ಮಕ್ಕಳಿಗೆ ರಿಟರ್ನ್ ಗಿಫ್ಟ್ ಕೊಡೋಕೆ ಬೆಸ್ಟ್ ಪುಸ್ತಕಗಳು!

ಮಕ್ಕಳಿಗೆ ರಿಟರ್ನ್ ಗಿಫ್ಟ್ ಕೊಡೋಕೆ ಬೆಸ್ಟ್ ಪುಸ್ತಕಗಳು!

ನಿಮ್ಮ ಮಕ್ಕಳ ಹುಟ್ಟು ಹಬ್ಬಕ್ಕೆ ಬಂದ ಬೇರೆಬೇರೆ ಮಕ್ಕಳಿಗೆ ರಿಟರ್ನ್ ಗಿಫ್ಟ್ ಕೊಡೋಕೆ ಯೋಚಿಸ್ತಾ ಇದೀರಾ? ಹಾಗಾದ್ರೆ ಈ ಪುಸ್ತಕಗಳಿಗಿಂತ ಒಳ್ಳೆ ಉಡುಗೊರೆ ಬೇರೆ ಯಾವುದು ನಿಮಗೆ ಸಿಗಲ್ಲ. ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಹಲವು ತಂದೆ ತಾಯಂದಿರ ಮನಗೆದ್ದ ಈ ಪುಸ್ತಕಗಳು ಮಕ್ಕಳಿಗೂ ಇಷ್ಟವಾಗೋದು ಖಂಡಿತ. ಮೋಡಿ ಮಾಡುವ ಕತೆಗಳ, ಹಾಡುಗಳ, ಬಣ್ಣ ಬಣ್ಣದ ಚಿತ್ರವಿರುವ ಈ ಪುಸ್ತಕಗಳು ಮಕ್ಕಳ ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ.

       

ಆಟಿಕೆಗಳು, ಫನ್ ಬೋರ್ಡ್‌ಗಳು, ಫ್ಲ್ಯಾಶ್‌ಕಾರ್ಡ್‌ಗಳು ಮುಂತಾದವುಗಳನ್ನು ರಿಟರ್ನ್ ಗಿಫ್ಟ್‌ಗಳಾಗಿ ಕೊಡುವ ನೀವು ಈ ಪುಸ್ತಕಗಳನ್ನು ಯಾವುದೇ ಅನುಮಾನಗಳಿಲ್ಲದೆ ಕೊಡಬಹುದು. ತಂದೆ ತಾಯಿಯರೇ ಬರೆದಿರುವ ಈ ಪುಸ್ತಕಗಳು ಮಕ್ಕಳಿಗೆ ಕನ್ನಡ ವರ್ಣಮಾಲೆಯ ಪರಿಚಯದಲ್ಲಿ, ಕಲಿಕೆಯಲ್ಲಿ, ಪುಸ್ತಕಗಳ ಓದುವಿನಲ್ಲಿ, ಸುತ್ತಮುತ್ತಲಿನ ಪರಿಸರದ ಬಗ್ಗೆ ಆಸಕ್ತಿ ಹುಟ್ಟಿಸಲು ಬಹಳ ಉಪಯೋಗಕಾರಿ. ಈ ಪುಸ್ತಕಗಳಲ್ಲಿ ಬರುವ ಪ್ರಾಣಿಗಳೊಂದಿಗೆ ಮಾತಾಡುವ ರಿಕ್ಷವೋ, ಮುದ್ದು ಹುಡುಗಿ ಚಿನ್ನಿಯ ಕತೆಯೋ, ತಾಳಬದ್ಧವಾದ ಪದ್ಯಗಳೋ ಅಥವಾ ಗೋಲಿ ಆಟವೋ ಮಕ್ಕಳನ್ನ ಮಾಯಾಲೋಕಕ್ಕೆ ಕರೆದೊಯ್ಯುವುದು ಖಂಡಿತ.

    

ಹರಿವು ಬುಕ್ಸ್‌ನ ಎಲ್ಲಾ ಮಕ್ಕಳ ಪುಸ್ತಕಗಳನ್ನು ಕೊಳ್ಳಲು ಭೇಟಿ ನೀಡಿ :

https://harivubooks.com/collections/harivu-publication-childrens-book

 

ಇನ್ನಷ್ಟು ಮಕ್ಕಳ ಪುಸ್ತಕಗಳನ್ನು ಕೊಳ್ಳಲು ಭೇಟಿ ನೀಡಿ :

https://harivubooks.com/collections/kids-books-kannada

 

Back to blog

Leave a comment