{"product_id":"trikona-prema-tanda-duranta-crime-stories-kannada-book","title":"ತ್ರಿಕೋಣ ಪ್ರೇಮ ತಂದ  ದುರಂತ","description":"\u003cp\u003eನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಮಯದಿಂದಲೂ ಅಂದರೆ ಹಲವಾರು ದಶಕಗಳ ಹಿಂದಿನಿಂದಲೂ ವ್ಯಕ್ತಪಡಿಸುತ್ತಿರುವ ಸ್ಪಷ್ಟ ನಿಲುವೇನೆಂದರೆ ಅಪರಾಧ ತಡೆ ಅಪರಾಧ ಪತ್ತೆಗಿಂತ ಬಹುಮುಖ್ಯ ಎನ್ನುವುದನ್ನು ಅಪರಾಧವಾದ ನಂತರ ಅದನ್ನು ಪತ್ತೆ ಮಾಡುವುದಕ್ಕಿಂತ ಅಪರಾಧವಾಗದಂತೆ ಎಚ್ಚರವಹಿಸುವುದೇ ಅತ್ಯಂತ ಉತ್ತಮ ಉಪಾಯ. ಈ ಕಾರಣಕ್ಕಾಗಿ ನಾನು ಸಾರ್ವಜನಿಕರಿಗೆ ಬಗೆಬಗೆಯ ಅಪರಾಧಗಳ ಬಗ್ಗೆ ಹಾಗೂ ಅಪರಾಧಿಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಬರುತ್ತಿದ್ದೇನೆ. ಇವನ್ನು ಬಿಡಿ ಲೇಖನಗಳ ಮೂಲಕವೂ, ಅಂಕಣಗಳ ಮೂಲಕವೂ, ಪುಸ್ತಕಗಳ ಮೂಲಕವೂ ಹಂಚಿಕೊಳ್ಳುತ್ತಾ ಬಂದಿದ್ದೇನೆ.\u003c\/p\u003e\n\u003cp\u003eಸುಮಾರು ನಾಲ್ಕೂವರೆ ವರ್ಷಗಳಿಂದ ನಾನು 'ವಿಜಯವಾಣಿ' ಪತ್ರಿಕೆಯಲ್ಲಿ ಪ್ರತಿ ಭಾನುವಾರವೂ 'ಆ ಕ್ಷಣ' ಎಂಬ ಹೆಸರಿನ ಅಂಕಣವನ್ನು ಬರೆಯುತ್ತಿದ್ದೇನೆ.\u003c\/p\u003e\n\u003cp\u003eಈ ಅಂಕಣದ ಪ್ರತಿ ಲೇಖನದಲ್ಲೂ ಒಂದು ವಿಶೇಷವಾದ ಹಾಗೂ ಕುತೂಹಲಕರವಾದ ಅಪರಾಧದ ಬಗ್ಗೆ ತಿಳಿಸಿ, ಆ ಅಪರಾಧ ಹೇಗಾಯಿತು.\u003c\/p\u003e\n\u003cp\u003eಅಪರಾಧಿಗಳಿಗೆ ಯಾವ ಶಿಕ್ಷೆಯಾಯಿತು, ಮತ್ತು ಯಾವ ಕ್ಷಣದಲ್ಲಿ ಅಪರಾಧವಾಗುತ್ತದೆ ಮುಂತಾದ ಮಾಹಿತಿಗಳನ್ನು ಓದುಗರಿಗೆ ಕೊಡುತ್ತಾ ಬಂದಿದ್ದೇನೆ.\u003c\/p\u003e\n\u003cp\u003eಪ್ರತಿ ಲೇಖನದ ಕೊನೆಯಲ್ಲಿ ಹಿರಿಯರೊಬ್ಬರ ವಾಣಿಯನ್ನು ಕೊಡುತ್ತಿದ್ದೇನೆ. ಈ ನನ್ನ ಅಂಕಣ ಸಾಕಷ್ಟು ಜನಪ್ರಿಯವಾಗಿದ್ದು, ಪ್ರತಿ ವಾರವೂ ನನಗೆ ಈ ಮೇಲ್ ಮೂಲಕ ಬಹಳಷ್ಟು ಮೆಚ್ಚುಗೆಯ ಪತ್ರಗಳು ಬರುತ್ತಿವೆ.\u003c\/p\u003e\n\u003cp\u003e-ಡಾ| ಡಿ. ವಿ. ಗುರುಪ್ರಸಾದ್, (ಲೇಖಕರ ಮಾತಿನಲ್ಲಿ...)\u003c\/p\u003e\n\u003cp\u003eತ್ರಿಕೋಣ ಪ್ರೇಮ\u003c\/p\u003e","brand":"Dr. D. V. Guruprasad","offers":[{"title":"Default Title","offer_id":47701960294659,"sku":"HB00006046","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Trikonaprematandadurantafp.jpg?v=1770011421","url":"https:\/\/harivubooks.com\/products\/trikona-prema-tanda-duranta-crime-stories-kannada-book","provider":"Harivu Books","version":"1.0","type":"link"}