Skip to product information
1 of 1

Dr. K. Mohan Krishna Rai

ಯುದ್ಧ ಮತ್ತು ಒಪ್ಪಂದ

ಯುದ್ಧ ಮತ್ತು ಒಪ್ಪಂದ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping

- Cash on Delivery (COD) Available

'ಯುದ್ಧ ಮತ್ತು ಒಪ್ಪಂದ' ಕೃತಿಯು ೧೭ ಮತ್ತು ೧೮ನೆಯ ಶತಮಾನಗಳ ದಕ್ಷಿಣ ಭಾರತದ ರಾಜಕಾರಣವನ್ನು ಅರ್ಥೈಸಿಕೊಳ್ಳುವ ಒಂದು ಪ್ರಯತ್ನವಾಗಿದೆ. ಯುದ್ಧ ಮತ್ತು ಒಪ್ಪಂದದಿಂದ ಹೊರತಾದ ರಾಷ್ಟ್ರವನ್ನು ಜಗತ್ತಿನಲ್ಲಿ ಗುರುತಿಸುವುದೇ ಕಷ್ಟ. ಯುದ್ಧದ ಸಮಾಣ ಹಾಗೂ ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ವ್ಯತ್ಯಾಸಗಳಿದ್ದರೂ ಯುದ್ಧಕ್ಕೆ ಕಾರಣವಾಗುವ ಮಾನವರ ಮಾನಸಿಕ ನೆಲೆ ಹಾಗೆಯೇ ಮುಂದುವರಿದುಕೊಂಡು ಬಂದಿದೆ, ಯುದ್ರದ ಚರಿತ್ರ ಹಾಗೂ ಸೈನಿಕ ಚರಿತ್ರೆ ಈ ಮಹತ್ವದ ಅಂಶವನ್ನು ದಾಖಲಿಸುತ್ತದೆ. ೧೭ ಮತ್ತು ೧೮ನೆಯ ಶತಮಾನಗಳ ದಕ್ಷಿಣ ಭಾರತದ ರಾಜಕಾರಣ, ಇದಕ್ಕೆ ಉತ್ತಮ ನಿದರ್ಶನವಾಗಿದೆ. ಸ್ಥಳೀಯ ಹಾಗೂ ವಿದೇಶಿ ರಾಜಕೀಯ ಶಕ್ತಿಗಳ ನಡುವೆ ನಡೆದ ಯುದ್ಧಗಳು ಹಾಗೂ ಒಪ್ಪಂದಗಳು ಮೇಲ್ನೋಟಕ್ಕೆ ರಾಜಕೀಯ ಸಂಘರ್ಷಗಳಾಗಿ ಕಂಡುಬಂದರೂ ನಿಜಾರ್ಥದಲ್ಲಿ ಅವು ಸಾಮಾಜಿಕ ನಿಯಂತ್ರ ಮಾಗೂ ಆರ್ಥಿಕ ವಿಸ್ತರಣೆಯ ಉದ್ದೇಶವನ್ನು ಪ್ರಧಾನವಾಗಿ ಹೊಂದಿದ್ದವು. ಹಾಗಾಗಿ ಯುದ್ಧವನ್ನು ಆರ್ಥಿಕ ಚಟುವಟಿಕೆಯಾಗಿ ನೋಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಯುರೋಪಿನ ವ್ಯಾಪಾರಿ ಕಂಪೆನಿಗಳು ವ್ಯಾಪಾರದ ವಿಸ್ತರಣೆಯ ಜೊತೆ-ಜೊತೆಗೆ ಸಾಮಾಜ ಎಸ್ತರಣೆಗೂ ತೊಡಗಿದಾಗ ಸ್ಥಳೀಯ ಅರಸುಮನೆತನಗಳು ಎದುರಿಸಿದ ಬಿಕ್ಕಟ್ಟು ಹಾಗೂ ಆ ಬಿಕ್ಕಟ್ಟಿನಿಂದ ಹೊರಬರಲು ಕಂಡುಕೊಂಡ ಮಾರ್ಗೋಪಾಯಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. 