ವಾಸ್ತವ, ಕಲ್ಪನೆ ಮತ್ತು ಅನುಭವಗಳ ಮಿಶ್ರಣ "ಸ್ವಪ್ನಗಿರಿ ಡೈರೀಸ್"

ವಾಸ್ತವ, ಕಲ್ಪನೆ ಮತ್ತು ಅನುಭವಗಳ ಮಿಶ್ರಣ "ಸ್ವಪ್ನಗಿರಿ ಡೈರೀಸ್"

- ವಸಂತ್

ನಾವು ನೋಡುವ ಬಹುತೇಕ ಸಿನಿಮಾಗಳು, ಓದುವ ಕಾದಂಬರಿಗಳು ಕಾಲ್ಪನಿಕವಾದವುಗಳೇ. ಕಲ್ಪನೆಗಳಿಗೆ ಬರಹಗಾರ ತನ್ನ ಅನುಭವ ಮತ್ತು ಕೆಲವು ವಾಸ್ತವಿಕ ಘಟನೆಗಳನ್ನು ದೃಢ ಪಾತ್ರಗಳೊಂದಿಗೆ ಸೇರಿಸಿದಾಗ ಅಚ್ಚುಕಟ್ಟಾದ ಒಂದು ಕೃತಿ ನಮಗೆ ಓದಲು ಸಿಗುತ್ತದೆ. ವಾಸ್ತವ,ಕಲ್ಪನೆ ಮತ್ತು ಅನುಭವಗಳ ಮಿಶ್ರಣ ಪದಚಿಹ್ನ ಅವರ "ಸ್ವಪ್ನಗಿರಿ ಡೈರೀಸ್."

ಇಲ್ಲಿ ಎಲ್ಲರದ್ದೂ ಒಂದೊಂದು ಕಥೆ ಇರುತ್ತದೆ. ಎಲ್ಲರೂ ಕಥೆ ಹೇಳುತ್ತಾರೆ ಎನ್ನುವ ಲೇಖಕರು ತಮ್ಮ ಕಾಲ್ಪನಿಕ ಕಥೆಯನ್ನು ಹೇಳಲು "ಸ್ಲೀಪ್ ಪ್ಯಾರಲಿಸಿಸ್" ಎಂಬ ಮನೋವೈದ್ಯಕ್ಕೆ ಸಂಬಂಧಿಸಿದ ವಿಷಯದ ನೆರವನ್ನು ಪಡೆದುಕೊಂಡಿರುವುದು ವಿಶೇಷ. ಸ್ಲೀಪ್ ಪ್ಯಾರಲಿಸಿಸ್ ಎಂದರೇನು? ಅದರ ಲಕ್ಷಣಗಳೇನು? ಬಗೆಗಳಾವುವು? ಎನ್ನುವುದರೆಲ್ಲವುಗಳ ಬಗ್ಗೆ ಒಂದಷ್ಟು ಮಾಹಿತಿ ಕಾದಂಬರಿಯಲ್ಲಿದೆ. ಈ ಪ್ರಯತ್ನ ನನಗೆ ಇಷ್ಟವಾಯಿತು.

ಹುಡುಕಾಟದ ಜೀವನವೇ ಸ್ವಾರಸ್ಯ ಎಂದು ಏನನ್ನೋ ಹುಡುಕಲು ಹೊರಟ ಲೇಖಕರು ಕಟ್ಟಿಕೊಡುವ ಸ್ವಪ್ನಗಿರಿ ಎಂಬ ಊರು ಮತ್ತು ಅಲ್ಲಿನ ಪರಿಸ್ಥಿತಿ, ಆಧುನಿಕ ಬೆಳವಣಿಗೆಗಳು ನಂಬಲು ಕೊಂಚ ಅಸಾಧ್ಯವನಿಸಿದರೂ ಕಾಲ್ಪನಿಕವಾದ್ದರಿಂದ ನಂಬಲೇಬೇಕಾಗುತ್ತದೆ. ಕಾರಣ, ಕಲ್ಪನೆಗೆ ಕೊನೆ ಅಥವಾ ಮಿತಿಯಿಲ್ಲ.

ಕನ್ನಡದಲ್ಲಿ ಹೊಸ ರೀತಿಯ ರೋಚಕ ಕಾದಂಬರಿಯನ್ನು ಕಡಿಮೆ ಸಮಯದಲ್ಲಿ ನೀವು ಓದಲು ಬಯಸುವವರಾಗಿದ್ದರೆ "ಸ್ವಪ್ನಗಿರಿ ಡೈರೀಸ್" ಓದಬಹುದು.

 ***

 

ಸ್ವಪ್ನಗಿರಿ ಡೈರೀಸ್ ಕಾದಂಬರಿಯನ್ನು ಕೊಳ್ಳಲು ಭೇಟಿ ನೀಡಿ : https://harivubooks.com/products/swapnagiri-diaries-novel-pradachihna-harivu-books-kannada-book

 

ಹರಿವು ಬುಕ್ಸ್‌ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼

https://harivubooks.com/collections/harivu-books-publication

 

ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com

Back to blog

Leave a comment