ಕನಸುಗಳ ಜೊತೆ ಒಂದು ಥ್ರಿಲ್ಲರ್ ಕತೆ 'ಸ್ವಪ್ನಗಿರಿ ಡೈರೀಸ್'

ಕನಸುಗಳ ಜೊತೆ ಒಂದು ಥ್ರಿಲ್ಲರ್ ಕತೆ 'ಸ್ವಪ್ನಗಿರಿ ಡೈರೀಸ್'

-ಅಶ್ವಿನಿ ಶಾನಭಾಗ

 

ಒಮ್ಮೆ ಊರಿನಲ್ಲಿ ಟೆಂಪೋ ಹತ್ತಿ ಕೂತಿದ್ದೆ (ಟೆಂಪೋ ಅಂದ್ರೆ ಉತ್ತರ ಕನ್ನಡ ಜನರಿಗೆ ಅರ್ಥ ಆಗತ್ತೆ. ಬಸ್ ತರಾನೇ ಓಡಾಟಕ್ಕೆ ಅಂತ ಇರುವ ಖಾಸಗಿ ವಾಹನ.) ಟೆಂಪೋ ಕಿಟಕಿಯಿಂದ ಹೊರಗಿನ ದೃಶ್ಯ ನೋಡ್ತಾ ಇದ್ದೆ. ಏನು ಕಂಡಿತು ಅಂತ ಇವಾಗ ಸರಿಯಾಗಿ ನೆನಪಿಲ್ಲ.

ಆವಾಗ ಆ ಕ್ಷಣದಲ್ಲಿ ನನ್ನ ಎದೆಬಡಿತ ತಪ್ಪಿತ್ತು. ಅಯ್ಯೋ... ಈ ಟೆಂಪೋ ಕಿಟಕಿ ಇಂದ ಕಾಣುತ್ತಿರೋ ದೃಶ್ಯವನ್ನು ನಾನು ಮೊದಲು ಎಲ್ಲೋ ನೋಡಿದ್ದೀನಿ. ಇದೇ ಚಲನೆಗಳು. ಮುಂದೆ ಎರಡು ಕ್ಷಣದಲ್ಲಿ ಇದೇ ದೃಶ್ಯ ಬರುತ್ತೆ ಅಂತ ನನ್ನ ಮನಸ್ಸು ಹೇಳ್ತಾ ಇತ್ತು. ನಿಜವಾಗಲೂ ನಡೆದಿತ್ತು. ಆ ಕ್ಷಣ ನಾನು ಬೆವರಿ ಹೋಗಿದ್ದೆ.

ಇದಿಷ್ಟು ಆಗಿದ್ದು ಹೆಚ್ಚು ಅಂದರೆ 10 ಸೆಕೆಂಡ್‌ಗಳ ಕಾಲ ಅಷ್ಟೇ. ಆದರೆ ಆ ಘಟನೆ 15 ವರ್ಷಗಳ ನಂತರವೂ ನನ್ನ ನೆನಪಿನಲ್ಲಿ ಹಚ್ಚ ಹಸಿರು. ಈ ಅನುಭವ ನನಗೆ ಆಮೇಲೂ ತುಂಬಾ ಸಲ ಆಗಿದೆ. ಇದಕ್ಕೆ ದೇಜಾವು ಅನ್ನುತ್ತಾರೆ. ದೇಜಾವು ತುಂಬಾ ಜನಕ್ಕೆ ಆಗುತ್ತೆ ಅಂತ ನನಗೆ ಗೊತ್ತಾಗಿದ್ದು ತುಂಬಾ ತಡವಾಗಿ.

ಇದೆಲ್ಲಾ ಘಟನೆ ನೆನಪಾಗಿದ್ದು ನಾನು ಸ್ವಪ್ನಗಿರಿ ಡೈರೀಸ್ ಕಾದಂಬರಿ ಓದಿದ ಮೇಲೆ.

ಈ ದೇಜಾವು ಅನ್ನೋ ವಿಷಯ ನನ್ನ ಅನುಭವ ಆಗಿರೋದ್ರಿಂದ ಈ ಪುಸ್ತಕ ನನ್ನನ್ನು ಬೇಗ ಒಳಕ್ಕೆ ಎಳೆದುಕೊಂಡು ಹೋಯಿತು. ಪುಟ್ಟ ಪುಸ್ತಕ ಸರಿಯಾಗಿ ಕೂತ್ರೆ ಎರಡು ತಾಸಲ್ಲಿ ಮುಗಿಸಬಹುದು. ಕಥೆ ತುಂಬಾ ವೇಗವಾಗಿ ಸಾಗುತ್ತದೆ.

ಹರೆಯವೇ ಹಾಗೆ ಹುಚ್ಚು ವೇಗ, ಆವೇಗ. ಅದು ದುಡಿಮೆಯಲ್ಲೇ ಇರಲಿ, ಪ್ರೇಮದಲ್ಲೇ ಇರಲಿ, ನಿರ್ಧಾರಗಳಲ್ಲಿಯೇ ಇರಲಿ, ಹುಂಬುತನವೇ ಇರಲಿ. ಅಂತಹ ಹರಯದಲ್ಲಿ ಇರುವ ನಾಯಕ ಹುಂಬ. ಅವನಿಗೆ ಒಂದು “ಸ್ಲಿಪ್ ಪ್ಯಾರಲಸಿಸ್” ಎನ್ನುವ ಕಾಯಿಲೆ ಎಂದರೆ, ಕಾಯಿಲೆ ಅಲ್ಲ ಅನ್ನೋ ತರಹದ ಕಾಯಿಲೆ. ಕನಸಿನಲ್ಲಿ ಏನೇನು ಕಾಣುತ್ತಾನೆ. ಆವಾಗ ಆವಾಗ ಅನುಭವಕ್ಕೆ ಬರುವ ದೇಜಾವುಗಳು. ಅದರ ಬೆನ್ನು ಹತ್ತಿ ಒಂದೂರಿನ ರಹಸ್ಯ ಬಿಡಿಸಲು ಹೋಗುತ್ತಾನೆ. ಅಲ್ಲಿ ಏನಾಗತ್ತೆ ಅನ್ನೋದೇ ಕಥೆ.

 

***

 

ಸ್ವಪ್ನಗಿರಿ ಡೈರೀಸ್ ಕಾದಂಬರಿಯನ್ನು ಕೊಳ್ಳಲು ಭೇಟಿ ನೀಡಿ : https://harivubooks.com/products/swapnagiri-diaries-novel-pradachihna-harivu-books-kannada-book

 

ಹರಿವು ಬುಕ್ಸ್‌ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼

https://harivubooks.com/collections/harivu-books-publication

 

ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ https://harivubooks.com/

Back to blog

Leave a comment