ಸತೀಶ ಜಿ. ನಾಯ್ಕ
Publisher:
Couldn't load pickup availability
ಕರ್ನಾಟಕದ ಹಲವು ಭಾಗಗಳಲ್ಲಿ ಹದಿನಾರನೆ ಶತಮಾನದಿಂದಲೂ ರೂಢಿಯಲ್ಲಿ ಇದ್ದ ಕಲೆ ಯಕ್ಷಗಾನ. ಕನ್ನಡದ ಅತ್ಯಂತ ಮುಖ್ಯವಾದ ಕಲೆಯೂ ಹೌದು. ಯಕ್ಷಗಾನ ಚರಿತ್ರೆಯನ್ನು ಕಟ್ಟಿದವರು ಯಕ್ಷಗಾನ ಕಲಾವಿದರೆ. ಇಲ್ಲಿ ಕಲಾವಿದರ ಜೀವನ ಪರಿಚಯದೊಂದಿಗೆ ಅವರ ಕಲಾ ವಿಚಾರದ ಪರಿಚಯವೂ ಆಗಿದೆ. ಹೊನ್ನಾವರ ತಾಲೂಕಿನ ಯಕ್ಷಗಾನ ಪರಂಪರೆಯನ್ನು ಲೇಖಕರು ಪರಿಚಯಿಸಿದ್ದಾರೆ. ತಲೆಮಾರುಗಳ ಕಲಾವಿದರ ಭಾವಚಿತ್ರಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿದ್ದು ಮೆಚ್ಚುವಂತಹದ್ದು. ಹಾಗಾಗಿ ಓದುಗರಿಗೆ ಹೊಸ ಅನುಭವವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಯಕ್ಷಗಾನ ಜನಪದ ಕುಣಿತಗಳು, ಪದಗಳು, ಹಾಡುಗಳು, ಮಟ್ಟುಗಳು ಮತ್ತು ತಿಟ್ಟುಗಳಿಂದ ಕೂಡಿದೆ. ಇವೆಲ್ಲದರ ವಾರಸುದಾರರೆ, ಅದರ ಕಲಾವಿದರು. ನವರಸ ಭರಿತವಾದ ಯಕ್ಷಗಾನವು ಕರಾವಳಿ ಜಿಲ್ಲೆಗಳಲ್ಲಿ ಗಂಡು ಕಲೆಯಾಗಿ ಮೆರೆದಿದೆ. ಯಕ್ಷಗಾನಕ್ಕೆ ಬಯಲಾಟ, ಆಟ, ಮೇಳ, ಪ್ರಸಂಗ, ದಶಾವತಾರದ ಆಟ ಇತ್ಯಾದಿ ಪದಗಳು ಬಳಕೆಯಲ್ಲಿವೆ. ಇಲ್ಲಿ ಮುಮ್ಮೇಳ ಕಲಾವಿದರಷ್ಟೇ ಹಿಮ್ಮೇಳ ಕಲಾವಿದರೂ ವಿಶೇಷ ಪಾತ್ರವಹಿಸುತ್ತಾರೆ. ಬದಲಾದ ಜೀವನ ಶೈಲಿ, ಆಧುನಿಕ ತಂತ್ರಜ್ಞಾನ, ಕೆಲಸಗಳ ಒತ್ತಡ ಇತ್ಯಾದಿ ಹತ್ತು ಹಲವು ಕಾರಣಗಳಿಂದ ಇಂದು ಯಕ್ಷಗಾನದಲ್ಲಿಯೂ ಕೆಲವು ಪರಿವರ್ತನೆಗಳು ಅನಿವಾರ್ಯವಾಗಿವೆ. ಕಾಲಮಿತಿಯ ಯಕ್ಷಗಾನ ಪ್ರದರ್ಶನ, ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ, ಮಹಿಳಾ ಯಕ್ಷಗಾನ ಇತ್ಯಾದಿ ಬಳಕೆಯಲ್ಲಿವೆ. ಏನೇ ಆದರೂ ಯಕ್ಷಗಾನದ ಮೂಲ ಸತ್ವ ಮತ್ತು ತತ್ವವನ್ನು ಕಡೆಗಣಿಸಬಾರದು. ಅದರ ಮೂಲ ಸೊಗಡನ್ನು ಎಂದಿಗೂ ಉಳಿಸಿಕೊಳ್ಳಬೇಕು. ಈ ಯಕ್ಷಗಾನ ಕಲೆಯ ಮುಖ್ಯ ಉದ್ದೇಶವೆ ಧರ್ಮ ಜಾಗೃತಿ ಮತ್ತು ದುಶ್ಚಟಗಳನ್ನು ದೂರಮಾಡಿ ಆರೋಗ್ಯ ಪೂರ್ಣ ಸಮಾಜ ರೂಪಿಸುವುದು.
