Skip to product information
1 of 1

ಡಾ. ಎಸ್. ಶಿವರಾಜಪ್ಪ

ತ್ರಿಭಾಷಾ ನಿಘಂಟು - ಸಂಸ್ಕೃತ-ಕನ್ನಡ-ಇಂಗ್ಲಿಷ್

ತ್ರಿಭಾಷಾ ನಿಘಂಟು - ಸಂಸ್ಕೃತ-ಕನ್ನಡ-ಇಂಗ್ಲಿಷ್

Publisher: ಸಪ್ನ ಬುಕ್ ಹೌಸ್

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

ನನ್ನ ಆತ್ಮೀಯ ಕಿರಿಯ ಮಿತ್ರರಾದ ಡಾ. ಎಸ್. ಶಿವರಾಜಪ್ಪನವರು ಈ ದಿಸೆಯಲ್ಲಿ ಪ್ರಯತ್ನಿಸಿ ತಮ್ಮ ಆರೂವರೆ ವರುಷಗಳ ಸತತ ಪರಿಶ್ರಮದ ಮೂಲಕ ತಮಗೆ ದೊರೆತ ಚಕ್ರವರ್ತಿ ಶ್ರೀನಿವಾಸಗೋಪಾಲಾಚಾರ್ಯ ಸಂಸ್ಕೃತ ಕನ್ನಡ ನಿಘಂಟು, ಪ್ರೊ. ವಾಮನ ಶಿವರಾಂ ಆಯ್ಕೆಯವರ ಸಂಸ್ಕೃತ | ಇಂಗ್ಲೀಷ್ ನಿಘಂಟು ಮುಂತಾದವುಗಳನ್ನು ಎದುರಿಗಿಟ್ಟುಕೊಂಡು, ಆಳವಾಗಿ ಪರಿಶೀಲಿಸಿ ತಮ್ಮದೇ ಆದ ಸಂಸ್ಕೃತ-ಕನ್ನಡ-ಇಂಗ್ಲಿಷ್ ಶಬ್ದಕೋಶವೊಂದನ್ನು ರಚಿಸಿದ್ದು, ಸಂಸ್ಕೃತ ವಿದ್ಯಾರ್ಥಿಲೋಕಕ್ಕೆ ಒಂದು ಅತ್ಯಮೂಲ್ಯ ಕೊಡುಗೆಯಾಗಿದೆ. ಇವರ ಪರಿಶ್ರಮ ತುಂಬ ಶ್ಲಾಘನೀಯವಾದುದು. ಸಂಸ್ಕೃತ ಶಬ್ದಗಳಿಗೆ ಅವುಗಳ ಲಿಂಗವನ್ನು ಸೂಚಿಸುತ್ತ ಸುಲಭವಾಗಿ ಗ್ರಾಹ್ಯವಾಗಬಹುದಾದ ಕನ್ನಡ-ಇಂಗ್ಲಿಷ್ ಅರ್ಥಗಳನ್ನು ಇವರು ಕೊಟ್ಟಿದ್ದಾರೆ. ಉದಾಹರಣೆಗೆ ಒಂದು ಶಬ್ದವನ್ನು ಕೊಡುವುದಾದರೆ 'ಅಂಶ' ಶಬ್ದಕ್ಕೆ (ಪ.) ಎಂದು ಲಿಂಗವನ್ನು ಸೂಚಿಸಿ ವಿಭಾಗ, ಭಾಗ, ಪಾಲು, ಅವಯವ, ಒಂದು ವಸ್ತುವಿನ ಭಾಗ ಎಂದೆಲ್ಲ ಕನ್ನಡದಲ್ಲಿ ಅರ್ಥಬರೆದು a share, part, portion ಎಂದು ಮುಂತಾಗಿ ಇಂಗ್ಲಿಷ್ ಅರ್ಥವನ್ನು ವಿವರಿಸಿದ್ದಾರೆ.

ಸಂಸ್ಕೃತ ವ್ಯಾಕರಣ ಗ್ರಂಥಸಹಿತವಾಗಿ ಅಸಂಖ್ಯಾಸಂಖ್ಯ ಉದ್ದಾಮ ಕೃತಿಗಳನ್ನು ಕನ್ನಡ ಇಂಗ್ಲಿಷ್ ವಿದ್ಯಾರ್ಥಿಗಳಿಗಾಗಿ ನೀಡಿದ ಡಾ. ಎಸ್. ಶಿವರಾಜಪ್ಪನವರ ತುಂಬ ಪರಿಶ್ರಮ ಪೂರಿತವಾದ ಈ ಕೃತಿಯು ಶಾಲಾ-ಕಾಲೇಜು ವಿಶ್ವವಿದ್ಯಾನಿಲಯಗಳ ಅಧ್ಯಾಪಕ ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲರಿಗೂ ಹಾಗೂ ಸಂಸ್ಕೃತವನ್ನು ಕಲಿಯಬೇಕೆಂದು ಬಯಸುವ ಸರ್ವ ಸಹೃದಯರಿಗೂ ಅಚ್ಚುಮೆಚ್ಚಿನದಾಗಲಿ ಎಂದು ಹಾರೈಸುವೆ. ಇನ್ನೂ ಇಂತಹ ಅನೇಕಾನೇಕ ಉದ್ಘಾಮ ಕೃತಿಗಳು ಡಾ. ಎಸ್. ಶಿವರಾಜಪ್ಪನವರಿಂದ ಮೂಡಿ ಬರಲಿ ಎಂಬ ಸದಾಶಯ ನನ್ನದು.

ಶಾಸ್ತ್ರ ವಿದ್ಯಾನಿಧಿ ಸಿದ್ಧಾಂತಿ

                                         -ಪ್ರೊ. ಗುರುಪಾದ ಕೆ. ಹೆಗಡೆ

                                          ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಮೈಸೂರು

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)