{"product_id":"uyyale-novel-chaduranga-kannada-books","title":"ಉಯ್ಯಾಲೆ","description":"\u003cp\u003eಸರ್ವಮಂಗಳೆಯನ್ನು ಸೃಷ್ಟಿಸಿ ಓದುಗರ ಮನಸ್ಸನ್ನು ತಮ್ಮತ್ತ ಸೆಳೆದುಕೊಂಡ ಗೆಳೆಯ ಚದುರಂಗರು ರಾಧೆಯನ್ನು, ಶೇಷಗಿರಿಯನ್ನು, ಕೃಷ್ಣಗೌಡನನ್ನು, ಪ್ರಭಾವತಿಯನ್ನು-ಜೀವಂತವಾದ ಹಲವು ಪಾತ್ರಗಳನ್ನು- ನಮ್ಮ ಮುಂದೆ ನಿಲ್ಲಿಸಿದ್ದಾರೆ. ಸುಂದರಿ ರಾಧೆ, ಪುಸ್ತಕಪ್ರಿಯ ಶೇಷಗಿರಿ, ಜೀವನೋಲ್ಲಾಸಿ ಕೃಷ್ಣಗೌಡ, ಸುಕುಮಾರಿ ಮುಗ್ಧ ಪ್ರಭಾವತಿ, ಒಳ್ಳೆಯವನಾದರೂ ಪುಸ್ತಕದ ಹಾಳೆಯಲ್ಲಿ ಹುದುಗಿ. ಹೆಂಡತಿ ರಾಧೆಯ ಸುತ್ತ ಅಸಹನೆಯ ಕೋಟೆ ಬೆಳೆಯಲು ಕಾರಣನಾಗಿ ಓದುಗರಿಂದ ಸಹಾನುಭೂತಿಯ ನಿಟ್ಟುಸಿರನ್ನು ಸಂಪಾದಿಸುವ ಶೇಷಗಿರಿ, ರಾಧೆ- ಶೇಷಗಿರಿಗಳ ನಡುವೆ ಬಂದು, ಪ್ರಭಾವತಿಯ ಪ್ರೀತಿಯನ್ನೂ ರಾಧೆಯ ಒಲವನ್ನೂ ಗಳಿಸಿ, ಅವರ ಸಂಸಾರದಲ್ಲಿ ಸ್ನೇಹದ ಒರತೆಯನ್ನು ಹರಿಸಲೆತ್ನಿಸಿದ ಕೃಷ್ಣಗೌಡ, ಜನ್ಮತಃ ಕಲಾವಿದೆಯಾದ ಪುಟ್ಟ ಪ್ರಭಾವತಿ. ಹೀಗೆ ಈ ಪಾತ್ರಗಳು ನಿಚ್ಚಳವಾಗಿ ನಿಲ್ಲುತ್ತವೆ.\u003c\/p\u003e\n\u003cp\u003e***\u003c\/p\u003e\n\u003cp\u003eರಾಧೆ ಕೃಷ್ಣಗೌಡರು ಪರಸ್ಪರ ಆಕರ್ಷಣೆಗೆ ಗುರಿಯಾಗಿದ್ದಾಗ ಬರುವ ಹಾವಿನ ಪ್ರಸಂಗ ಎಷ್ಟು ಎದೆ ನಡುಗಿಸುವುದೋ ಅಷ್ಟೇ ಮಾರ್ಮಿಕವಾಗಿದೆ. ಚದುರಂಗರು ಪ್ರಯತ್ನಿಸಿದರೆ ಮನಸ್ಸಿನ ಅಂತರಾಳದ నానా ಪದರಗಳನ್ನು ಬಿಚ್ಚಿರಿಸಬಲ್ಲರು ಎಂಬುದಕ್ಕೆ ಇದು ದ್ಯೋತಕವಾಗಿದೆ.\u003c\/p\u003e\n\u003cp\u003e- ಎಚ್ಚೆಸ್ಕೆ\u003cbr\u003e\u003c\/p\u003e\n\u003cp\u003e***\u003c\/p\u003e\n\u003cp\u003eಈ ಕಾದಂಬರಿಯಲ್ಲಿ, ಆಳವೂ ಅನಂತವೂ ಆದ ಸಮಸ್ಯೆಯ ಪೃಥಕ್ಕರಣ ನಡೆದಿದೆ. ಸಮಾಜದ ಕಟ್ಟಿನಲ್ಲಿ ಉಯ್ಯಾಲೆಯಾಡುವ ಹೆಣ್ಣು, ಜೀವನದ ಮುಲುಕು ನೋವು ಇದರಲ್ಲಿದೆ. ಅಷ್ಟೇ ಅಲ್ಲ, “It is a Saga on Love itself\"\u003c\/p\u003e\n\u003cp\u003e- ಕೆ. ನರಸಿಂಹಮೂರ್ತಿ\u003c\/p\u003e","brand":"Chaduranga","offers":[{"title":"Default Title","offer_id":47708288024835,"sku":"HB00006015","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Uyyale_Chadhuranga_FP_be37a9db-a23d-4923-b396-21bd3ddb9746.jpg?v=1770215219","url":"https:\/\/harivubooks.com\/products\/uyyale-novel-chaduranga-kannada-books","provider":"Harivu Books","version":"1.0","type":"link"}