{"product_id":"tande-magalu-letter-code-veena-bannanje-kannada-book","title":"ತಂದೆ - ಮಗಳು","description":"\u003cp\u003eಓ, ನನ್ನ ಉದ್ದಕಿವಿಯ ಮುದ್ದುಪ್ರಾಣಿ, ನನಗೊಂದೇ ಬಯಕೆ, ನಿನ್ನ ಜೀವದ ಕಣಕಣವೂ ಸಮಗ್ರವಾಗಿ ಬೆಳೆಯಬೇಕು. ಮಹತ್ತಮವಾಗಿ ಪರಿವರ್ತಿತವಾಗಬೇಕು. ನಾವು ಬಯಸಿದ್ದೆಲ್ಲ ನಮ್ಮನ್ನು ಬೆಳೆಸಲಿಕ್ಕಿಲ್ಲ. ಬಯಕೆ ಬೆಳವಣಿಗೆಗೆ ಬೆನ್ನು ಗಾಳಿ, ಸರಿಯೇ. ಆದರೆ ಏನು ಬಯಸಬೇಕು? ಯಾರು ತೀರ್ಮಾನಿಸಬೇಕು?\u003c\/p\u003e\n\u003cp\u003eಹುಚ್ಚಿ, ನಾನಿಲ್ಲದಿದ್ದರೂ ನೀನು ಇರುತ್ತೀ, ನಡೆಯುತ್ತಿ, ನವೆಯುತ್ತೀ, ನಲಿಯುತ್ತೀ. ನಾನು ನಿನಗಾಗಿ ನಿನ್ನ ಹತ್ತಿರ ಬಂದಿಲ್ಲ. ನನಗಾಗಿ ಬಂದಿದ್ದೇನೆ. ನನಗೆ ಭಾರವಾದದ್ದನ್ನು ನಿನಗೆ ಕೊಟ್ಟು ಹಗುರಾಗುವ ಕೆಟ್ಟ ಬಯಕೆ. ನನ್ನದನ್ನು ನಿನ್ನ ಪಾಲಿಗೆ ತೊಡಿಸಿದರೆ ನಿನಗೂ ನಡೆ ಸುಗಮ.\u003c\/p\u003e\n\u003cp\u003eನಿನ್ನ ಕಾಲಮುಂದೆಯೆ ಅದೊಂದು ಪ್ರಶಸ್ತವಾದ ಹಾದಿ ಇದೆ. ಯಾರು ನಡೆದಿದ್ದಾರೆ ಎಂದು ಶಂಕಿಸಬೇಡ. ನಡೆದವರ ಬದುಕು ಕೆಟ್ಟಿದೆ ಎಂದು ಮುಖ ಕಹಿಮಾಡಬೇಡ. ಯಾರು ನಡೆದು ಏನು ಪಡೆದಿದ್ದಾರೆ ಎಂಬುದನ್ನು ಕಟ್ಟಿಕೊಂಡು ಏನು ಮಾಡುತ್ತೀ? ಎದುರಿಸಿ, ತುಳಿದು ಮುಂದುವರಿಯಬೇಕು. ಎಂಬಲ್ಲಿಗೆ... \u003c\/p\u003e","brand":"Veena Bannanje","offers":[{"title":"Default Title","offer_id":46781794222339,"sku":"HB00005205","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Tande-Magalu.jpg?v=1745842322","url":"https:\/\/harivubooks.com\/products\/tande-magalu-letter-code-veena-bannanje-kannada-book","provider":"Harivu Books","version":"1.0","type":"link"}