{"product_id":"ullavara-shivalaya-deha-degula-religious-mruthyunjaya-rumale-kannada-book","title":"ಉಳ್ಳವರ ಶಿವಾಲಯ ದೇಹ ದೇಗುಲ","description":"\u003cp\u003eಬಸವಣ್ಣನವರ ‘ಉಳ್ಳವರು ಶಿವಾಲಯ ಮಾಡುವರು...’ ಎಂಬ ಒಂದು ವಚನವನ್ನು ಆಧುನಿಕ ಕಾಲಘಟ್ಟದಲ್ಲಿ ನೂರಾರು ಜನ ವಿದ್ವಾಂಸರು ಧಾರ್ಮಿಕ-ಆಧ್ಯಾತ್ಮಿಕ-ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಪರಿಪ್ರಮಾಣದಲ್ಲಿ ಉದಾಹರಣೆಗಳು ಇಲ್ಲ. ನವೋದಯ-ನವ್ಯ-ದಲಿತ ಬಂಡಾಯ ಎಲ್ಲ ಸಾಹಿತ್ಯಿಕ ನೆಲೆಯಲ್ಲಿ ಈ ವಚನವು ಬಹುಚರ್ಚಿತವಾಗಿರುವುದು ಅದರ ಬಹುಮುಖ ಆಯಾಮಕ್ಕೆ ಸಾಕ್ಷಿಯಾಗಿದೆ. ಇಂತಹ ಅಮೂಲ್ಯ ಚಿಂತನೆಗಳನ್ನು ವರ್ತಮಾನದ ಪರಿಪ್ರೇಕ್ಷö್ಯದಲ್ಲಿಟ್ಟು ನೋಡುವ ಒಂದು ಅಭೂತಪೂರ್ವ ಚಿಂತನಾಕ್ರಮವನ್ನು ಡಾ. ಮೃತ್ಯುಂಜಯ ರುಮಾಲೆ ಅವರು ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. \u003c\/p\u003e\n\u003cp\u003e ಡಾ. ರುಮಾಲೆ ಅವರು ಈ ವಚನಾನುಸಂಧಾನದ ಕ್ರಿಯೆಯನ್ನು ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಕಳೆದ ವರ್ಷ ಅವರ ಬದುಕಿನ ಒಂದು ಭಾಗವಾಗಿದ್ದ ಶ್ರೀಮತಿ ವಿದ್ಯಾ ಮೆಡಂ ಅವರ ಆಕಸ್ಮಿಕ ಅಗಲುವಿಕೆಯಿಂದ ಡಾ. ರುಮಾಲೆ ಗುರುಗಳು ಅಕ್ಷರಶಃ ವಿಷಾದಯೋಗದ ಅವಸ್ಥೆಯಲ್ಲಿದ್ದರು. ಆ ನೋವಿನಿಂದ ಹೊರಬರಲು ಈ ಕೃತಿಯನ್ನು ಪೂರ್ಣಗೊಳಿಸಿ, ಕೃತಿಯನ್ನು ಅವರಿಗೆ ಅರ್ಪಣೆ ಮಾಡಿರುವುದು ಔಚಿತ್ಯಪೂರ್ಣವಾದುದು. \u003c\/p\u003e\n\u003cp\u003e ಬಸವಣ್ಣನವರ ವಚನಗಳನ್ನು ಹಲವು ಆಯಾಮಗಳಲ್ಲಿ ಅಧ್ಯಯನ ಮಾಡಬೇಕೆನ್ನುವ ಅಧ್ಯಯನಾಸಕ್ತರಿಗೆ ಇದೊಂದು ಮಾದರಿ ಆಕರ ಕೈಪಿಡಿಯಾಗಿದೆ. ಮುಖ್ಯವಾಗಿ ಲಿಂಗಾಯತ ಧರ್ಮಾನುಯಾಯಿಗಳು ಇಂತಹ ಕೃತಿಗಳನ್ನು ಅವಶ್ಯವಾಗಿ ಓದಲೇಬೇಕು. \u003c\/p\u003e","brand":"Mruthyunjaya Rumale","offers":[{"title":"Default Title","offer_id":49648873111811,"sku":"HB00007583","price":650.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/UllavaraShivaalayaDehaDegula.jpg?v=1789735500","url":"https:\/\/harivubooks.com\/products\/ullavara-shivalaya-deha-degula-religious-mruthyunjaya-rumale-kannada-book","provider":"Harivu Books","version":"1.0","type":"link"}