{"product_id":"taranada-articles-c-s-sarvamangala-v-s-sreedhara-kannada-book","title":"ತಾರಾನಾದ","description":"\u003cp\u003eನಾವೇನೂ ಬುದ್ಧರಲ್ಲ, ಆದ್ರೆ ಬುದ್ಧತನ ನಮ್ಮಲ್ಲಿ ಸ್ವಲ್ಪ ಇರಬೇಕು. ನಾವ್ಯಾರೂ ಅಶೋಕರಲ್ಲ. ಆದರೆ ಅಶೋಕತನ ಇರಬೇಕು. ಅದೇ ನಮ್ಮನ್ನು ಮನುಷ್ಯರಾಗಿ ಮಾಡೋದು.\u003c\/p\u003e\n\u003cp\u003eನಮ್ಮ ಸಂಗೀತ ಮೂಲತಃ ಅಂತರ್ಮುಖಿ ಸ್ವರೂಪದ್ದು. ಶುದ್ಧಸ್ವರದ ಸಿದ್ದಿಯೇ ನಮ್ಮ ಸಂಗೀತದ ಧೈಯ. ಒಬ್ಬ ಸರೋದ್ ಬಾರಿಸುವಾಗ ಯಾವ ಅನುಭವದ ಸೃಷ್ಟಿಕ್ರಿಯೆಯಲ್ಲಿ ತೊಡಗುತ್ತಾನೆ? ಸಂಗೀತದ ಮೂಲಕ ಬೇರೊಂದು ಪ್ರಜ್ಞಾಸ್ತರದಲ್ಲಿ ಅನುಭವವನ್ನು ಸೃಷ್ಟಿಸಲಿಕ್ಕಲ್ಲ. ಸ್ವರವನ್ನು ಅದರ ಶುದ್ಧಸ್ಥಿತಿಯಲ್ಲಿ ಸೆರೆಹಿಡಿದಾಗ ಸಿಗುವ ಆತ್ಮಾನಂದಕ್ಕಾಗಿ. \u003c\/p\u003e\n\u003cp\u003eಭೀಮದಾಸರಿಂದ ಭಕ್ತಿ ಸಂಗೀತದ ಸಂಸ್ಕಾರ ಪಡೆದ ಶ್ರೀಮತಿ ರಾಧಿಕಾ ಕಾಖಂಡಿಕಿ ಅವರು ತಮ್ಮ ಗುರುಗಳನ್ನು ಕುರಿತು ಚಿಕ್ಕ ಹಾಗೂ ಚೊಕ್ಕದಾದ ಕೃತಿಯೊಂದನ್ನು ರಚಿಸಿದ್ದಾರೆ. ಕಾಖಂಡಿಕಿ ಅವರ ಸಂಗೀತವನ್ನು ಆಸ್ವಾದಿಸುವ ಅನುಭವವನ್ನು ಈ ಕೃತಿ ನೀಡುತ್ತದೆ. ತಂಬೂರಿಯ ಶುದ್ಧ ಶೃತಿಯಂತೆ ಈ ಕೃತಿ ಇದೆ. ಇದರಲ್ಲಿರುವ ಇತಿಹಾಸ ಮತ್ತು ಘಟನೆಗಳು ಪ್ರಾಮಾಣಿಕತೆಯಿಂದ ಕೂಡಿವೆ. ವ್ಯಕ್ತಿಯ ಪರಿವರ್ತನೆಗೆ ಘಟನೆಯೊಂದು ಹೇಗೆ ಕಾರಣವಾಯಿತು, ಅದರಿಂದ ಆದ ಸತ್ಪರಿಣಾಮಗಳ ಅಚ್ಚುಕಟ್ಟಾದ ದಾಖಲೆ ಈ ಪುಸ್ತಕದಲ್ಲಿದೆ. ಅಥಣಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸ್ಥಾಪನೆ, ಅದರ ಬೆಳವಣಿಗೆ, ಅದರ ನಿರಂತರ ನಡೆಯುವದಕ್ಕೆ ರೂಪಿಸಿದ ಒಂದು ಪ್ರಾಮಾಣಿಕ ಪಂಚಾಂಗ, ನಡೆದು ಹೋದ ಪವಾಡಗಳು ಈ ಕೃತಿಯಲ್ಲಿವೆ.\u003c\/p\u003e\n\u003cp\u003eಭೀಮದಾಸರ ಜೀವನ ಚಕ್ರವ್ಯೂಹದ ಸುಳಿಗೆ ಸಿಕ್ಕಾಗ ಹೊಸ ತಿರುವು ನೀಡಿದ ಕಾಶೀಬಾಯಿ ಎಂಬ ಸ್ತ್ರೀ, 'ಕಾಶಿ' ಪುಣ್ಯ ಕ್ಷೇತ್ರದಂತೆ ಹೇಗಿದ್ದಳೆಂಬ ವಿಚಾರ ಈ ಕೃತಿಯಲ್ಲಿ ಮಹತ್ವ ಪಡೆದಿದೆ. ಲೇಖಕಿ ಎಲ್ಲಿಯೂ ಭಾವಾವೇಶಕ್ಕೆ ಒಳಗಾಗದೆ ಅತ್ಯಂತ ಪ್ರಾಮಾಣಿಕವಾಗಿ ಗುರು ಸ್ಮರಣೆ ಮಾಡಿದ್ದಾರೆ. ಗುರುವಿನ ಪ್ರಸಾದ ನನ್ನ ಸಂಗೀತ ಶಕ್ತಿಗೆ ಹೇಗೆ ಬಲ ನೀಡಿತು ಎಂಬುದನ್ನು ಲೇಖಕಿ ಕೃತಿಯಲ್ಲಿ ಉದಾಹರಣೆಗಳ ಮೂಲಕ ಧೃಡಪಡಿಸಿದ್ದಾರೆ. ಇದೊಂದು ಉತ್ತಮ ವ್ಯಕ್ತಿ ಚಿತ್ರವಾಗಿದೆ.\u003c\/p\u003e\n\u003cp\u003e-ಡಾ. ಕೃಷ್ಣ ಕಟ್ಟಿ \u003c\/p\u003e","brand":"C. S. Sarvamangala, V. S. Sreedhara","offers":[{"title":"Default Title","offer_id":46819652468995,"sku":"HB00005230","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Taranada.jpg?v=1747134148","url":"https:\/\/harivubooks.com\/products\/taranada-articles-c-s-sarvamangala-v-s-sreedhara-kannada-book","provider":"Harivu Books","version":"1.0","type":"link"}