ಡಾ.ಸೂರ್ಯಕುಮಾರ್ ಕೆ.ಬಿ  ಅವರ “ಮಂಗಳಿ”  ಪುಸ್ತಕದ ವಿಮರ್ಷೆ

ಡಾ.ಸೂರ್ಯಕುಮಾರ್ ಕೆ.ಬಿ ಅವರ “ಮಂಗಳಿ” ಪುಸ್ತಕದ ವಿಮರ್ಷೆ

ಹರಿವು ಪ್ರಕಾಶನದ ಹೊಸ ಪುಸ್ತಕ ಮಂಗಳಿಯ ಪುಟ ತಿರುವುತ್ತಾ ಹೋದಂತೆ ಅದರಲ್ಲಿನ ಪದಗಳು ಹೊಸದ್ದೊಂದು ಲೋಕವನ್ನೇ ಓದುಗನ ಕಣ್ಣ ಮುಂದೆ ತೆರೆದಿಡುತ್ತಾ ಹೋಗುತ್ತದೆ, ಹೊಸ ಲೋಕ ಮಾತ್ರವೇ ಅಲ್ಲ, ಸಮಾಜದಲ್ಲಿ ಹಾಸ್ಯಾಸ್ಪದವಾಗಿರುವ , ನಿಲ೯ಕ್ಷಿಸಲ್ಪಟ್ಟಿರುವ ವ್ಯಕ್ತಿಗಳ ಜೀವನವನ್ನೇ ಮಂಗಳಿ ತೆರೆದಿಡುತ್ತದೆ, ಮಂಗಳಿ ಅಷ್ಟೊಂದು ಶಕ್ತಿಶಾಲಿಯಾಗಿ ಪದಗಳನ್ನು ಕಟ್ಟಿಕೊಟ್ಟಿದೆ, ಯಾಕೆಂದರೆ, ಇದು ಹೇಳುವುದು ಸಾಮಾನ್ಯ ಜೀವಿಗಳ ಕಥೆಯನ್ನಲ್ಲ, ಈ ಸಮಾಜದ ವಿಶೇಷ ವ್ಯಕ್ತಿಗಳ ಕಥೆ ಅಥವಾ ವ್ಯಥೆಯನ್ನು....

ಇವರು ನಮ್ಮ ನಿಮ್ಮಂಥವರಲ್ಲ, ಇವರು ನಮ್ಮಂತೆ, ನಿಮ್ಮಂತೆ, ಅವರಂತೆ,, ಇವರಂತೆ,, ನಮ್ಮೆಲ್ಲರಂತೆ ಇರದ ಗಂಡೂ ಹೌದು ಹೆಣ್ಣು ಹೌದು ಎಂಬಂತೆ ಇರುವ ಮಂಗಳಮುಖಿಯರು, ಇವರ ದೇಹರಚನೆಯಂತೆ ಇವರ ಜೀವನ ಕೂಡ ವಿಚಿತ್ರ,, ಚಪ್ಪಾಳೆ ತಟ್ಟುತ್ತಾ ಹಣಕ್ಕಾಗಿ ಕೋರುವ (ಕೆಲವರ ಪಾಲಿಗೆ ಇದು ಪೀಡಿಸುವ) ಈ ಮಂಗಳಮುಖಿಯರು ಮೊದಲೆಲ್ಲಾ ಮಹಾನಗರಗಳಲ್ಲಿ ಮಾತ್ರ ಕಂಡು ಬರುತ್ತಿದ್ದರು, ಇತ್ತೀಚಿನ ವಷ೯ಗಳಲ್ಲಿ ಪುಟ್ಟ ಸಿಟಿಗಳಲ್ಲಿಯೂ ಹಳ್ಳಿಗಳಲ್ಲಿಯೂ ಮಂಗಳಮುಖಿಯರು ಎಂಟ್ರಿ ಕೊಟ್ಟಿದ್ದಾರೆ, ಹೆಚ್ಚುತ್ತಿರುವ ಮಂಗಳಮುಖಿಯರ ಸಂಖ್ಯೆಯಿಂದಾಗಿ ಇವರು ಕೂಡ ಆಥಿ೯ಕ ಕ್ರೋಡೀಕರಣಕ್ಕಾಗಿ ಬೇರೆ ಬೇರೆ ಪೇಟೆ ಪಟ್ಟಣಗಳಿಗೆ ತೆರಳಬೇಕಾದ ಅನಿವಾಯ೯ತೆಯಲ್ಲಿ ಸಿಲುಕಿಕೊಂಡಿದ್ದಾರೆ.

