{"product_id":"utkata-yakshagaana-novel-srujan-ganesh-hegade-kannada-book","title":"ಉತ್ಕಟ","description":"\u003cp data-path-to-node=\"3\"\u003eಭವದ ಆಕರ್ಷಣೆಯನ್ನು ನಿರ್ಲಕ್ಷಿಸಿ ಭಾವದ ಮೋಹಕತೆಗೆ ಮನಸೋತವರು ಕಲಾವಿದರಾಗುತ್ತಾರೆ. ರೂಢಿಯ ಮಾಯೆಗೆ ಬೆನ್ನುಹಾಕಿ ನಡೆಯುವುದರಿಂದಲೇ ಅವರಿಗೆ ನೈತಿಕ ಶಕ್ತಿ ಹೆಚ್ಚು. ಅಂತಹ ಮೋಹನರಾಗಕ್ಕೆ ಮನಸೋತ ಯಕ್ಷಗಾನ ಕಲಾವಿದನೊಬ್ಬನ ಬದುಕಿನ ವೃತ್ತಾಂತವೊಂದು ಈ ಕಾದಂಬರಿಯಲ್ಲಿ ದಾಖಲಾಗಿದೆ.\u003c\/p\u003e\n\u003cp data-path-to-node=\"4\"\u003eಯಕ್ಷಗಾನದ ಆವರಣದೊಳಗಿಂದಲೇ ನೋಡಿ ಬರೆದ ಕಥನವಿದಾದ್ದರಿಂದ, ಸಂಶಯವಿಲ್ಲದ ಖಚಿತತೆ ಈ ಕೃತಿಯ ನಿರೂಪಣೆಗೆ ದಕ್ಕಿದೆ. ಇನ್ನೂ 25 ವರ್ಷವೂ ದಾಟಿರದ ಸೃಜನ್ ಗಣೇಶ್ ಬಳಸುವ ಭಾಷೆಯ ಮೋಡಿಯನ್ನು ಕಂಡು ಬೆರಗಾಗಿದ್ದೇನೆ. ಪದಗಳೊಡನೆ ಆಟವಾಡುವ, ಶ್ಲೇಷೆಯನ್ನು ನಿರಾಯಾಸವಾಗಿ ಹಿಡಿದುಕೊಡುವ, ಭಾವುಕ ಕ್ಷಣಗಳಲ್ಲಿ ತಲ್ಲೀನವಾಗುವ, ಬದುಕಿನ ಕಟುಸತ್ಯಗಳನ್ನು ತಣ್ಣಗೆ ಹೇಳುವ ಪ್ರಬುದ್ಧತೆಯನ್ನು ಈ ವಯಸ್ಸಿಗೇ ಕಾದಂಬರಿಕಾರ ದಕ್ಕಿಸಿಕೊಂಡಿದ್ದಾನೆ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಕ್ಕಿಂತಲೂ ಆಲಾಪನೆಯ ಆವೇಶ ಇಷ್ಟವಾಗುವಂತೆ, ಇಲ್ಲಿ ಕಥಾರಸಕ್ಕಿಂತಲೂ ಭಾಷಾರಸವೇ ಮೋಡಿ ಮಾಡಿದೆ.\u003c\/p\u003e\n\u003cp data-path-to-node=\"5\"\u003eನಿರೂಪಣೆಯ ಒಂದು ಉತ್ಕಟ ಗಳಿಗೆಯಲ್ಲಿ 'ಒಂದು ದೇಶಕ್ಕೆ ಆ ದೇಶವನ್ನು ರಕ್ಷಿಸುವ ಸೈನಿಕನೆಷ್ಟು ಮುಖ್ಯವೋ, ಅಷ್ಟೇ ಮುಖ್ಯ ಆ ದೇಶದಲ್ಲಿನ ಕಲಾವಿದ' ಎನ್ನುವ ಬೀಜದ ಮಾತು ಬರುತ್ತದೆ. ಇದೊಂದು ಪರಮಸತ್ಯದ ವಾಕ್ಕಾಗಿದೆ. ಕೆಲವೊಮ್ಮೆ ಆಧುನಿಕ ಆಯುಧಗಳನ್ನು ಬಳಸಿಯೂ ಸೈನಿಕನಿಗೆ ಶತ್ರುಗಳನ್ನು ಗೆಲ್ಲಲಾಗದೇ ಹೋಗಬಹುದು; ಆದರೆ ನಿರಾಯುಧನಾಗಿ ಕಲಾವಿದನೊಬ್ಬ ಎಂತಹ ಶತ್ರುಗಳ ಹೃದಯವನ್ನೂ ಗೆಲ್ಲಬಲ್ಲವನಾಗಿರುತ್ತಾನೆ. ಆ ಕಾರಣಕ್ಕಾಗಿಯೇ ಕಲಾವಿದ ಅನಾಯಾಸವಾಗಿ ಗಡಿಗಳನ್ನು ದಾಟುವಷ್ಟು ಸುಲಭವಾಗಿ ಸೈನಿಕ ದಾಟಲಾರ.\u003c\/p\u003e\n\u003cp data-path-to-node=\"6\"\u003eಭಾವದ ಮೋಡಿ ಒಲಿಸಿಕೊಂಡಂತೆಯೇ ಸೃಜನ್ ಭವವನ್ನೂ ಗೌರವದಿಂದ ನೋಡುವ ಅಗತ್ಯವಿದೆ. ಆಗ ಅವನ ಬರವಣಿಗೆಗೆ ಭಾಷಾರಸದ ಜೊತೆಗೆ ಕಥಾರಸವೂ ದಕ್ಕುತ್ತದೆ. ಅದೇನೂ ಅಂತಹ ಕಠಿಣ ಸವಾಲು ಅವನಿಗಾಗಲಿಕ್ಕಿಲ್ಲ ಎಂಬುದು ಈ ಕೃತಿಯಲ್ಲಿ ಆಗಲೇ ದಾಖಲಾಗಿದೆ.\"\u003c\/p\u003e\n\u003cp data-path-to-node=\"7\"\u003e\u003cb data-path-to-node=\"7\" data-index-in-node=\"0\"\u003e- ವಸುಧೇಂದ್ರ\u003c\/b\u003e\u003c\/p\u003e","brand":"Srujan Ganesh Hegade","offers":[{"title":"Default Title","offer_id":47622103499011,"sku":"HB00005503067","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/71JzFDI8sAL._AC_UF1000_1000_QL80__1.jpg?v=1768284494","url":"https:\/\/harivubooks.com\/products\/utkata-yakshagaana-novel-srujan-ganesh-hegade-kannada-book","provider":"Harivu Books","version":"1.0","type":"link"}