ತಲಕಾಡಿನ ಸಾಂಸ್ಕೃತಿಕ ಇತಿಹಾಸ

ತಲಕಾಡಿನ ಸಾಂಸ್ಕೃತಿಕ ಇತಿಹಾಸ

ಮಾರಾಟಗಾರ
ಡಾ. ಲ. ನ. ಸ್ವಾಮಿ
ಬೆಲೆ
Rs. 350.00
ಕೊಡುಗೆಯ ಬೆಲೆ
Rs. 350.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ತಲಕಾಡು ಎಂದಾಕ್ಷಣ ನಮ್ಮೆಲ್ಲರಿಗು ಚಿರಪರಿಚಿತವಾಗಿರುವ ಘಟನಾವಳಿ ಅಲಮೇಲಮ್ಮನ ಶಾಪ. ಇಂದು ಜನಮನದಲ್ಲಿ ತಲಕಾಡು ಎಂದರೆ ಅಲಮೇಲಮ್ಮನ ಐತಿಹ್ಯ ನೆನಪಿಗೆ ಬರುವಷ್ಟರಮಟ್ಟಿಗೆ, ಈ ಎರಡು ಹೆಸರುಗಳು ತಳಕು ಹಾಕಿಕೊಂಡಿವೆ. ತಲಕಾಡು ಪ್ರದೇಶ ತುಂಬಾ ಹಿಂದಿನಿಂದ ಮಾನವನ ಚಟುವಟಿಕೆಯ ಕೇಂದ್ರವಾಗಿದ್ದಿತು. ಪ್ರಾಚೀನ ರಾಜಧಾನಿ ತಲಕಾಡಿನ ವಿಸ್ತಾರವನ್ನು, ಅದರ ಅವಶೇಷಗಳು ಮತ್ತು ವಿಶೇಷತೆಗಳನ್ನು ಅರಿಯುವ ಉದ್ದೇಶದಿಂದ, ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯು 1992ರಿಂದ 2012ರವರೆಗೆ ಉತ್ಖನನ ನಡೆಸಿದೆ. ತಲಕಾಡು ಪಂಚಲಿಂಗಗಳ ಪುಣ್ಯಕ್ಷೇತ್ರ. ಐತಿಹ್ಯದಲ್ಲಿ ತಲಕಾಡನ್ನು ಭವರೋಗಹರ ಕ್ಷೇತ್ರವೆಂದು ಕರೆಯಲಾಗಿದೆ. ಅಲಮೇಲಮ್ಮನ ಗಂಡ ಶ್ರೀರಂಗನು, ತಲಕಾಡಿನಲ್ಲಿ ತನ್ನ ಕಾಯಿಲೆಯ ನಿವಾರಣೆಗಾಗಿ ನೆಲೆಸಿದ್ದು ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ. ಪ್ರಸ್ತುತ ಕೃತಿ, ಪುರಾತತ್ವ ಸಂಶೋಧನೆಯ ಹಿನ್ನೆಲೆಯಲ್ಲಿ, ಈ ಕ್ಷೇತ್ರದ ನಿಖರವಾದ ಇತಿಹಾಸ, ಸ್ಮಾರಕಗಳ ವಾಸ್ತು ಅಧ್ಯಯನ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಪರಿಚಯಮಾಡಿಕೊಡುವ ಸಮಗ್ರ ಅಧ್ಯಯನವಾಗಿದೆ. ತಲಕಾಡಿನ ಭವ್ಯ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಪರಿಚಯಿಸುವ ಕೃತಿ ಇದಾಗಿದೆ.