{"product_id":"vijnana-kautukagala-mahayana-l-p-kulakarni-kannada-articles","title":"ವಿಜ್ಞಾನ ಕೌತುಕಗಳ ಮಹಾಯಾನ","description":"\u003cp data-path-to-node=\"3\"\u003e\"ನಮ್ಮ ಆತ್ಮೀಯ ಸಹೃದಯ ಬಂಧು ಎಲ್.ಪಿ. ಕುಲಕರ್ಣಿ, ಬಾದಾಮಿ — ಒಬ್ಬ ಆದರ್ಶ ಶಿಕ್ಷಕ. ಇವರ ಚಟುವಟಿಕೆ ನಿತ್ಯ ಪಾದರಸದಂತೆ ಚೂಟಿಯೋ ಚೂಟಿ. ದಿನನಿತ್ಯದ ಕಾಲವನ್ನು ಹರಣ ಮಾಡದೆಯೇ ಹೂರಣವಾಗಿಸುವ ಪ್ರವೃತ್ತಿ ಇವರದು. ಓದು-ಬರಹ ಇವರ ನಿತ್ಯ ಅವಿಭಾಜ್ಯ ಅಂಗ. ದಿನನಿತ್ಯ ಓದುವುದು, ಬರೆಯುವುದು; ತನಗೆ ತಿಳಿದ ವಿಚಾರವನ್ನು ಮತ್ತೊಬ್ಬರಿಗೆ ತಿಳಿಸುವುದು; ಪುಟ್ಟ ಪುಟ್ಟ ಲೇಖನಗಳನ್ನು ಪತ್ರಿಕೆಗಳಿಗೆ ಕಳುಹಿಸಿ, ಸಾರಸ್ವತ ಲೋಕಕ್ಕೆ ಜ್ಞಾನವನ್ನು ಪಸರಿಸುವ ವಿಜ್ಞಾನ ಬೋಧಕ ಇವರು.\u003c\/p\u003e\n\u003cp data-path-to-node=\"4\"\u003eವಿಜ್ಞಾನ ಬುದ್ಧಿ, ತತ್ವಜ್ಞಾನಿ ಮನಸ್ಸು, ಕವಿ ಹೃದಯ — ಮೂರನ್ನೂ ಮೇಳೈಸಿಕೊಂಡಿರುವ ಆತ್ಮೀಯ ನಮ್ಮ ಈ ಕುಲಕರ್ಣಿ. ಜಟ್ಟಿಯಂತೆ ಕುಳಿತು ಗಟ್ಟಿತನದಿಂದ ವಿಜ್ಞಾನದ ವಿಚಾರಗಳನ್ನು ಭಟ್ಟಿ ಇಳಿಸುವ ಇವರ ಬರಹ ಓದುಗನ ಮೆದುಳಿಗೆ ವಿಚಾರ ಪ್ರಚೋದಕವಾಗಿ, ವಿಜ್ಞಾನ ಬುದ್ಧಿಗೆ, ವೈಚಾರಿಕತೆಗೆ ದಾರಿಮಾಡಿಕೊಡುತ್ತದೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ವಿಜ್ಞಾನ ಸಾಹಿತ್ಯಕ್ಕೆ 'ಕಿರಿದರೊಳ್ ಪಿರಿದರ್ಥಮಂ ಅಡಕಿಸಿದಂತೆ' ಚಿಕ್ಕ ಚಿಕ್ಕ ಲೇಖನಗಳ ಮೂಲಕ ಚೊಕ್ಕತನದಿಂದ ಅಚ್ಚುಕಟ್ಟಾಗಿ ಬರೆಯುವ ಬರವಣಿಗೆ ಇವರಿಗೆ ಸಿದ್ಧಿಸಿದೆ. ಕನ್ನಡ ತಾಯಿಯ ನಾಡಿನಲ್ಲಿ, ಅದರಲ್ಲೂ ಕನ್ನಡದಲ್ಲಿ ಇವರ ಬರವಣಿಗೆಯ ಮೆರವಣಿಗೆ ನಿತ್ಯೋತ್ಸವದಂತೆ ಸಂಭ್ರಮದಿಂದ ಸಾಗುತ್ತಿರಲಿ.\u003c\/p\u003e\n\u003cp data-path-to-node=\"5\"\u003e'ವಿಚಾರವನ್ನು ಬಿತ್ತು; ಕೃತಿಯನ್ನು ಬೆಳೆಸು. ಕೃತಿಯನ್ನು ಬಿತ್ತು; ಸ್ವಭಾವವನ್ನು ಬೆಳೆಸು. ಸ್ವಭಾವವನ್ನು ಬಿತ್ತು; ಚಾರಿತ್ರ್ಯವನ್ನು ಬೆಳೆಸು. ಚಾರಿತ್ರ್ಯವನ್ನು ಬಿತ್ತು; ಭವಿಷ್ಯವನ್ನು ಬೆಳೆಸು.'\u003c\/p\u003e\n\u003cp data-path-to-node=\"6\"\u003eಎನ್ನುವ ತತ್ವದಂತೆ ಆತ್ಮೀಯ ಕುಲಕರ್ಣಿಯ ಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ನಿಂತ ನೀರಾಗದೆ ನಿತ್ಯ ಪ್ರವಹಿಸುತ್ತಾ, ಓದುಗರಿಗೆ ಸುಜ್ಞಾನದಿಂದ ಕಣ್ಣು ತೆರೆಯುವಂತೆ ವಿಶ್ವಮಾನವತ್ವದ ಮೂಲಕ ಬದುಕುವ ಹಾದಿಗೆ ಕೈದೀವಿಗೆ ಎನಿಸಲಿ.\"\u003c\/p\u003e\n\u003cp data-path-to-node=\"7\"\u003e\u003cb data-path-to-node=\"7\" data-index-in-node=\"0\"\u003e- ಹಿರೇಮಗಳೂರು ಕಣ್ಣನ್ (ಕನ್ನಡದ ಪೂಜಾರಿ)\u003c\/b\u003e\u003c\/p\u003e","brand":"L P Kulakarni","offers":[{"title":"Default Title","offer_id":47618226684163,"sku":"HB00005503047","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Mahayaana.jpg?v=1768208430","url":"https:\/\/harivubooks.com\/products\/vijnana-kautukagala-mahayana-l-p-kulakarni-kannada-articles","provider":"Harivu Books","version":"1.0","type":"link"}