ಸುಂದರ್ ಬಾಬು
Publisher: ಸಾವಣ್ಣ ಪ್ರಕಾಶನ
Couldn't load pickup availability
ಕೆಲವರು ಕಾರಣವಿಲ್ಲದೇ ಸುಮ್ಮನೆ ಟೆನ್ಷನ್‌ಗೆ ಒಳಗಾದರೆ ಇನ್ನು ಕೆಲವರು ಸಣ್ಣ ಪುಟ್ಟ ಕಾರಣಗಳಿಗೆ ಟೆನ್ಸ್ ಆಗುತ್ತಾರೆ. ಇನ್ನು ಕೆಲವರು ತಾವೇ ಮಾಡಿಕೊಂಡ ತಪ್ಪುಗಳ ಕಾರಣದಿಂದಾಗಿ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಟೆನ್ಷನ್ಗೆ ಗುರಿಯಾಗುತ್ತಾರೆ. ಅನಿವಾರ್ಯವಾಗಿ ಕಷ್ಟಗಳನ್ನು ಎದುರಿಸಬೇಕಾದ ಘಟನೆಗಳು ಸಂಭವಿಸಿ, ಜೀವನವೆಲ್ಲಾ ಮಾನಸಿಕ ಉದ್ವೇಗಕ್ಕೆ ಗುರಿಯಾಗುವ ಜನರೂ ಇದ್ದಾರೆ. ಗಂಭೀರ ಸಮಸ್ಯೆಗಳಿಗೆ ತಲೆ ಕೆಡಿಸಿಕೊಳ್ಳದೇ ಲೈಲ್ಲಿ ಇವೆಲ್ಲಾ ಸಾಮಾನ್ಯ ಎನ್ನುವ ಮನೋಭಾವ ಮತ್ತೆ ಕೆಲವರದ್ದು.
ನೆಮ್ಮದಿಯಾಗಿ ಬಾಳಲು ಸಾಕಷ್ಟು ಅವಕಾಶಗಳಿವೆ. ತಮಗೆ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡದೇ ಟೆನ್ಸ್ ಆಗುವರು ಕೆಲವರಾದರೆ, ಯಾವುದೇ ಸಣ್ಣಪುಟ್ಟ ಸಮಸ್ಯೆಗಳಿಗೆ ಅಲ್ಲಲ್ಲೇ ಪರಿಹಾರ ಕಂಡುಕೊಂಡು ನಿರಾಳವಾಗುವವರು ಕೆಲವರು.
ಟೆನ್ಷನ್ನಿಂದ ಮುಕ್ತಿ ಪಡೆಯುವುದು ಹೇಗೆ? - ಈ ಕೃತಿಯಲ್ಲಿ ಈ ಪ್ರಶ್ನೆಗೆ ಉತ್ತರಗಳಿವೆ.
