ಕೈವಾರ ಗೋಪೀನಾಥ್
Publisher: ನವಕರ್ನಾಟಕ ಪ್ರಕಾಶನ
Couldn't load pickup availability
ವಿಜ್ಞಾನಿಗಳು ಸತತ ಸಂಶೋಧನೆಯಿಂದ ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ. ಪ್ರಕೃತಿಯ ಅನೇಕ ರಹಸ್ಯಗಳನ್ನು ಬಯಲು ಮಾಡಿದ್ದಾರೆ. ವಿಜ್ಞಾನಿಗಳ ಇಂಥ ಶೋಧನೆಗಳಿಂದ ಲೋಕಕ್ಕೆ ಒಳಿತಾಗಿದೆ. ಯಾವುದೇ ವೈಜ್ಞಾನಿಕ ಆವಿಷ್ಕಾರ ಒಂದೇ ದಿನದ ಫಲವಲ್ಲ. ಶೋಧನೆ, ಆವಿಷ್ಕಾರ, ಕೆಲವೊಮ್ಮೆ ಸೋಲು - ಇವು ನಡೆಯುತ್ತಲೇ ಇರುವ ವೈಜ್ಞಾನಿಕ ಪ್ರಕ್ರಿಯೆಗಳು.
ಆಂಪಿಯರ್, ವೋಲ್ಟ್, ಓಮ್ಸ್, ಹಾಗೆ ಲೀಟರ್, ಸೆಲ್ಸಿಯಸ್ ಇತ್ಯಾದಿ, ನಮಗೆ ಚಿರಪರಿಚಿತ ಪದಗಳು, ಆದರೆ ಇವು ಅವುಗಳನ್ನು ಶೋಧಿಸಿದ ಮಹನೀಯರ ಹೆಸರುಗಳೇ ಎಂದು ಎಷ್ಟು ಮಂದಿಗೆ ತಿಳಿದಿರಬಹುದು ?
ಈ ಪುಸ್ತಕದ ಲೇಖಕರಾದ ಕೈವಾರ ಗೋಪೀನಾಥ್ 'ವಿಜ್ಞಾನ ಪ್ರಪಂಚದಲ್ಲಿ ಸಂಭವಿಸಿದ ಇಂಥ ಅನೇಕ ವಿಚಿತ್ರ ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ಇವರ 'ವಿಜ್ಞಾನ ಪ್ರಪಂಚ -ಸ್ವಾರಸ್ಯ ಸಂಗತಿಗಳು' ಮತ್ತು 'ವಿಜ್ಞಾನ ಪ್ರಪಂಚ - ಸಂಶೋಧನೆಯ ಜಗತ್ತು' ಎಂಬ ಪುಸ್ತಕಗಳು ಪ್ರಕಟವಾಗಿವೆ.
