ಡಾ|| ಇಂದಿರಾ ಹೆಗ್ಗಡೆ
Publisher:
Regular price
Rs. 350.00
Regular price
Rs. 350.00
Sale price
Rs. 350.00
Unit price
per
Shipping calculated at checkout.
Couldn't load pickup availability
ಸಂಶೋಧನಾಧಾರಿತ ಅಧ್ಯಯನಗಳು ಇತರ ವಿದ್ವತ್ ಕಾರ್ಯಗಳು ಇಂದಿನ ದಿನಗಳಲ್ಲಿ ವಿಪುಲವಾಗಿ ನಡೆಯುತ್ತಿದ್ದರೂ, ಹೆಚ್ಚಿನ ಅಂಥ ಕೆಲಸಗಳು ಅಧ್ಯಯನ ಕೊಠಡಿಗಳಿಗೆ ಸೀಮಿತವಾಗಿರುತ್ತವೆಯೇ ಹೊರತು ಕ್ಷೇತ್ರಕಾರ್ಯಾಧಾರಿತವಾಗಿರುವುದಿಲ್ಲ. ಇದೇನೂ ತಪ್ಪಲ್ಲ. ಅಧ್ಯಯನ ವಿಷಯವನ್ನು ಹೊಂದಿಕೊಂಡು ಕಾರ್ಯವಿಧಾನ ರೂಪಿಸಲ್ಪಡುತ್ತದೆ. ಆದರೆ ಕೆಲವೊಂದು ಸಾಂಸ್ಕೃತಿಕ ವಿಚಾರಗಳ ಅನ್ವೇಷಣೆಗೆ ಕ್ಷೇತ್ರಕಾರ್ಯ ಅನಿವಾರ್ಯ. ನೇರವಾಗಿ ಜನರ ನಡುವಿಗೆ ತೆರಳಿ, ನಾನಾ ವಿಧದ ಕ್ಲೇಶಗಳನ್ನು ಅನುಭವಿಸಿ, ಸಂಬಂಧಪಟ್ಟ ವ್ಯಕ್ತಿಗಳನ್ನು ಪ್ರತ್ಯಕ್ಷ ಕಂಡು, ಕೇಳಿ, ಅವರನ್ನು ವಿಶ್ವಾಸಕ್ಕೆ ತಕ್ಕೊಂಡು ವಿಷಯ ಸಂಗ್ರಹಮಾಡಿ, ವಿಶ್ಲೇಷಣೆ ನಡೆಸುವುದು ಬೇರೆಯೇ. ಅದೊಂದು ಸಂತೃಪ್ತಿಯನ್ನೂ, ಸಾರ್ಥಕಭಾವವನ್ನೂ ಉಂಟುಮಾಡುವುದು ಸಹಜ.
