Skip to product information
1 of 1

Sridhar Banavasi

ವೈಷ್ಣವ ಸಂತರು

ವೈಷ್ಣವ ಸಂತರು

Publisher - ಪಂಚಮಿ ಪಬ್ಲಿಕೇಷನ್ಸ್

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಬಂಗಾಲವು ವೈಷ್ಣವ ಸಂತಪರಂಪರೆಗೆ ತವರುಮನೆ. ಭಗವಾನ್ ಶ್ರೀಕೃಷ್ಣನ ವಿಶೇಷ ಅನುಗ್ರಹವನ್ನು ವಂಗದೇಶವು ಪಡೆದಿದೆ. ಇಂಥ ಸುಕ್ಷೇತ್ರವಾದ ಬಂಗಾಲದಲ್ಲಿ ಆವಿರ್ಭವಿಸಿದ ಮಹಾಸಂತರಲ್ಲಿ ಅಗ್ರ ಗಣ್ಯರು ಭಗವಾನ್ ಚೈತನ್ಯ ಮಹಾಪ್ರಭುಗಳು. ಜ್ಞಾನ-ಭಕ್ತಿಗೆ ಇವರು ಸಂಕೇತರಾಗಿದ್ದರು. ಮಾಧ್ವಗೌಡೀಯ ವೈಷ್ಣವ ಪರಂಪರೆಗೆ ಇಲ್ಲಿಯ ವೈಷ್ಣವ ಮಹಾಸಂತರು ಸೇರಿದವರು. ಈ ಸಂಗತಿ ಕರ್ನಾಟಕ ಮತ್ತು ವಂಗದೇಶದ ಭಕ್ತಿಮೀಮಾಂಸೆಗೆ ಕಟ್ಟಿದ ತೋರಣ. ಇವರಿಗೆಲ್ಲಾ ಅಗ್ರೇಸರರು ಭಗವಾನ್ ಶ್ರೀ ಚೈತನ್ಯರೇ.
ಶ್ರೀಧರ ಬನವಾಸಿ ಅವರು ಉತ್ತಮ ಲೇಖಕರು. ಅವರು ಕತೆ, ಕವಿತೆಗಳ ಮೂಲಕ ಸೃಜನಶೀಲ ನೆಲೆಯಲ್ಲಿ ಪ್ರಸಿದ್ಧರಾಗಿದ್ದಾರೆ. ಇದೀಗ ಭಕ್ತಿಪರಂಪರೆಯ ವೈಷ್ಣವ ಸಂತರನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಡುವ ಮಹತ್ತರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆ ಶ್ರಮದ ಫಲರೂಪವೇ 'ವೈಷ್ಣವ ಸಂತರು' ಎಂಬ ಉತ್ತಮ ಕೃತಿ. ಇದು ಹದಿನೆಂಟು ಜನ ಸಂತರ ಜೀವನ-ಸಾಧನೆಗಳನ್ನು ಪರಿಚಯಿಸುತ್ತದೆ. ಶ್ರೀಚೈತನ್ಯ ಮಹಾಪ್ರಭುಗಳಿಂದ ಈ ಕೃತಿ ಪ್ರಾರಂಭಗೊಂಡು ಶ್ರೀಲ ಪ್ರಭುಪಾದರ ಪರಿಚಯದೊಂದಿಗೆ ಮುಗಿಯುತ್ತದೆ.
View full details