ಸುಯೋಧನ

ಸುಯೋಧನ

ಮಾರಾಟಗಾರ
ಎಸ್. ವಿ. ಕೃಷ್ಣ ಶರ್ಮ
ಬೆಲೆ
Rs. 88.00
ಕೊಡುಗೆಯ ಬೆಲೆ
Rs. 88.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಕನ್ನಡ ರಂಗಭೂಮಿಯ ಹಿರಿಯ ರಂಗಕರ್ಮಿ, ನಾಟಕಕಾರ, ನಟ ಮತ್ತು ನಿರ್ದೇಶಕರು. ಕಳೆದ ಐದು ದಶಕಗಳಿಂದ ರಂಗಭೂಮಿಯ ನಂಟು. ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ ಅವರು ರಚಿಸಿರುವ ಅನೇಕ ನಾಟಕಗಳಲ್ಲಿ ಜನಪ್ರಿಯ ನಾಟಕಗಳಾದ ಸೊಹ್ರಾಬ್ - ರುಸ್ತುಂ, ಸುಯೋಧನ, ಪೌಲಸ್ಥ್ಯನ ಪ್ರಣಯ ಕಥೆ, ಸತ್ಯಂ ವಧ ರಂಗದ ಮೇಲೆ ಅನೇಕ ಪ್ರದರ್ಶನಗಳನ್ನು ಕಂಡು ಜನಮೆಚ್ಚುಗೆ ಗಳಿಸಿವೆ.

ಆಕಾಶವಾಣಿ, ದೂರದರ್ಶನಗಳಲ್ಲಿ 'ಮಾನ್ಯತೆ' ಪಡೆದ ಕಲಾವಿದರಾಗಿ ಹಲವಾರು ನಾಟಕಗಳನ್ನು ನಿರ್ದೇಶಿಸಿ, ಅಭಿನಯಿಸಿರುವ ಅವರು ರಚಿಸಿದ ಅನೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ ಹಾಗೂ ದೂರದರ್ಶನದಲ್ಲಿ ಪ್ರದರ್ಶಿತಗೊಂಡಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಇಂಜಿನಿಯರ್ - ವಿಜ್ಞಾನಿಯಾಗಿ ಸೇವೆ ಸಲ್ಲಿಸಿರುವ ಕೃಷ್ಣ ಶರ್ಮ ರಂಗಭೂಮಿಯಲ್ಲಿ ಇಂದಿಗೂ ಕ್ರಿಯಾಶೀಲ, ತಮ್ಮದೇ ಆದ `ಸಂಧ್ಯಾ ಕಲಾವಿದರು' ಹವ್ಯಾಸಿ ನಾಟಕ ತಂಡದ ಕಲಾವಿದರಿಗೆ ಮಾರ್ಗದರ್ಶಕರು. ಕಳೆದ ನಲವತ್ತೈದು ವರ್ಷಗಳಿಂದ ನಿರಂತರವಾಗಿ ನಾಟಕಗಳ ನಿರ್ದೇಶನ ಮತ್ತು ಅಭಿನಯಗಳಲ್ಲಿ ತೊಡಗಿ ಕೊಂಡಿದ್ದಾರೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)