Skip to product information
NaN of -Infinity

Dr. Mysuru Nagaraja Sharma

ಸಂಚು ವಂಚನೆಗಳ ಲೋಕದಲ್ಲಿ

ಸಂಚು ವಂಚನೆಗಳ ಲೋಕದಲ್ಲಿ

Publisher - ಹರಿವು ಬುಕ್ಸ್

Regular price Rs. 230.00
Regular price Rs. 230.00 Sale price Rs. 230.00
Sale Sold out
Shipping calculated at checkout.

- Free Shipping Above ₹300

- Cash on Delivery (COD) Available

Pages - 196

Type - Paperback

Pickup available at 67, South Avenue Complex, DVG Road, Basavanagudi

Usually ready in 24 hours

ಪ್ರಸ್ತುತ ಕೃತಿಯಾದ ʻಸಂಚು ವಂಚನೆಗಳ ಲೋಕದಲ್ಲಿʼ  ಎಂಬ ಈ ಸಂಚಿಕೆಯಲ್ಲಿ ಸಮಾಜಕ್ಕೆ ಪಾಠವಾಗಬಹುದಾದ ಕೆಲವು ಸಂದರ್ಭಗಳನ್ನು ಲೇಖಕರಾದ ಡಾ.  ಮೈಸೂರು ನಾಗರಾಜ ಶರ್ಮಾರವರು ಆಸಕ್ತಿಕರವಾಗಿಯೇ ನಿರೂಪಿಸಿದ್ದಾರೆ ಎನ್ನಬೇಕು. ಸ್ವತ:  ಚಿತ್ರಕಲಾವಿದರು,  ಛಾಯಾಗ್ರಹಕರು ಹಾಗೂ ಲೇಖಕರೂ ಆದ ಡಾ. ಮೈ.ನಾ. ಶರ್ಮಾ ಅವರು ಎಂದಿನಂತೆ, ಈ ಕೃತಿಯಲ್ಲಿಯೂ ತಮ್ಮ ಎಲ್ಲಾ ಪ್ರತಿಭೆಗಳನ್ನೂ ಸಿಂಚನಗೊಳಿಸಿ ಪ್ರಸ್ತುತಪಡಿಸಿದ್ದಾರೆ. ಸತ್ಯಘಟನೆಗಳನ್ನು ನೀರಸವಾಗಿ ವಿವರಿಸದೆ, ಅದನ್ನು ಸ್ವಾರಸ್ಯಕರವಾದ ಒಂದು ಕಥಾರೂಪದಲ್ಲಿಯೇ ಸಮಾಜದ ಮುಂದಿಡುವ ಪ್ರಯತ್ನ ನಡೆಸಿದ್ದಾರೆ. ಪ್ರಾಚೀನ ಭಾರತೀಯ ನಿರೂಪಣೆಗಳಾದ;  ಹಿತೋಪದೇಶ,  ಪಂಚತಂತ್ರ ಹಾಗೂ ಕಾಕೋಲೋಕೀಯ ಮುಂತಾದ ಸಾಹಿತ್ಯಗಳಲ್ಲಿಯೂ ಇಂತಹುದೇ ಪಾಠ ಹಾಗೂ ರಂಜನೆಗಳ ಉಭಯ ಪ್ರಯತ್ನಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.  ಸಮಾಜವನ್ನು ಎಚ್ಚರಿಸುವ ಈ ದಿಸೆಯಲ್ಲಿಯೇ ರಚಿತವಾದ ಒಂದು ವಿಶೇಷ ಕೃತಿ ಡಾ. ಮೈ.ನಾ. ಶರ್ಮಾರಿಂದ ಹೊರಬರುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಲೇಖಕರ ಮಾತಿನಲ್ಲಿಯೇ ಹೇಳುವುದಾದರೆ, ಇದು ತಾವು ನೀಡುವ ʻಎಚ್ಚರಿಕೆಯ ಗಂಟೆಯೂʼ ಹೌದೆನ್ನುತ್ತಾರೆ. ಒಮ್ಮೆ ಜಾರಿಬಿದ್ದ ನೆಲದಲ್ಲಿ ಮತ್ತೊಮ್ಮೆ ಕಾಲೂರದಂತೆ ಎಚ್ಚರ ವಹಿಸಲು ಎಲ್ಲರೂ ಪ್ರಯತ್ನಿಸುತ್ತಾರಾದರೂ, ಸಮಾಜದಲ್ಲಿನ ಪಾಶವೀ ಮನಸ್ಸಿನವರಿಂದ ಇಂತಹ ಹೊಸ ಹೊಸ ʻಜಾರಿಕೆಯ ನೆಲಗಳುʼ ನಿರಂತರವಾಗಿ ರೂಪಿಸಲಾಗುತ್ತಿದ್ದು, ಮುಗ್ಧರನ್ನು ಹಳ್ಳಕ್ಕೆ ಬೀಳಿಸುವುದು ಈ ಅಮಾನವೀಯ ವರ್ಗದ ನಿತ್ಯ ಕಾಯಕವಾಗಿರುತ್ತದೆ. ಅಂತೆಯೇ,  ಈ  “ಜಾರು ಬಜಾರಿನ” ಚಟುವಟಿಕೆಗಳ ಬಗೆಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡುವ ಇಂತಹ ಕೆಲಸಗಳು ನಿರಂತರವಾಗಿ ಸಾಗುತ್ತಲೇ ಇರಬೇಕಾದುದೂ ಅಪೇಕ್ಷಣೀಯ- ಎಂಬುದು ಓರ್ವ ವಿ‍ಶ್ರಾಂತ ಪೋಲೀಸು ಅಧಿಕಾರಿಯಾದ ನನ್ನ ಅನಿಸಿಕೆಯೂ ಹೌದು!.
ಜೆ.ಬಿ. ರಂಗಸ್ವಾಮಿ,
ವಿಶ್ರಾಂತ ಪೋಲೀಸು ಅಧಿಕಾರಿ. (ಮುನ್ನುಡಿಯಿಂದ)

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
K
Kashinath Ramachandra C

ಸಂಚು ವಂಚನೆಗಳ ಲೋಕದಲ್ಲಿ