ಇಂಥ ಮಂಗಳಮುಖಿಯರ ನಿಜಜೀವನದ ಕುರಿತು ಮಂಗಳಿ ಎಂಬ ಅಥ೯ಪೂಣ೯ ಹೆಸರಿನ ಕೖತಿಯಲ್ಲಿ ಸಮಗ್ರ ಮಾಹಿತಿಯಿದೆ. ಕೖತಿಯ ಲೇಖಕ ಎಷ್ಟು ಚಂದವಾಗಿ ಮಂಗಳಮುಖಿಯರ ಜೀವನಗಾಥೆಯನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರೆ, ಓದುಗನೆದುರಲ್ಲಿ ಮಂಗಳಮುಖಿ ಕುಳಿತು ತನ್ನ ಕಥೆ ಅಥವಾ ವ್ಯಥೆಯನ್ನು ನಿರೂಪಿಸುತ್ತಾ ಹೋದಂತೆ ಭಾಸವಾಗುತ್ತದೆ. ಆತ ಅಥವಾ ಆಕೆಯ ಕಥೆಗೆ ಮನ ಮಿಡಿಯುವಂತೆ ಮಂಗಳಿಯಲ್ಲಿ ನಿರೂಪಣಾ ಶೈಲಿಯಿದೆ.

ಅವರೂ ಮನುಷ್ಯರು, ಅವರ ಲೈಂಗಿಕ ಹಾಮೋ೯ನುಗಳ ವ್ಯತ್ಯಾಸದಿಂದ ಅವರ ನಡವಳಿಕೆ ವಿಚಿತ್ರವಾಗಿದೆಯೇ ವಿನಾ ಅವರನ್ನೂ ಮನುಷ್ಯರಂತೆ ನೋಡಬಹುದು ಎಂಬ ಭಾವನೆ ಹೆಚ್ಚಿನ ಜನರಲ್ಲಿ ಇಲ್ಲ, ಏಕೆಂದರೆ ಇವರ ಜೀವನಶೈಲಿ, ಆಚಾರ ವಿಚಾರಗಳಾಗಲೀ ಹೆಚ್ಚಿನ ಜನರಿಗೆ ತಿಳಿದಿಲ್ಲ, ಅಷ್ಟು ಯೋಚನೆ ಮಾಡುವ ಪುರುಸೊತ್ತು ಕೂಡ ನಮಗೆ ಇಲ್ಲ ಎಂದು ಮಂಗಳಿಯ ಮುನ್ನುಡಿಯಲ್ಲಿ ಪತ್ರಕತ೯ ವಿನಯ್ ಮಾಧವ್ ಹೇಳಿದ್ದಾರೆ.

