{"product_id":"uttare-historical-novel-mahan-bhaskar-hegde-kananda-book","title":"ಉತ್ತರೆ","description":"\u003cp class=\"x_MsoNormal\"\u003e\u003cspan lang=\"KN\"\u003eದ್ರೌಪದಿಯ ಛಲವಿಲ್ಲ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಕುಂತಿಯ ಹಠವಿಲ್ಲ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಗಾಂಧಾರಿಯ ಕಾಠಿಣ್ಯವಿಲ್ಲ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eದುರಂತವಾಗಿಯೂ ದುರಂತವಲ್ಲದಂತಾದ ಪಾತ್ರ ಉತ್ತರೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಆರು ತಿಂಗಳ ದಾಂಪತ್ಯ ಆರಿಹೋದ ಮೇಲೆ ಗರ್ಭದಲ್ಲದ್ದಿ ಮಗುವೊಂದೇ ಕುರುಕುಲದ ಏಕೈಕ ವಾರೀಸುದಾರ. ಅದೂ ಶಾಪಿತ ಪಿಂಡ. ಅದನ್ನು ಹೊತ್ತುಕೊಂಡು ಬಂದ ಹಸ್ತಿನಾವತಿ ಶೋಕಸ್ಥ. ಕೃಷ್ಣನ ಕಾರುಣ್ಯದಿಂದ ಕುಲಕ್ಷಯದ ಹೊತ್ತಲ್ಲಿ ಬಂದ ಪರಿ ರಕ್ಷಿತ ಮಗ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಗೆಳೆಯ ಮೋಹನ ಹೆಗಡೆಯವರ ಚೊಚ್ಚಲ ಕಾದಂಬರಿ ಉತ್ತರೆ ಭಕ್ತಿಭಾವ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಂಕೀರ್ತನೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eವೀರ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eವಿಷಾದ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eದುಃಖ ದುಮ್ಮಾನಗಳಿಲ್ಲದ ಯುದ್ಧೋತ್ತರ ಹಸ್ತಿನಾವತಿಯ ನಿರುಮ್ಮಳ ನಿರೂಪಣೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಉಪ್ಪರಿಗೆಯ ಮೇಲಿದ್ದಾಳೆ ಉತ್ತರೆ ಎಂದು ಆರಂಭವಾಗುವ ಕಾದಂಬರಿ ಉತ್ತರೆಯನ್ನು ಕಾದಂಬರಿಯದ್ದುಕ್ಕೂ ಬೇರೆಬೇರೆ ಪಾತ್ರಗಳ ಮೂಲಕ ನೋಡುತ್ತದೆ. ಕಾದಂಬರಿಯ ಕೊನೆಯಲ್ಲಿ ಕಣ್ಣು ಮುಚ್ಚಿ ಮಲಗದ್ದಿ ಉತ್ತರೆ ವಿರಾಟ ಭಾರತವನ್ನು ಕಾಣುತ್ತಾಳೆ. ಆ ವಿರಾಟಭಾರತದಲ್ಲಿ ಎಲ್ಲರೂ ನಾಶವಾದ ಅವಳ ತವರೂ ಇದೆ\u003c\/span\u003e\u003cspan\u003e,\u003c\/span\u003e\u003cspan lang=\"KN\"\u003eಅವಳಿರುವ ಕುರುಕುಲದ ಉತ್ತರೋತ್ತರತೆಯೂ ಇದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಈ ಕಾದಂಬರಿ ಹಸ್ತಿನಾವತಿಯ ಅರಮನೆಗಳೊಳಗೆ ಸುತ್ತಾಡುತ್ತದೆ. ಕುಂತಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eದ್ರೌಪದಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಉತ್ತರೆ ಎಂಬ ಮೂರು ತಲೆಮಾರಿನ ಹಸ್ತಿನಾವತಿಯ ಅಂತಃಪುರದ ಪಾತ್ರಗಳು ಇಲ್ಲಿ ಸಂಭಾಷಿಸುತ್ತವೆ. ಈ ಹೊತ್ತಿಗೆ ಎಲ್ಲವೂ ಮುಗಿದಿದೆ ಮತ್ತು ಹೊಸತೊಂದು ಆರಂಭವಾಗಿದೆ. ಮುಗಿದ ಕಾಲ ಮತ್ತು ಶುರುವಿಟ್ಟುಕೊಂಡ ಕಾಲಗಳ ಸಮಾಗಮದಲ್ಲಿ ಸಂಧಿಸುವ ಮೂರು ಪಾತ್ರಗಳು ಭೂತವನ್ನು ನಿಡುಸುಯ್ಯಲಿಂದ ನೋಡುತ್ತವೆ ಮತ್ತು ಭವಿಷ್ಯವನ್ನು ಬೆಳಕಿನಿಂದ ಕಾಣುತ್ತವೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಎಲೆಮನೆಗೂ ಅರಮನೆಗೂ ಸಂಕಟ ಸಂತೋಷ ಎರಡೂ ಒಂದೇ... ಎನ್ನುತ್ತದೆ ಕಾದಂಬರಿ. ಅದನ್ನು ತೋರಿಸುವಲ್ಲಿ ಕಾದಂಬರಿಕಾರ ಯಶಸ್ವಿಯಾಗಿದ್ದಾರೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003e-ಗೋಪಾಲಕೃಷ್ಣ ಕುಂಟಿನಿ \u003c\/span\u003e\u003c\/p\u003e","brand":"Mohan Bhaskar Hegde","offers":[{"title":"Default Title","offer_id":49447408500995,"sku":"HB00007422","price":0.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Uttare.jpg?v=1786707817","url":"https:\/\/harivubooks.com\/products\/uttare-historical-novel-mahan-bhaskar-hegde-kananda-book","provider":"Harivu Books","version":"1.0","type":"link"}