{"product_id":"vaignanika-drushtiyannu-belesikolluvudu-hege-non-fiction-kannada-book","title":"ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಹೇಗೆ?","description":"\u003cp\u003e\u003cspan\u003eವೈಜ್ಞಾನಿಕ ದೃಷ್ಟಿ, ವೈಜ್ಞಾನಿಕ ಮನೋಭಾವ ಎಂದರೇನು? ಈ ಪ್ರಶ್ನೆಯನ್ನು ನಾವು ಯಾರಲ್ಲಿ ಕೇಳಬೇಕು? ಪವಾಡ ಪುರುಷರೋ, ಜ್ಯೋತಿಷಿಗಳೋ, ಪುರೋಹಿತಶಾಹಿಯೋ ಇದಕ್ಕೆ ಸರಿಯುತ್ತರ ನೀಡಾಲಾರರು! ಅವರ ವೃತ್ತಿಗೇ ಅದು ಮಾರಕ! ಅಂಥ ಮನೋಭಾವ ನಮ್ಮಲ್ಲಿ ಬೆಳೆಯದಂತೆ ಬೇಕಾದರೆ ಅವರು ನೋಡಿಕೊಂಡಾರು. ಸರಿಯಾದ ವೈಜ್ಞಾನಿಕ ಮಾಹಿತಿ ಲಭ್ಯವಿಲ್ಲದ ಕಾಲದಲ್ಲಿ ಕೇವಲ ನಂಬಿಕೆ-ಊಹೆಗಳ ಆಧಾರದಿಂದ ಸಮಾಜದಲ್ಲಿ ಕೆಲವು ಮೌಢ್ಯಗಳು ಮನೆಮಾಡಿದವು. ಇಂದು ವಿಜ್ಞಾನದ ನಿಖರ ಲೆಕ್ಕಾಚಾರಗಳಿಂದ ಅವೆಲ್ಲ ತಲೆಕೆಳಗಾಗಿ ಅಂಗೀಕಾರ ಯೋಗ್ಯವಲ್ಲವೆಂದು ಸಿದ್ಧವಾಗಿವೆ. ಕುರುಡು ನಂಬೆಕೆಗಳನ್ನು ತಕ್ಷಣ ನಂಬದೆ ನಿಜಾಂಶ ಏನೆಂದು ತಿಳಿಯುವಲ್ಲಿ ಪ್ರಯತ್ನಿಸುವುದೇ ವೈಜ್ಞಾನಿಕ ಮನೋಭಾವ ಬೆಳೆಯುವುದಕ್ಕೆ ಸಹಕಾರಿ. ವೈಜ್ಞಾನಿಕ ಬರವಣಿಗೆಯಲ್ಲಿ ನುರಿತ-ಬಹುಶ್ರುತರೆಂದು ಖ್ಯಾತರಾದ ಜೆ.ಆರ್. ಲಕ್ಷ್ಮಣರಾವ್ ಇಲ್ಲಿನ ಬರಹಗಳನ್ನು ಸುಲಭಗ್ರಾಹ್ಯವಾಗುವ ಭಾಷೆಯಲ್ಲಿ ನಿರೂಪಿಸಿದ್ದಾರೆ.\u003c\/span\u003e\u003c\/p\u003e","brand":"J. R. Lakshmana Rao","offers":[{"title":"Default Title","offer_id":42020630757635,"sku":"HB00001548","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vaignaanika-drushtiyannu-belesikolluvudu-hegevdb.jpg?v=1636356816","url":"https:\/\/harivubooks.com\/products\/vaignanika-drushtiyannu-belesikolluvudu-hege-non-fiction-kannada-book","provider":"Harivu Books","version":"1.0","type":"link"}