ಮಂಗಳಮುಖಿಯರ ಬದುಕು ಬವಣೆಗಳ ಬಗ್ಗೆ ಹೇಳುತ್ತಲೇ ಅವರ ದೇಹದಲ್ಲಿ ಸಂಭವಿಸುವ ಬದಲಾವಣೆಗಳಿಗೆ ವೈಜ್ಞಾನಿಕ ಕಾರಣಗಳನ್ನೂ ಲೇಖಕರು ಸವಿವರವಾಗಿ ಉಲ್ಲೇಖಿಸಿದ್ದಾರೆ, ವೈದ್ಯಕೀಯ ಅಂಶಗಳ ದಾಖಲೆಯೂ ಸಾಕಷ್ಟಿದೆ.
ನಾವು ಯಾರು ಎಂಬ ಪ್ರಶ್ನೆಯೊಂದಿಗೆ ಪ್ರಾರಂಭವಾಗುವ ಮಂಗಳಿಯ ದಾಖಲೆಗಳು ಒಂದೊಂದಾಗಿ ಅವರ ಜೀವನ ಪಯಣವನ್ನು ತೆರೆದಿಡುತ್ತಾ ಸಾಗುವ ಶೈಲಿಯೂ ಚೆನ್ನಾಗಿದೆ. ನಿಮ್ಮ ವತ೯ನೆಯೇ ನನಗಥ೯ವಾಗುತ್ತಿಲ್ಲ, ಇದೊಂದು ರೀತಿಯಲ್ಲಿ ಭಿಕ್ಷೆ ಬೇಡೋದಾ, ದಿನನಿತ್ಯದ ಖಚಿ೯ಗಾಗಿ ಸಂಪಾದನೆ ಮಾಡೋದಾ, ಇಲ್ಲಾ ಇತರರಿಗೆ ನೀವು ಆಶೀವಾ೯ದ ಕೊಡುವ ದೈವ ಪುರುಷರೇ, ಸಂತರೇ, ? ನನಗಂತೂ ಸರಿಯಾಗಿ ಅಥ೯ವಾಗುತ್ತಿಲ್ಲ, ಎಂದು ಗೋಗರೆಯುವ ಮಂಜು ಎಂಬಾತನ ಮಾತಿನಲ್ಲಿ ಮಂಗಳ ಮುಖಿಯರ ವೇದನೆ ಸೂಚ್ಯವಾಗಿ ಅಡಕವಾಗಿದೆ, ತನ್ನಲ್ಲಿಗೆ ಬಂದ ಮಂಗಳಮುಖಿಯೊಂದಿಗೆ ಸಾಕಷ್ಟು ಸಮಾಲೋಚಿಸಿ, ಅವರ ಮನಸ್ಸುಮುಟ್ಟಿ ಮಾಹಿತಿ ಸಂಗ್ರಹಿಸಿ, ಮಂಗಳಿಯನ್ನು ಓದುಗರ ಮುಂದೆ ಲೇಖಕರು ತಾಳ್ಮೆಯಿಂದ ತಂದಿದ್ದಾರೆ, ಮಂಗಳಮುಖಿಯರ ಜೀವನ ಕುರಿತಂತೆ ಕನ್ನಡದ ಓದುಗರಿಗೆ ಅಗತ್ಯವಾಗಿದ್ದ ದಾಖಲಾಹ೯ ಕೖತಿಯೂ ಮಂಗಳಿ ಮೂಲಕ ಹೊರಬಂದಿದೆ, ಮಾಹಿತಿ, ನಿರೂಪಣಾ ಶೈಲಿ ಎಲ್ಲವೂ ವಾಹ್ ಎನ್ನುವಂತಿದೆ, ಹರಿವು ಪ್ರಕಾಶನ ಸಂಸ್ಥೆಯು ಎಲ್ಲಿಯೂ ರಾಜೀ ಮಾಡಿಕೊಳ್ಳದೇ ಮುಖಪುಟದಿಂದ ಮೊದಲ್ಗೊಂಡು ಕೖತಿಯನ್ನು ಬಹಳ ಅಂದವಾಗಿ ಪ್ರಕಟಿಸಿದೆ,

