{"product_id":"tajmahallina-kaidhigalu-stories-to-kannada-sunaif-kannada-book","title":"ತಾಜ್ ಮಹಲ್ಲಿನ ಖೈದಿಗಳು","description":"\u003cp\u003e'ಈ ತಲೆಯೊಳಗೆ ಮೆದುಳು ಅಂತ ಒಂದು ಇಲ್ಲದಿದ್ದರೆ ಕಾಣಬಹುದಿತ್ತು. ನೋಡು, ಪ್ರಪಂಚದ ಯಾವ ಮೂಲೆಯಲ್ಲಿ ನನ್ನ ಪರಿಪೂರ್ಣ ಪಾಲಿಲ್ಲದೆ ಪ್ರಗತಿಯಾಗಿದೆ ಹೇಳು.' ನಾನು ಅದನ್ನು ತಮಾಷೆಯಾಗಿ ಹೇಳಿದ್ದೆನಾದರೂ ದೇಹಕ್ಕೆ ಆ ಮಾತನ್ನು ಜೀರ್ಣಿಸಲಾಗಲಿಲ್ಲ. ಅರೆಗಳಿಗೆಯ ಮೌನದ ನಂತರ ದೇಹ ಮಾತಾಡಿತು.\u003c\/p\u003e\n\u003cp\u003e“ನೀನು ಕಡಿದು ಗುಡ್ಡೆ ಹಾಕಿದ್ದು ಅಷ್ಟರಲ್ಲೇ ಇದೆ. ಪ್ರಗತಿ ಅಂತ ಹೇಳುತ್ತಾ ಒಬ್ಬನೇ ದೊಡ್ಡ ಬುದ್ದಿಜೀವಿಯಾಗಿ ಎಲ್ಲವನ್ನು ಮುಕ್ಕುವ ಆಲೋಚನೆ ನಿನಗಿತ್ತಲ್ಲ. ನೋಡು, ಶ್ರಮದ ಬೆವರಿಲ್ಲದೆ ಈ ಭೂಮಿಯಲ್ಲಿ ಏನೇನೂ ಇಲ್ಲ.'\u003c\/p\u003e\n\u003cp\u003eನಾನೂ ಬಿಟ್ಟುಕೊಡಲಿಲ್ಲ:\u003c\/p\u003e\n\u003cp\u003e'ಅದಕ್ಕೆ ಸಾಕ್ಷಿ ಎಲ್ಲಿದೆ? ಯಾವ ಇತಿಹಾಸ ಪುಸ್ತಕದಲ್ಲಿ ನಿನ್ನ ಹೆಸರಿದೆ? ಯಾವ ಶಾಸನದಲ್ಲಿದೆ? ಪಾಠಪುಸ್ತಕಗಳಲ್ಲೂ ಇಲ್ಲ. ತಲೆ, ತಲೆ ಮಾತ್ರ ಅತ್ಯಂತಿಕ ಸತ್ಯ. ಮಹಾಪುರಷರ ದೇಹವನ್ನು ನೀನು ತೋರಿಸಿ ಕೊಡು ನೋಡೋಣ. ನಾಣ್ಯಗಳನ್ನು ನೋಡು. ಅದರಲ್ಲಿ ರಾಜನ ದೇಹ ಎಲ್ಲಿದೆ?'\u003c\/p\u003e\n\u003cp\u003eದೇಹದ ಕೋಪ ನೆತ್ತಿಗೇರಲು ಇಷ್ಟು ಸಾಕಿತ್ತು. ದೇಹ ಹೇಳಿತು:\u003c\/p\u003e\n\u003cp\u003e'ನೀನು ಚರಿತ್ರೆಯ ಕುರುಡರಿಗೆ ಮುಟ್ಟಿನೋಡಲು ಬಾಕಿಯಿರುವ ಚಿಹ್ನೆ ಮಾತ್ರ.\u003c\/p\u003e\n\u003cp\u003eಕಿಲುಬುಗಟ್ಟುವ ಅಲೆಕ್ಸಾಂಡರ್ ಚಕ್ರವರ್ತಿ. ಆದರೆ, ನಾನು ಕೋಟೆಗಳ ಮೇಲೆ, ಅಣೆಕಟ್ಟೆಗಳ ಮೇಲೆ ಎದೆಯುಬ್ಬಿಸಿ ನಿಂತಿರುತ್ತೇನೆ.'\u003c\/p\u003e\n\u003cp\u003eಆ ದಿನದ ಮಾತುಕತೆ ಅದೆಷ್ಟು ಬೇಗ ತಮಾಶೆಯಿಂದ ಗಂಭೀರತೆಯ ಕಡೆಗೆ ವಾಲಿತ್ತು.\u003c\/p\u003e\n\u003cp\u003e-'ತಲೆ' ಕಥೆಯಿಂದ \u003c\/p\u003e","brand":"To Kannada : Sunaif","offers":[{"title":"Default Title","offer_id":47744378732803,"sku":"HB00006201","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TajmahallinaKaidhigalu.jpg?v=1771232352","url":"https:\/\/harivubooks.com\/products\/tajmahallina-kaidhigalu-stories-to-kannada-sunaif-kannada-book","provider":"Harivu Books","version":"1.0","type":"link"}