1
/
of
2
Shreedhar. D. S. Kinnigoli
ಜಡಭರತ
ಜಡಭರತ
Publisher -
Regular price
Rs. 60.00
Regular price
Rs. 60.00
Sale price
Rs. 60.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 74
Type - Paperback
Couldn't load pickup availability
ಜಡಭರತನ ಕಥೆಯನ್ನು ಆಧರಿಸಿ, ಜಿಂಕೆಯ ವಿಸ್ಮೃತವಾಗಿಯೂ ಕಥೆಯಾಗಿ ನಿರೂಪಿಸುವ ಪ್ರಯತ್ನ ಈ ಹಿಂದೆ ನಡೆದಿದ್ದು, ಮಾಸಪತ್ರಿಕೆಯೊಂದರಲ್ಲಿ ಅದನ್ನು ಓದಿದ ನೆನಪು ನನಗಿದೆ. ಹೋಲಿಕೆ ಮಾಡಿ ಹೇಳುವಷ್ಟು ಪ್ರಮಾಣದಲ್ಲಿ ಸ್ಮರಣೆ ಖಚಿತವಾಗಿಲ್ಲ. ಭಾಗವತದ ನಿರೂಪಣೆಯಲ್ಲಿ ಜಿಂಕೆಯ ಜೀವನದ ವಿವರ ಹೆಚ್ಚಿಲ್ಲ. ಭರತನ ತತ್ರೋಪದೇಶಕ್ಕೆ ಅಲ್ಲಿ ಹೆಚ್ಚು ಅವಕಾಶ ನೀಡಲಾಗಿದೆ. ಶ್ರೀಧರರು ಭಾಗವತವನ್ನು ಸರಿಯಾಗಿ ಅನುಸರಿಸಿದ್ದಾರೆ ಮತ್ತು ತಮ್ಮದೇ ರೀತಿಯ ಒಂದು ಪ್ರಯತ್ನವನ್ನು ನಿರೂಪಣೆಯಲ್ಲಿ ಮಾಡಿದ್ದಾರೆ. ಕನ್ನಡಸಾಹಿತ್ಯಪ್ರಿಯರು ಈ ಕಥಾರೂಪವನ್ನು ವಾಚನಮಾಡುವ ಮೂಲಕ ನಮ್ಮ ಪುರಾಣ ಸಾಹಿತ್ಯವನ್ನು ಇನ್ನಷ್ಟು ಚೆನ್ನಾಗಿ ಅರಿಯಲು ಸದವಕಾಶವಾಗಿದೆ; ಆ ಮೂಲಕ ಪರತತ್ತ್ವದ ಅನುಸಂಧಾನದ ಗುರ್ವನುಗ್ರಹವನ್ನು ಪಡೆಯಬಹುದಾಗಿದೆ. ಗಂಭೀರ ವಿಷಯವನ್ನು ಸರಳ ಕಥಾರೂಪದಲ್ಲಿ ನಿರೂಪಿಸಿರುವುದರಿಂದ ಸಾಮಾನ್ಯಾಧಿಕಾರಿಗಳಿಗೂ ಇದು ಹೊಂದುವಂತಿದೆ.ಲೇಖಕರು ಪುರಾಣಲೋಕದ ಇನ್ನೂ ಹಲವು ತಾತ್ವಿಕಕಥೆಗಳನ್ನು ಈ ಮಾದರಿಯಲ್ಲಿ ನಿರೂಪಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಇನ್ನಷ್ಟು ಉತ್ತಮಾವಕಾಶಗಳು ಅವರಿಗೆ ಒದಗಿಬರಲೆಂದು ಪ್ರಾರ್ಥಿಸುತ್ತೇನೆ.
-ಪಾದೇಕಲ್ಲು ವಿಷ್ಣು ಭಟ್ಟ
-ಪಾದೇಕಲ್ಲು ವಿಷ್ಣು ಭಟ್ಟ
Share


Subscribe to our emails
Subscribe to our mailing list for insider news, product launches, and more.