ಅಂದಂತೆ, ಮಂಗಳಿಯ ಲೇಖಕ,, ನಮ್ಮ ಮಡಿಕೇರಿಯ ಡಾ, ಕೆ ಬಿ ಸೂಯ೯ಕುಮಾರ್ ಎಂಬುದೇ ನಮಗೆಲ್ಲರಿಗೂ ಹೆಮ್ಮೆ,l.
ಮಂಗಳಿ ಮೂಲಕ ನಮ್ಮ ಪ್ರೀತಿಯ ಹಿರಿಯರಾದ ಸೂಯ೯ಕುಮಾರ್ ಬರಹದ ಶೈಲಿ ಮತ್ತೊಂದು ಮಜಲು ಮುಟ್ಟಿದೆ ಎಂದರೆ ಅತಿಶಯೋಕ್ತಿಯಲ್ಲ,

ವೈದ್ಯ ಕಂಡ ವಿಸ್ಮಯ, ಕೌತುಕಗಳ ಮಾಯಾಜಾಲ, ವೈದ್ಯಲೋಕದ ಕಥೆಗಳು, ನಿಗೂಡ ಕೊಲೆಗಳು ಎಂಬೆಲ್ಲಾ ಪುಸ್ತಕಗಳನ್ನು ಕಳೆದ ಎರಡು ವಷ೯ಗಳಲ್ಲಿ ಓದುಗರಿಗೆ ನೀಡಿದ್ದ ಸೂಯ೯ಕುಮಾರ್ ಈ ಬಾರಿ ಕನ್ನಡ ಸಾರಸ್ವತ ಲೋಕಕ್ಕೆ ಖಂಡಿತವಾಗಿಯೂ ಅಗತ್ಯವಾಗಿದ್ದ ದಾಖಲಾಹ೯ ಕೖತಿಯನ್ನು ಮಂಗಳಿಯ ಮೂಲಕ ನೀಡಿದ್ದಾರೆ, ತನ್ನ ರೋಗಿಯನ್ನು ಪರೀಕ್ಷಿಸಿದಷ್ಟೇ ಕಾಳಜಿಯಿಂದ ಮಂಗಳಿಯ ಮಾಹಿತಿಯನ್ನೂ ಕೂಲಂಕುಶವಾಗಿ ಹೊರತರುವಲ್ಲಿ ವೈದ್ಯ ಸೂಯ೯ಕುಮಾರ್ ಒಳಗಿರುವ ಲೇಖಕ ಸಫಲನಾಗಿದ್ದಾನೆ,

ವೈದ್ಯರೋವ೯ರಿಗೆ ಬರವಣಿಗೆಯ ಶೈಲಿಯೂ ಸಿದ್ದಿಸಿದರೆ ಎಂಥ ಅದ್ಬುತ ಕೖತಿ ಹೊರಹೊಮ್ಮುತ್ತದೆ ಎಂಬುದಕ್ಕೆ ಸೂಯ೯ಕುಮಾರ್ ನಿದಶ೯ನವಾಗಿದ್ದಾರೆ,
ಮಂಗಳಿ ಮೂಲಕ ಮಂಗಳಮುಖಿಯರ ಜೀವನಗಾಥೆಯನ್ನು ಡಾಕ್ಟರ್ ಸೂಯ೯ಕುಮಾರ್ ಸೂಯ೯ನ ಬೆಳಕಿನ ಮುಂದಿಟ್ಟಿದ್ದಾರೆ,

ಮಂಗಳಿಯನ್ನು ಕೊಂಡು ಓದಿ!,
 ಅನಿಲ್ ಹೆಚ್ ಟಿ

ಮಂಗಳಮುಖಿಯೊಬ್ಬರ ಬದುಕು-ಬವಣೆಗಳನ್ನು ವಿವರಿಸುವ ಪುಸ್ತಕ, ಡಾ.ಸೂರ್ಯಕುಮಾರ್‌ ಕೆ.ಬಿ ಅವರ “ಮಂಗಳಿ” ಈಗಲೇ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻
https://harivubooks.com/products/mangali-novel-kb-suryakumar-kannada-book

Back to blog