{"product_id":"swathi-bombat-m-manohara-pai-kannada-novel","title":"ಸ್ವಾತಿ ಬೊಂಬಾಟ್","description":"\u003cp data-path-to-node=\"3\"\u003e\"ಹೂವು ಏಕೆ ಆಕರ್ಷಕವಾಗಿರುತ್ತದೆ? ಹೂವಿನಲ್ಲೇಕೆ ಮಕರಂದವಿರುತ್ತದೆ? ಜೇನುನೊಣ, ಚಿಟ್ಟೆ, ಸಣ್ಣಪುಟ್ಟ ಹಕ್ಕಿಗಳು ಮುಂತಾದವನ್ನು ತನ್ನತ್ತ ಸೆಳೆಯಲಲ್ಲವೇ? ಆದರೆ ಹೂವಿನ ಮುಖ್ಯ ಉದ್ದೇಶ ತನ್ನ ಅಂದ-ಚೆಂದದ ಪ್ರದರ್ಶನವಲ್ಲ; ವಿವಿಧ ಜೀವಿಗಳಿಗೆ ಜೇನು ಉಣಿಸುವುದೂ ಅಲ್ಲ. ಹೂವಿನ ಅಂದ, ಚೆಂದ, ಮಕರಂದದ ಮುಖ್ಯ ಉದ್ದೇಶ ಪರಾಗಸ್ಪರ್ಶ; ತನ್ನ ತಳಿಯನ್ನು ಮುಂದುವರಿಸುವುದು. ಮಧುವೆಂದರೆ ತನ್ನ ಪರಾಗಸ್ಪರ್ಶದ ಮಹತ್ಕಾರ್ಯಕ್ಕೆ ಸಹಕರಿಸುವ ಜೀವಿಗಳಿಗೆ ಹೂವೊಂದು ನೀಡುವ ಪುಟ್ಟ ಬಹುಮಾನ.\u003c\/p\u003e\n\u003cp data-path-to-node=\"4\"\u003eಅದೇ ರೀತಿ ಕಾಮದಲ್ಲೇಕೆ ಸುಖವಿದೆ? ಮನುಷ್ಯ ತನ್ನ ಸಂತತಿಯನ್ನು ಮುಂದುವರಿಸಿಕೊಂಡು ಹೋಗಲಿ ಎಂಬ ಕಾರಣಕ್ಕೆ ಸೃಷ್ಟಿ ನಮ್ಮೆದುರು ಎಸೆದ ಒಂದು ಸಿಹಿತಿಂಡಿಯೇ ಕಾಮ. ಕಾಮದಲ್ಲಿರುವ ಸುಖ, ಸೃಷ್ಟಿಯೆಂಬುದು ತನ್ನ ಚಕ್ರ ಚಲಿಸಲು ಗಂಡು-ಹೆಣ್ಣಿಗೆ ನೀಡಿದ ಒಂದು ಸಣ್ಣ ಬಹುಮಾನವಷ್ಟೇ. ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಈ ಮಾನವ, ಕಾಮದಲ್ಲಿನ ಸುಖದ ರುಚಿ ಅರಿತ ಈ ಮನುಷ್ಯ, ಆ ಸುಖದ ಮೂಲ ಉದ್ದೇಶವನ್ನೇ ಮರೆತು ಸುಖವೇ ಸರ್ವಸ್ವ ಎಂದು ಕಾಮಸುಖದ ಹಿಂದೆ ಬಿದ್ದ. ಆ ಸುಖ ಪಡೆಯಲು ಇರುವ ಅಸ್ವಾಭಾವಿಕ ದಾರಿಗಳನ್ನೂ ಹುಡುಕಿಕೊಂಡ. ಇದೇ ರೀತಿ ಮುಂದುವರಿದರೆ ಅಂತಿಮವಾಗಿ ಒಂದು ದಿನ ಸೃಷ್ಟಿಯಲ್ಲಿ ಕಾಮದ ಮೂಲ ಉದ್ದೇಶವೇ ಮರೆತುಹೋದೀತು.\"\u003c\/p\u003e\n\u003cp data-path-to-node=\"5\"\u003e\u003cb data-path-to-node=\"5\" data-index-in-node=\"0\"\u003e- ಸ್ವಾತಿ ಬೊಂಬಾಟ್\u003c\/b\u003e\u003c\/p\u003e","brand":"M Manohara Pai","offers":[{"title":"Default Title","offer_id":47617982529795,"sku":"HB00005503043","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Swathi-Bombat.jpg?v=1768203568","url":"https:\/\/harivubooks.com\/products\/swathi-bombat-m-manohara-pai-kannada-novel","provider":"Harivu Books","version":"1.0","type":"link"}