{"product_id":"vijayanagara-samrajya-chinnaswamy-sosale","title":"ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ  ಚರಿತ್ರೆ","description":"ಭಾರತದ ಚರಿತ್ರೆಯಲ್ಲಿ ನಮ್ಮ ಕರುನಾಡಿಗೆ ವಿಶಿಷ್ಟ ಸ್ಥಾನವಿದೆ. ಇದಕ್ಕೆ ಕಾರಣ ಈ ನಾಡನಾಳ್ವಿಕೆ ಮಾಡಿ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ವಿವಿಧ ಕಾಲಘಟ್ಟದಲ್ಲಿನ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ರಾಜ-ಮಹಾರಾಜರು ಕಾರಣರಾಗಿದ್ದಾರೆ. ಬಹುಮುಖ್ಯವಾಗಿ ಆಯಾಕಾಲದಲ್ಲಿ ಜೀವಿಸಿದ್ದ ಪಂಡಿತರು, ಸಾಹಿತಿಗಳು, ಶಿಲ್ಪ ಹಾಗೂ ಚಿತ್ರ ಕಲಾವಿದರು, ಕೃಷಿಕರು, ವಿಭಿನ್ನ ಶ್ರಮ ವೃತ್ತಿಯ ಜನಸಮುದಾಯದವರ ಕೊಡುಗೆ ಅಪಾರವಾಗಿದೆ. ಇಂದಿನ ಸಂದರ್ಭದಲ್ಲಿ ಚರಿತ್ರೆ ಅಧ್ಯಯನ ಮತ್ತು ರಚನೆ ಬಹುಸೂಕ್ಷ್ಮವಾದದ್ದು. ಆ ಸೂಕ್ಷ್ಮತೆ ಕೈತಪ್ಪಿದರೆ ಅದರ ಸಿದ್ಧಾಂತ ಸೂತ್ರ ಹರಿದ ಪಟದಂತಾಗುತ್ತದೆ ಎಂಬುದಕ್ಕೆ ಅನೇಕ ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಸಮಕಾಲೀನ ಚರಿತ್ರೆಯನ್ನು ವಾಸ್ತವದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಸರಳವಾಗಿ ಸ್ನೇಹಮನೋಭಾವನೆಯಿಂದ ಬೆಸೆಯುವ ಉಪಕರಣವಾಗಿ ಬಳಸಬೇಕು ಹಾಗೂ ಆ ಚರಿತ್ರೆಯು ವಾಸ್ತವ ಹಾಗೂ ಭವಿಷ್ಯದ ಬದುಕಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಬೇಕು ಎಂಬುದು ಚರಿತ್ರೆಕಾರರ ಆಶಯವೂ ಆಗಿದೆ. ಕನ್ನಡ ನಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಚರಿತ್ರೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ಮಧ್ಯಕಾಲೀನ ಚರಿತ್ರೆ ರಚನೆಯಲ್ಲಿ ದೇಶ-ವಿದೇಶಗಳ ಚರಿತ್ರೆಕಾರರು ಅತ್ಯಂತ ಹೆಚ್ಚು ಗಮನ ಹರಿಸಿದ್ದು ಈ ಸಂಧರ್ಭದಲ್ಲಿನ ಸಾಂಸ್ಕೃತಿಕ ಪಲ್ಲಟಗಳ ಕುರಿತೇ ಎಂಬುದು ಕಾರಣವಾಗಿದೆ. ಮೇಲಿನ ಆಶಯದೊಂದಿಗೆ ರಚನೆಗೊಂಡಿರುವ ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ ಎಂಬ ಈ ಕೃತಿ ರಾಜ ಕೀಯೇತರವಾಗಿ ವಿಭಿನ್ನ ನಲೆಯಲ್ಲಿ ಸಾಂಸ್ಕೃತಿಕವಾದ ಚಾರಿತ್ರಿಕ ಅಂಶಗಳನ್ನು ಸಮಗ್ರವಾಗಿ ಚರ್ಚಿಸುತ್ತದೆ. ವಿಜಯನಗರ ಸಾಮ್ರಾಜ್ಯ ಹಾಗು ಇಕ್ಕೇರಿ, ಮೈಸೂರು ಸಂಸ್ಥಾನಗಳ ರಾಜಮಹಾರಾಜರ ಬಿರುದು-ಬಾವಲಿಗಳನ್ನು ಅವರ ದಂಡಯಾತ್ರೆ, ಯುದ್ಧ, ದಾಳಿಗಳನ್ನು ಹೊರತುಪಡಿಸಿ ಜನಕೇಂದ್ರಿತ ಸೂಕ್ಷ್ಮಸಂವೇದನೆಯ ಸಾಂಸ್ಕೃತಿಕ ಅಧ್ಯಯನಕ್ಕೆ ಓದುಗರನ್ನು ಈ ಕೃತಿ ತೊಡಗಿಸುತ್ತದೆ. ಇಂಥ ಬಹುಸೂಕ್ಷ್ಮ ವಸ್ತುವಿಷಯವನ್ನು ಕೇಂದ್ರವನ್ನಾಗಿಸಿಕೊಂಡು ಸಂಶೋಧನಾತ್ಮಕ ಕೃತಿಯನ್ನು ಸಿದ್ಧಪಡಿಸಿರುವ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಪ್ರೊ, ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ಅಭಿನಂದನೆಗಳು,\u003cbr\u003e\u003cbr\u003e ಡಾ. ಸ.ಚಿ. ರಮೇಶ","brand":"Prof. N. Chinnaswamy Sosale","offers":[{"title":"Default Title","offer_id":42113398178051,"sku":"HB00000784","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.09PM.jpg?v=1637999689","url":"https:\/\/harivubooks.com\/products\/vijayanagara-samrajya-chinnaswamy-sosale","provider":"Harivu Books","version":"1.0","type":"link"}