{"product_id":"triphala-shataayushigalu-divyoshadhi-ayurveda-dr-magadi-r-gurudeva-kannada-book","title":"ಶತಾಯುಷಿಗಳ ದಿವೌಷಧ ತ್ರಿಫಲ","description":"\u003cp\u003eಡಾ. ಮಾಗಡಿ ಆರ್. ಗುರುದೇವರವರು ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಆರ್ಕಿಡ್ಗಳ ಬಗ್ಗೆ ನಡೆಸಿದ ಅಧ್ಯಯನಕ್ಕೆ ಪಿ.ಹೆಚ್ಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ವಿಶ್ವೇಶ್ವರಪುರ ವಿಜ್ಞಾನ ಕಾಲೇಜಿನಲ್ಲಿ 30 ವರ್ಷ ಪದವಿ ತರಗತಿಗಳಿಗೆ ಸಸ್ಯಶಾಸ್ತ್ರವನ್ನು ಬೋಧಿಸಿದ ಅನುಭವವಿದೆ. ಇವರ ಆಸಕ್ತಿದಾಯಕ ವಿಷಯಗಳಲ್ಲಿ ಭ್ರೂಣಶಾಸ್ತ್ರ, ದ್ರವ್ಯಗುಣ ವಿಜ್ಞಾನ, ಔಷಧೀಯ ಸಸ್ಯಗಳ ಅಧ್ಯಯನ ಮುಖ್ಯವಾದವುಗಳು. ಇವರ ಸುಮಾರು 50ಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ವಿಜ್ಞಾನಿಗಳ ಮನ್ನಣೆ ಪಡೆದಿವೆ. ಇವರು 5 ಕೃತಿಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಮತ್ತು 10 ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಇವರು ರಚಿಸಿದ ಕರ್ನಾಟಕದ ಔಷಧೀಯ ಸಸ್ಯಗಳು (5 ಮಾಲಿಕೆಗಳಲ್ಲಿ) ಭಾರತೀಯ ವಿಜ್ಞಾನ ಸಾಹಿತ್ಯದಲ್ಲಿ ಇದೊಂದು ಪ್ರಥಮ ದಾಖಲೆ. ಕನ್ನಡದಲ್ಲಿ ಅಪಾರ ಜನಮನ್ನಣೆ ಪಡೆದಿವೆ. ಇವರ ಕರ್ನಾಟಕದ ಆರ್ಕಿಡ್ (ಸೀತಾಳೆ) ಸಸ್ಯಗಳ ಸಚಿತ್ರ ಕೈಪಿಡಿ ಎಂಬ ಪುಸ್ತಕ ಬಹುಶಃ ಆರ್ಕಿಡ್ಗಳನ್ನು ಪರಿಚಯಿಸಿದ ಕನ್ನಡದ ಮೊದಲ ಪುಸ್ತಕವಾಗಿದೆ.\u003c\/p\u003e\n\u003cp\u003e-ಪ್ರಕಾಶಕರು\u003c\/p\u003e","brand":"Dr. Magadi. R. Gurudeva","offers":[{"title":"Default Title","offer_id":47775056134403,"sku":"HB00006275","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TriphalaShataayushigaluDivyoshadhi.jpg?v=1771668910","url":"https:\/\/harivubooks.com\/products\/triphala-shataayushigalu-divyoshadhi-ayurveda-dr-magadi-r-gurudeva-kannada-book","provider":"Harivu Books","version":"1.0","type":"link"}