{"product_id":"swarna-bettada-rahasya-thriller-book-karthik-hegde-kannada-book","title":"ಸ್ವರ್ಣ ಬೆಟ್ಟದ ರಹಸ್ಯ","description":"\u003cp\u003e\u003cspan\u003eಶರಾವತಿ ಕಣಿವೆಯ ದಟ್ಟಡವಿಯೊಳಗೆ ಅಡಗಿರುವ 'ಸ್ವರ್ಣ ಬೆಟ್ಟ' ನಿಗೂಢತೆಯ ಕೋಟೆಯಾಗಿದೆ. ಸಾವಿರಾರು ವರ್ಷಗಳಿಂದ ನಾಗಸೇನ ಮಹಾರಾಜನ ಅಪಾರ ನಿಧಿಯ ನಂಬಿಕೆ ಇದರ ಸುತ್ತ ಹರಡಿದೆ. ಆದರೆ ಈ ನಿಧಿಯ ಹಾದಿ ಜೀವಂತ ನರಕ. ಬೆಟ್ಟವನ್ನು ತಲುಪಲು ಪ್ರಯತ್ನಿಸಿದವರು ಮರಳಿ ಬಂದಿಲ್ಲ ಎ೦ಬ ಊಹಾಪೋಹಗಳು ಪಾವನೂರು ಗ್ರಾಮವನ್ನು ಆವರಿಸಿವೆ. ಊರಿನ ಜನರಿಗೆ 'ಸ್ವರ್ಣ ಬೆಟ್ಟ' ಕೇವಲ ದೂರದಿಂದ ನೋಡುವ ಒಂದು ಭೀಕರ ದೃಶ್ಯವಷ್ಟೇ.\u003c\/span\u003e\u003cbr\u003e\u003cspan\u003eಬಾಣಸಗೂರಿನ ಬೃಹತ್ ಬಂಡೆಯ ಹಿಂದೆ ಅಡಗಿರುವ ಆ ನಿಧಿದ್ದೀಪವನ್ನು ಅಜ್ಞಾತ ಶಕ್ತಿಗಳು ಕಾಯುತ್ತಿವೆ ಎಂಬುದು ಜನರ ಅಚಲ ನಂಬಿಕೆ. ಬೆಟ್ಟದ ಮೌನವನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ, ಇಲ್ಲಿಯವರೆಗೂ! ಆದರೆ ಆರು ದಿಟ್ಟ ವ್ಯಕ್ತಿಗಳು ಕತ್ತಲೆಯನ್ನು ಸೀಳಲು ಹೊರಟಿದ್ದಾರೆ: ತನಿಖಾ ಪತ್ರಕರ್ತ ಪ್ರದೀಪ್ ಬಾಲಯ್ಯ, ಗಂಭೀರ ಇನ್ಸ್ಪೆಕ್ಟರ್ ಸಮರ್, ಚಾಲಾಕಿ ಕಳ್ಳ ಭಾಸ್ಕರ, ರಹಸ್ಯಮಯಿ ಮೇನಕಾ, ಅರಣ್ಯ ರಕ್ಷಕ ಪ್ರಶಾಂತ ಮತ್ತು ಇತಿಹಾಸಕಾರ ಲಾರೆನ್ಸ್ ಪ್ರತಿಯೊಬ್ಬರಿಗೂ ಒಂದೇ ಗುರಿ – ಬೆಟ್ಟದ ಮೌನವನ್ನು ಭೇದಿಸುವುದು.\u003c\/span\u003e\u003cbr\u003e\u003cspan\u003eಬೆಟ್ಟದ ತುದಿಯವರೆಗೂ ಹತ್ತಿದವರಿಗೆ ಸಿಕ್ಕಿದ್ದೇನು? ಸ್ವರ್ಣಬೆಟ್ಟದಲ್ಲಿ ನಿಧಿಯ ಕಾವಲಿಗೆ ಮಂತ್ರವಾದಿಗಳು ನಿಜಕ್ಕೂ ಇದ್ದಾರೆಯೇ? ರಾಜ ನಾಗಸೇನನ ಮರಣ ಕೇವಲ ದಾಖಲೆಗಳಲ್ಲಿನ ಸತ್ಯವೋ ಅಥವಾ ಕೇಳದ ಕರಾಳ ಕಥೆಯೋ?\u003c\/span\u003e\u003cbr\u003e\u003cspan\u003eಈ ತಂಡ ಸತ್ಯಕ್ಕೆ ಹತ್ತಿರವಾದಷ್ಟೂ, ಅವರ ಜೀವಕ್ಕೆ ಅಪಾಯ ಹತ್ತಿರವಾಗುತ್ತದೆ. 'ಸ್ವರ್ಣ ಬೆಟ್ಟ' ನಿಜಕ್ಕೂ ನಿಧಿಯ ಸ್ಥಳವೋ, ಅಥವಾ ಯಾರೂ ಮರಳಿ ಬಾರದವರ ಗುಪ್ತ ಸಮಾಧಿಯೋ?!\u003c\/span\u003e\u003c\/p\u003e","brand":"Karthik Hegade","offers":[{"title":"Default Title","offer_id":47713382498563,"sku":"HB00006033","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SwarnaBettadaRahasya.webp?v=1770286967","url":"https:\/\/harivubooks.com\/products\/swarna-bettada-rahasya-thriller-book-karthik-hegde-kannada-book","provider":"Harivu Books","version":"1.0","type":"link"}