ಹಾಸ್ಟೆಲ್‌ ಮೆಟ್ಟಿಲೂ ಹತ್ತದ ಹುಡುಗಿಯ 'ರಥಬೀದಿ ಎಕ್ಸ್‌ಪ್ರೆಸ್‌' ಅನುಭವ!

ಹಾಸ್ಟೆಲ್‌ ಮೆಟ್ಟಿಲೂ ಹತ್ತದ ಹುಡುಗಿಯ 'ರಥಬೀದಿ ಎಕ್ಸ್‌ಪ್ರೆಸ್‌' ಅನುಭವ!

- ರಂಜನಿ ರಾಘವನ್‌

ನನ್ನ ರೀಸೆಂಟ್ ಓದು

ರಥಬೀದಿ ಎಕ್ಸ್‌ಪ್ರೆಸ್‌

ಪುಟ - ೭೬

ಲೇಖಕರು - ವಿಕಾಸ್ ನೇಗಿಲೋಣಿ

ಪ್ರಕಾಶನ - ಹರಿವು ಬುಕ್ಸ್

ಸಾಮಾನ್ಯವಾಗಿ ಆತ್ಮಚರಿತ್ರೆ ಅಂದಾಗ ಮಹಾತ್ಮರ ಆತ್ಮಕಥೆ ನೆನಪಾಗುತ್ತದೆ. ಅಂತದ್ದನ್ನು ಓದುವಾಗ - "ನಾವಷ್ಟು ಕಷ್ಟಪಟ್ಟಿಲ್ಲ, ನಮಗೆ ಅದೆಲ್ಲಾ ಸಾಧ್ಯವಿಲ್ಲ ಬಿಡಪ್ಪ, ಅವರು ದೊಡ್ಡ ಮನುಷ್ಯರು!" ಅನ್ನೋ ಭಾವನೆ ಮೂಡಿ ಅವರ ಚರಿತ್ರೆಯನ್ನ ಒಂದು ಡಿಸ್ಟನ್ಸ್ ಇಂದ ನೋಡುತ್ತಿರುತ್ತೇವೆ. ಆದರೆ ವಿಕಾಸ್ ನೇಗಿಲೋಣಿಯವರ ‘ರಥಬೀದಿ ಎಕ್ಸ್‌ಪ್ರೆಸ್‌’ ಓದಿದಾಗ ಇದು ಬಹುಪಾಲು ಹುಡುಗರ ಆತ್ಮಕಥೆ ಅನ್ನಿಸೋದು ಪಕ್ಕ. ಟೀನೇಜ್‌ನಲ್ಲಿದ್ದಾಗ ಇರೋ ಭಯ, ಹಿಂಜರಿಕೆ, ಸಂಕೋಚ, ದಡ್ಡತನ, ಹುಂಬತನ ಎಲ್ಲವನ್ನೂ ಅನುಭವಕ್ಕೆ ತರುವ ಘಟನೆಗಳು ನನಗೆ ಬಹಳ ಹಿಡಿಸಿದವು. ಹಾಸ್ಟೆಲ್‌ ಮೆಟ್ಟಿಲೂ ಹತ್ತಿರದ ನನ್ನಂತ ಹುಡುಗಿಯರು ಆ ವಯಸ್ಸಿನಲ್ಲಿ - ಶಾಲೆ, ಮನೆ ಸಂಗೀತ ಕ್ಲಾಸಲ್ಲೋ ಇನ್ಯಾವುದೋ ಕ್ಲಾಸಲ್ಲೋ ನಮ್ಮ ಬಹುಪಾಲು ಸಮಯ ಕಳೆದಿರುತ್ತೇವೆ. ಹುಡುಗರಿಗೆ ಮಾತ್ರ ಸಿಗೋ ಹೊರಜಗತ್ತಿನ ಆ ಅನುಭವಗಳಿಂದ ವಂಚಿತರಾಗುತ್ತೇವೆ ಅನ್ನೋದು ನನ್ನ ಅಭಿಪ್ರಾಯ (ಸ್ವಲ್ಪ ಹೊಟ್ಟೆಉರಿ). ಈ ಪುಸ್ತಕ ಆ ಕೊರತೆಯನ್ನ ನೀಗಿಸಿದೆ.

ಅಮ್ಮನ ಸೆರಗನ್ನ ಹಿಡಿದುಕೊಂಡು ಓಡಾಡುವ, ಗಾಬರಿಯಲ್ಲಿ ಸಾಂಬರ್ ಚೆಲ್ಲಿಬಿಡುವ, ಅಳುವಾಗ ಸಂಸ್ಕೃತದಲ್ಲಿ ಅಳಬೇಕೋ ಕನ್ನಡದಲ್ಲಿ ಅಳಬೇಕೋ ಅಂತ ಗೊತ್ತಾಗದ ಈ ಹುಡುಗ ನಮ್ಮ ಕಮರ್ಶಿಯಲ್ ಸಿನಿಮಾಗಳಲ್ಲಿ ಕಾಣಸಿಗೋ ರಾಕಿ ಭಾಯ್ ಚೈಲ್ಡುಡ್ ವರ್ಶನ್ ನಂತಹ ಹುಡುಗನ ಜೊತೆ ಸೇರಿದರೆ ಯಾರು ಯಾರನ್ನ ಬದಲಾಯಿಸಬಹುದು ಎಂಬ ವಿಚಿತ್ರವಾದ ಕಲ್ಪನೆ ಬಂದು ನಗುಬಂತು. ರಥಬೀದಿಯಲ್ಲಿ ಸಿಕ್ಕ ಜನ, ಬಸ್ಸು, ಹೋಟೆಲ್‌ನ ಇಡ್ಲಿ, ಸೀಮೆ ಎಣ್ಣೆ ಸ್ಟವ್ ಎಲ್ಲವೂ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ. ಆ ದಾರಿಯಲ್ಲಿ ನಮ್ಮನ್ನೂ ಟೂರ್ ಕರೆದೊಯ್ದಿದ್ದಕ್ಕೆ ವಿಕಾಸ್ ಅವರಿಗೆ ಧನ್ಯವಾದಗಳು.

Back to blog

Leave a comment