕದಿಂದ ಹಿಡಿದು, ಕತೆ, ಕಾದಂಬರಿ, ಕವಿತೆ. ನಾಟಕ, ಪ್ರಬಂಧಗಳು, ಆಧ್ಯಾತ್ಮ, ಇತಿಹಾಸ, ಪೌರಾಣಿಕ, ನಾಡು-ನುಡಿ, ಜೀವನಶೈಲಿ, ಕಲಿಕೆ, ಸಿನಿಮಾ, ವ್ಯಕ್ತಿತ್ವ ವಿಕಸನ, ವಿಜ್ಞಾನ-ತಂತ್ರಜ್ಞಾನ ಹೀಗೇ ಎಲ್ಲಾ ತರಹದ ಪುಸ್ತಕಗಳನ್ನು ಕೊಡಬಹುದು.

ನಿಮ್ಮ ನೆಚ್ಚಿನ ಗ್ರಂಥಾಲಯಕ್ಕೆ ನಿಮ್ಮ ಕೊಡುಗೆಯನ್ನು ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ!

ನೀವು ಓದಿದ ಶಾಲೆಗೋ ಅಥವಾ ಊರಿನ ನಿಮ್ಮ ನೆಚ್ಚಿನ ಗ್ರಂಥಾಲಯಕ್ಕೋ ಪುಸ್ತಕಗಳನ್ನು ಕೊಳ್ಳುವುದು ನಿಮ್ಮ ಬಯಕೆಯಾಗಿದ್ದರೆ, ನಿಮ್ಮ ನೆರವಿಗೆ ಹರಿವು ಬುಕ್ಸ್‌ ಸದಾ ಸಿದ್ದ. ನೀವು ಕೊಡುಗೆಯಾಗಿ ಕೊಡಲು ಇಷ್ಟಪಡುವ ಪುಸ್ತಕಗಳ ಪಟ್ಟಿಯನ್ನು ನಮಗೆ ಕೊಡಿ. ಇಲ್ಲವೇ ಯಾವ ತರಹದ ಪುಸ್ತಕಗಳು ಗ್ರಂಥಾಲಯವನ್ನು ಸೇರಬೇಕೆಂದು ಹೇಳಿದರೂ ಸಾಕು. ನಿಮ್ಮ ನೆಚ್ಚಿನ ಆ ಎಲ್ಲ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಯಾವುದೇ ಸಾಗಾಣಿಕೆಯ ವೆಚ್ಚವಿಲ್ಲದೆ ತಲುಪಿಸುವುದು ನಮ್ಮ ಕೆಲಸ. ಇದಿಷ್ಟೇ ಅಲ್ಲದೇ ಒಳ್ಳೆಯ ಉದ್ದೇಶದಿಂದ ಪುಸ್ತಕಗಳನ್ನು ಕೊಳ್ಳುತ್ತಿರುವ ನಿಮಗೆ ರಿಯಾಯಿತಿ ದರದಲ್ಲೇ ಪುಸ್ತಕಗಳನ್ನು ಕೊಡಲಾಗುವುದು.

ಈ ಎಲ್ಲ ಸೌಲಭ್ಯಗಳು ನಮ್ಮ ಆನ್‌ಲೈನ್‌ ಮಳಿಗೆ ಹಾಗೂ ಬೆಂಗಳೂರಿನ ನಮ್ಮ ಮಳಿಗೆಯಲ್ಲಿ ಲಭ್ಯ!

ಹೆಚ್ಚಿನ ಮಾಹಿತಿಗಾಗಿ support@harivubooks.com ಅನ್ನು ಸಂಪರ್ಕಿಸಿ ಹಾಗೂ ಪುಸ್ತಕಗಳನ್ನು ಖರೀದಿಸಲು www.harivubooks.com ಗೆ ಭೇಟಿ ನೀಡಿ.

Back to blog

Leave a comment