대전 ಇಂಡಿಯಾ ತಮ್ಮ ಮರ್ಕೆಂಟೈಲ್ ಹಾಗೂ ಇಂಪೀರಿಯಲ್ ಧೋರಣೆಗಳಿಂದ ಸ್ಥಳೀಯವಾಗಿ ಗೊಂದಲಗಳನ್ನು ಸೃಷ್ಟಿಸಿ ಅದರ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದವು. ಈಸ್ಟ್ ಇಂಡಿಯಾ ಕಂಪೆನಿಗಳ ಈ ಧೋರಣೆಗಳನ್ನು ಹಾಗೂ ಅವು ಹುಟ್ಟುಹಾಕಿದ ಯುದ್ಧಗಳ ಯುಗವನ್ನು ಕರ್ನಾಟಿಕ್ ಯುದ್ಧಗಳು, ಆಂಗ್ಲೋ-ಮರಾಠ ಯುದ್ಧಗಳು ಹಾಗೂ ಅಂಗೂ ಮೈಸೂರು ಯುದ್ಧಗಳ ಮೂಲಕ ಪ್ರಸ್ತುತ ಕೃತಿಯಲ್ಲಿ ಚರ್ಚಿಸಲಾಗಿದೆ. ವಸಾಹತುಶಾಹಿಗಳ ಪದೇಶವಾದ ಬಳಿಕ ಸ್ಥಳೀಯ ರಾಜಕಾರಣ, ಹಾಗೂ ಆರ್ಥಿಕತೆಯಲ್ಲಾದ ಬದಲಾವಣೆಗಳು, ಅದರಲ್ಲೂ ಮುಖ್ಯವಾಗಿ ಹೈದರ್ ಆಲಿ ಹಾಗೂ ಟಿಪ್ಪು ಸುಲ್ತಾನ್ ಬಿಟಿಶ್ : ಪಭುತ್ತವನ್ನು ಮಟ್ಟ ಹಾಕಲು ರೂಪಿಸಿದ ನಾನು ಪ್ರಯೋಗಗಳು ಈ ಕೃತಿಯಲ್ಲಿ ವಿಸ್ತ್ರತವಾಗಿ ಚರ್ಚೆಗೊಳಗಾಗಿವೆ. ಬ್ರಿಟಿಶ್ ಪ್ರಭುತ್ವ ಸ್ಥಾಪನೆಯಾದ ಬಳಿಕ ಮೈಸೂರಿನ ಭೂಪಟದ ಮರುರಚನೆಗೆ ವಸಾಹತು ಕರ್ನಾಟಕವು ಹಲವಾರು ಘಟಕಗಳಾಗಿ ವಿಭಜನೆಗೊಂಡಿತು. ಬ್ರಿಟಿಶ್ ಸರ್ಕಾರ ತನ್ನ ಅವಶ್ಯಕತೆಗಳಿಗೆ ಅನುಗುಣವಾಗಿ ಭೂಪ್ರದೇಶ ಗಳನ್ನು ಹಂಚುವ ಹಾಗೂ ವಿಭಜಿಸುವ ಕಾರ್ಯವನ್ನು ಮಾಡಿತು. ಬ್ರಿಟಿಶ್ ಪ್ರಭುತ್ವ ಸ್ಥಾಪನೆಯ ವಿಧಾನ ಹಾಗೂ ಕಾರ್ಯತಂತ್ರವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿ, ಅದರ ಬೇರುಗಳನ್ನು ಇಂಗ್ಲಿಶ್ ಈಸ್ಟ್ ಇಂಡಿಯಾ ಕಂಪೆನಿಯ ಆರಂಭದ ದಿನಗಳಿಂದಲೇ ಹುಡುಕುವ ಪ್ರಯತ್ನ ಪ್ರಸ್ತುತ ಕೃತಿಯದ್ದು. ಇಂತಹ ವಿಶಿಷ್ಟ ಕೃತಿಯನ್ನು ರಚಿಸಿರುವ ಡಾ. ಕೆ. ಮೋಹನ್‌ಕೃಷ್ಣ ರೈ ಅವರಿಗೆ ಅಭಿನಂದನೆಗಳು,

ಡಾ. ಮಲ್ಲಿಕಾ, ಎಸ್. ಘಂಟಿ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)