Skip to product information
1 of 1

Narayana Gindimane

ವೈದಿಕ ಯಕ್ಷ

ವೈದಿಕ ಯಕ್ಷ

Publisher -

Regular price Rs. 550.00
Regular price Rs. 550.00 Sale price Rs. 550.00
Sale Sold out
Shipping calculated at checkout.

- Free Shipping

- Cash on Delivery (COD) Available

ನಮ್ಮ ಪರಂಪರೆಯಲ್ಲಿ ಯಕ್ಷ-ಯಕ್ಷಿಯರ ಕಲ್ಪನೆ ನಿಡುಗಾಲದಿಂದ ಬಂದಿದೆ. ವೇದಗಳಿಂದ ಮೊದಲ್ಗೊಂಡು ವೇದಾಂಗ, ಇತಿಹಾಸ, ಆಗಮ, ಪುರಾಣ ಮತ್ತು ಐತಿಹ್ಯಗಳವರೆಗೆ ಲಿಖಿತ ಮತ್ತು ಮೌಖಿಕ ಧಾರೆಗಳಲ್ಲಿ ಯಕ್ಷೋಪಾಸನೆ ವ್ಯಾಪಕವಾಗಿ ಬೆಳೆದಿದೆ. ಇದರ ಪ್ರತಿಫಲನವನ್ನು ಚಿತ್ರ-ಶಿಲ್ಪಗಳಲ್ಲಿಯೂ ವಿಶೇಷವಾಗಿ ನೋಡಬಹುದು. ಇದು ಕೇವಲ ವೈದಿಕಪದ್ಧತಿಗೆ ಸೀಮಿತವಲ್ಲ. ಜೈನರ ಮತ್ತು ಬೌದ್ಧರ ಸಂಪ್ರದಾಯಗಳಲ್ಲಿಯೂ 'ಯಕ್ಷತತ್ತ್ವ ಹಾಸುಹೊಕ್ಕಾಗಿದೆ....

ಶ್ರೀ ನಾರಾಯಣ ಗಿಂಡೀಮನೆ ಅವರು ಇಂಥ ಸಂಶೋಧನೆಗೆ ಬೇಕಾದ ಸಂಸ್ಕೃತ, ಪ್ರಾಕೃತ, ಪಾಲಿ ಮುಂತಾದ ಭಾಷೆಗಳಲ್ಲಿರುವ ಸಾಹಿತ್ಯವನ್ನು ಮೂಲದಲ್ಲಿಯೇ ಓದಿ ತಿಳಿಯುವ ಅನುಕೂಲವನ್ನು ಪಡೆದಿರದಿದ್ದರೂ ಶಿಲ್ಪಕಲೆಯ ಸಂಪ್ರದಾಯಗಳನ್ನು ಕ್ರಮವಾಗಿ ಬಲ್ಲವರಾಗದಿದ್ದರೂ ಉಪಲಬ್ಧವಿರುವ ಎಲ್ಲ ಸಾಮಗ್ರಿಯನ್ನೂ ಈ ಮಟ್ಟದ ಸಮಗ್ರತೆಯಲ್ಲಿ ನಮ್ಮೆದುರು ಹವಣಿಸಿದ ಪರಿ ಸ್ತುತ್ಯರ್ಹ. ಮಾತ್ರವಲ್ಲ, ಇಂಥ ನಿರೂಪಣೆಯ ನಡುನಡುವೆಯೇ ತುಂಬ ಪ್ರಾಮಾಣಿಕವಾಗಿ ತಮ್ಮ ಅನಿಸಿಕೆಗಳನ್ನು ಹದವರಿತು ಜೋಡಿಸಿರುವುದು ಅವರ ಎಚ್ಚರಕ್ಕೆ ಸಾಕ್ಷಿ. ಯಕ್ಷತತ್ತ್ವದಂಥ ಒಂದು `ಅಕ್ಯಾಡೆಮಿಕ್' ವಿಷಯವನ್ನು 'ನಾನ್-ಅಕ್ಯಾಡೆಮಿಕ್' ಆದ ಒಬ್ಬ ವ್ಯಾಸಂಗಶೀಲರು ಇಷ್ಟು ಚೆನ್ನಾಗಿ ನಿರ್ವಹಿಸಿರುವುದನ್ನು ಕಂಡಾಗ ನಮ್ಮ ಸಮಾಜದಲ್ಲಿ 'ವಿದ್ಯಾವ್ಯಸನ' ಇನ್ನೂ ಉಳಿದಿದೆಯೆಂದು ತಿಳಿದು ಹರ್ಷವಾಗುತ್ತದೆ. ಇಂದಿನ ಪಟ್ಟಭದ್ರ ವಿದ್ಯಾಸಂಸ್ಥೆಗಳಲ್ಲಿ ವಿದ್ವತ್ತೆ ಮಾಯವಾಗಿ ರಾಜಕೀಯ ಸಾಮ್ರಾಜ್ಯವನ್ನಾಳುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಶ್ರೀ ನಾರಾಯಣ ಗಿಂಡೀಮನೆ ಅವರಂಥ ವ್ಯಕ್ತಿಗಳೇ ಪ್ರೌಢಾಧ್ಯಯನದ ಪ್ರಕಲ್ಪಗಳನ್ನು ಕೈಗೊಳ್ಳಬೇಕಿದೆ.

-ಶತಾವಧಾನಿ ರಾ. ಗಣೇಶ್‌
(ನಲ್ನುಡಿಯಿಂದ)
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)