{"product_id":"vatsyayana-kamasootra-kannada-book","title":"ವಾತ್ಸ್ಯಾಯನ ಕಾಮಸೂತ್ರ","description":"ನಮ್ಮ ಋಷಿಗಳ ಭೂಮದೃಷ್ಟಿ ಯಾವುದನ್ನೂ ಉದಾಸೀನ ಮಾಡುವುದಿಲ್ಲ. ಎಲ್ಲಕ್ಕೂ ಅದರದರ ಇಯತ್ತೆಯಲ್ಲಿ ಪರಿಪೂರ್ಣತೆಯನ್ನು ಕಾಣಿಸುವ ಕಾರುಣ್ಯ ಅವರದು. ಆದುದರಿಂದಲೇ ಮಹರ್ಷಿಗಳು ಕಾಮಶಾಸ್ತ್ರವನ್ನು ರಚಿಸಿದರು. ಇಂಥ ಸಾಧ್ಯತೆಯನ್ನು ಭಾರತೇತರವಾದ ಪ್ರಾಚೀನ ಜಗತ್ತಿನಲ್ಲಿ ಕಾಣುವುದು ಕಷ್ಟ, ವಿಶೇಷತಃ ಸೆಮೆಟಿಕ್ ಜಗತ್ತಿಗಿದು ಅನೂಹ್ಯ. ಯಾವುದೇ ವಿದ್ಯೆಗೆ ಋಷಿದರ್ಶನದ ಮನ್ನಣೆ ದಕ್ಕಿತೆಂದರೆ ಅದು ಆ ಮಟ್ಟಿಗೆ ಸಾರ್ವತ್ರಿಕವೆನಿಸುತ್ತದೆ; ವಿಶ್ವಜನೀನವೂ ಆಗುತ್ತದೆ. ಬ್ರಹ್ಮಚರ್ಯವಿಲ್ಲದೆ ಶಾಸ್ತ್ರಸಿದ್ಧಿಯಾದರೂ ಹೇಗೆ? ಹೀಗಾಗಿಯೇ ಕಾಮಶಾಸ್ತ್ರವನ್ನು ರಚಿಸಿದ ವಾತ್ಸಾಯನಮಹರ್ಷಿಯು ಬ್ರಹ್ಮಚಾರಿ; ಮೋಕ್ಷಶಾಸ್ತ್ರವನ್ನು ನಮಗಿತ್ತ ಶ್ರೀಕೃಷ್ಣನೂ ಬ್ರಹ್ಮಚಾರಿ. ಇವರೆಲ್ಲ ಬಳಸಿ ಬ್ರಹ್ಮಚಾರಿಗಳು, ಉಂಡು ಉಪವಾಸಿಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003eಕಾಮಶಾಸ್ತ್ರವನ್ನು ಎರಾಟಿಕ್ಸ್ ಅಥವಾ ಲೈಂಗಿಕವಿದ್ಯೆಯೆಂದು ಸೀಮಿತವಾಗಿ ಕಾಣುವುದು ಅನುಚಿತ. ಕಾಮವು ಪಂಚಕರ್ಮೇಂದ್ರಿಯಗಳ ಸುಖದೊಟ್ಟಿಗೆ ಪಂಚಜ್ಞಾನೇಂದ್ರಿಯಗಳ ಸುಖವನ್ನೂ ತನ್ಮೂಲಕ ಅಂತರಿಂದ್ರಿಯವಾದ ಮನಸ್ಸಿನ ಸುಖವನ್ನೂ ಉದ್ದೇಶದಲ್ಲಿ ಇರಿಸಿಕೊಂಡ ಕಾರಣ ಅನುವಾದಾತೀತವಾದ ಸಂಜೆಯೆನಿಸಿದೆ. ಧರ್ಮ-ರಸ-ಬ್ರಹ್ಮಗಳಂತೆ ಕಾಮಕ್ಕೂ ಅನುವಾದಕ್ಕೆಟುಕದ ವಾಚಕತ್ವವಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eವಾತ್ಸಾಯನಮಹರ್ಷಿಯ ದರ್ಶನ ಜಗತ್ಸಂಸ್ಕೃತಿಗೆ ಅನಿವಾರ್ಯ ಮತ್ತು ಅಪ್ಯಾಯನ. ಇಂಥ ಮಹಾಕೃತಿಯನ್ನು ಸಮಗ್ರವಾಗಿ ಭಾಷಾಂತರಿಸಿ ಕನ್ನಡ ಜನತೆಗೆ ಉಡುಗೊರೆಯಾಗಿ ನೀಡುತ್ತಿರುವ ಪ್ರೊ| ಎ.ಕೆ. ಹಂಪಿಹೊಳಿ ಅವರು ನಿಜಕ್ಕೂ ಅಭಿನಂದನೀಯರು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಶತಾವಧಾನಿ ಡಾ. ಆರ್. ಗಣೇಶ್\u003cbr data-mce-fragment=\"1\"\u003e","brand":"Dr. Vishwanatha K. Hampiholi","offers":[{"title":"Default Title","offer_id":42473562865923,"sku":"HB00002257","price":299.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_0af46ab7-a6c3-4409-844d-25a3f9eeae04.jpg?v=1644911155","url":"https:\/\/harivubooks.com\/products\/vatsyayana-kamasootra-kannada-book","provider":"Harivu Books","version":"1.0","type":"link"}