Dr. Venkataramanaswamy S. V.
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
"Science is a way of thinking much more than it is a body of knowledge”, ವಿಜ್ಞಾನವು ನಿಂತಿರುವುದು ನಿಮ್ಮ ಯೋಚನೆಯ ವಿಧಾನದ ಮೇಲೆ, ಒಬ್ಬ ವ್ಯಕ್ತಿಯು ಯಾವತ್ತೂ ತಪ್ಪು ಮಾಡಿಲ್ಲವೆಂದರೆ ಅದರ ಅರ್ಥ ಆ ವ್ಯಕ್ತಿ ಯಾವತ್ತೂ ಹೊಸದನ್ನು ಪ್ರಯತ್ನಿಸಲೇ ಇಲ್ಲವೆಂದು. ಒಮ್ಮೆ ಹೊಸದನ್ನು ಪ್ರಯತ್ನಿಸಿದರೆ ನೀವು ಕಳೆದುಕೊಳ್ಳುವುದಾದರೂ ಏನು? ಯೋಚಿಸಿ !!!
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ತಯಾರಿ ನಡೆಸುತ್ತಿರುವ ನನ್ನ ಯುವ ಅಧಿಕಾರಿಗಳಿಗೆ ಅತಿ ಕಷ್ಟದ ವಿಷಯವೆಂದು ಪರಿಗಣಿಸಿದ್ದ ವಿಜ್ಞಾನ ವಿಷಯವನ್ನು ಸರಳೀಕರಿಸುವ ಉದ್ದೇಶದಿಂದ 'ಚಿಗುರು, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶೋತ್ತರ ಕೋಶ' ಕೃತಿಯ ಮೂಲಕ ಆತ್ಮಸ್ಥೆರ್ಯವನ್ನು ತರುವ ಉದ್ದೇಶದಿಂದ ಚಿಗುರು ಪಬ್ಲಿಕೇಷನ್ಸ್‌ರವರು ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಯ ಹಿಂದಿನ ಎಲ್ಲಾ ಪ್ರಶ್ನೆ ಪತ್ರಿಕೆಗಳ ವಿಜ್ಞಾನದ ವಿಷಯವನ್ನು ಅತ್ಯುತ್ತಮ ಮಾಹಿತಿಯೊಂದಿಗೆ ವಿವರಣೆಯ ಮೂಲಕ ಸರಳವಾಗಿ ನೀಡಿದ್ದು, ಇದು ಒಂದು ನೂತನ ಪ್ರಯೋಗವೇ ಸರಿ. ಪ್ರಾರಂಭದಲ್ಲಿ ವಿಜ್ಞಾನದ ಅತಿ ಮುಖ್ಯ ಅಂಶಗಳನ್ನು ನೀಡಿದ್ದು, ನಿಮ್ಮ ಪರೀಕ್ಷಾ ಸಿದ್ಧತೆ ಸಮಯದಲ್ಲಿ ತಯಾರಿಗೆ ಉಪಯುಕ್ತವಾಗಲಿದೆ.
ನನ್ನ ಯುವ ಅಧಿಕಾರಿಗಳೇ ವಿಜ್ಞಾನ ಎಂಬುದು ಕೇವಲ ಒಂದು ವಿಷಯವಷ್ಟೇ, ನೀವು ಹಿಂದಿನ ಪ್ರಶ್ನೆಗಳನ್ನು ಸರಿಯಾಗಿ analyse ಮಾಡಿದರೆ, important ವಿಷಯ ಯಾವುದೆಂದು ತಿಳಿಯುತ್ತದೆ. ಅದನ್ನು ಸರಿಯಾಗಿ ಅರ್ಥೈಸಿಕೊಂಡ ನಿಮ್ಮನನ್ನ ಯುವ ಅಧಿಕಾರಿಗಳೇ ವಿಜ್ಞಾನ ಎಂಬುದು ಕೇವಲ ಒಂದು ವಿಷಯವಷ್ಟೇ, ನೀವು ಹಿಂದಿನ ಪ್ರಶ್ನೆಗಳನ್ನು ಸರಿಯಾಗಿ analyse ಮಾಡಿದರೆ, important ವಿಷಯ ಯಾವುದೆಂದು ತಿಳಿಯುತ್ತದೆ. ಅದನ್ನು ಸರಿಯಾಗಿ ಅರ್ಥೈಸಿಕೊಂಡ ನಿಮ್ಮಲ್ಲಿ ಆತ್ಮಸ್ಥೆರ್ಯ ತುಂಬಲು 'ಚಿಗುರು, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶೋತ್ತರ ಕೋಶ' ಸಹಕಾರಿಯಾಗಿದ್ದು, ಈ ಕೃತಿಯು ಪ್ರತಿಯೊಬ್ಬ ಸ್ಪರ್ಧಾರ್ಥಿಗಳ ಕೈಗೆ ಸೇರಿ ಜ್ಞಾನದ ಬೆಳಕಾಗಿ ನೀವು ಯಶಸ್ವಿಯಾಗಲೆಂದು ಶುಭ ಹಾರೈಸುತ್ತೇನೆ.
"ನಮ್ಮ ಬದುಕು ಪ್ರದರ್ಶನವಾಗಬಾರದು, ನಿದರ್ಶನವಾಗಬೇಕು” ಎಂಬ ಮಾತಿನಂತೆ ಸ್ಪರ್ಧಾ ಪ್ರಪಂಚದಲ್ಲಿ Hardwork ಜೊತೆಗೆ Smart workಗೆ ಹೆಚ್ಚಿನ ಆದ್ಯತೆ ನೀಡಿ, ನನ್ನ ಪ್ರಕಾರ ಗೆಲವು ಬಹುಬೇಗ ನಿರ್ಧಾರವಾಗುವ ಪ್ರಮುಖ ಅಂಶ Revision, Revision, Revision....
-ಬಾಬುರೆಡ್ಡಿ, PSI
