{"product_id":"tabbaliyu-neenaade-magane-novel-s-l-bhyrappa-kannada-book","title":"ತಬ್ಬಲಿಯು ನೀನಾದೆ ಮಗನೆ","description":"\u003csection class=\"full slb_inpage\" data-mce-fragment=\"1\"\u003e\n\u003cdiv class=\"row\" data-mce-fragment=\"1\"\u003e\n\u003cdiv class=\"small-12 medium-12 large-12 columns\" data-mce-fragment=\"1\"\u003e\n\u003cdiv class=\"small-12 medium-9 large-9 columns slb_entry\" data-mce-fragment=\"1\"\u003e\n\u003cdiv class=\"full\" data-mce-fragment=\"1\"\u003e\n\u003carticle id=\"post-168\" class=\"post-168 post type-post status-publish format-standard has-post-thumbnail hentry category-fiction\" data-mce-fragment=\"1\"\u003e\n\u003cdiv class=\"entry-content\" data-mce-fragment=\"1\"\u003e\n\u003cdiv class=\"full\" data-mce-fragment=\"1\"\u003e\n\u003cdiv class=\"small-12 medium-6 large-6 columns\" data-mce-fragment=\"1\"\u003e\n\u003cdiv class=\"full\" data-mce-fragment=\"1\"\u003e\n\u003cp data-mce-fragment=\"1\"\u003eಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಅಮೆರಿಕೆಯಿಂದ ಹಿಂತಿರುಗಿದ ಮೊಮ್ಮಗ, ಇವರ ಮೌಲ್ಯಸಂವೇದನೆಗಳ ನಡುವೆ ನಡೆಯುವ ತಿಕ್ಕಾಟವೇ ಈ ಕಾದಂಬರಿಯ ವಸ್ತು.\u003c\/p\u003e\n\u003cp data-mce-fragment=\"1\"\u003eಪ್ರಾಯಶಃ ಭಾರತದ ಎಲ್ಲ ಭಾಷೆಗಳಲ್ಲೂ ಪ್ರಚಲಿತವಿರುವ ಗೋವಿನ ಹಾಡಿನ ಹಿನ್ನೆಲೆಯಲ್ಲಿ ಆರಂಭವಾಗುವ ಕಾದಂಬರಿಯು, ಭಾರತೀಯ ಸಂಸ್ಕೃತಿಯ ಮೂಲ ಬೇರುಗಳನ್ನು ಹಿನ್ನೆಲೆಯಲ್ಲಿ ಕಾಣಿಸುತ್ತದೆ. ಈ ಕೃತಿಯನ್ನಾಧರಿಸಿ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಿಸಿರುವ ಚಲನ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆದಿವೆ. ಈ ಕಾದಂಬರಿಯ ಹಿಂದಿ ಅನುವಾದವೂ ಅಪಾರವಾದ ಮೆಚ್ಚುಗೆ ಪಡೆದಿದೆ.\u003c\/p\u003e\n\u003cp data-mce-fragment=\"1\"\u003eಇದೊಂದು ಉತ್ಕೃಷ್ಟ ಸಾಹಿತ್ಯ ಕೃತಿ ಎಂದು ಭಾವಿಸುವವರಿರುವಂತೆಯೇ, ಪ್ರಗತಿವಿರೋಧಿ, ಪ್ರತಿಗಾಮಿ ಮೌಲ್ಯಗಳನ್ನು ಪ್ರತಿಪಾದಿಸುವ ತೀರಾ ಕಳಪೆ ಕಾದಂಬರಿ ಎಂದು ಇದನ್ನು ದ್ವೇಷಿಸುವವರೂ ಇದ್ದಾರೆ. ಪ್ರೀತಿ ದ್ವೇಷಗಳೆರಡನ್ನೂ ಪ್ರಚೋದಿಸುವ ಈ ಗುಣವು ಕಾದಂಬರಿಯ ಶಕ್ತಿಯ ಗುರುತಾಗಿದೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/article\u003e\n\u003c\/div\u003e\n\u003c\/div\u003e\n\u003cdiv class=\"small-12 medium-3 large-3 columns slbSiidebar\" data-mce-fragment=\"1\"\u003e\u003c\/div\u003e\n\u003c\/div\u003e\n\u003c\/div\u003e\n\u003c\/section\u003e\n\u003cfooter class=\"slbFooter\" data-mce-fragment=\"1\"\u003e\n\u003cdiv class=\"full\" data-mce-fragment=\"1\"\u003e\u003c\/div\u003e\n\u003c\/footer\u003e","brand":"S. L. Bhyrappa","offers":[{"title":"Default Title","offer_id":42020612505859,"sku":"HB00001766","price":370.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/tabbaliyuneenaademagane_0001.jpg?v=1636356406","url":"https:\/\/harivubooks.com\/products\/tabbaliyu-neenaade-magane-novel-s-l-bhyrappa-kannada-book","provider":"Harivu Books","version":"1.0","type":"link"}